Alia Bhatt : ರಣಥಂಬೋರ್ ನಲ್ಲಿ ರಣಬೀರ್ – ಆಲಿಯಾ ನಿಶ್ಚಿತಾರ್ಥ..? ಹೊರಬಿದ್ದ ಸಂಗತಿ ಇಷ್ಟು..!

ರಣಬೀರ್ ಆಲಿಯಾ  ನಿಶ್ಚಿತಾರ್ಥ ರಣಥಂಬೋರ್ ನಲ್ಲಿ ನಡೆಯಲಿದೆ ಎಂಬ ಸುದ್ದಿ ಈಗ ಎಲ್ಲೆಡೆ ಕೇಳಿಬರುತ್ತಿದೆ. ರಿಂಗ್ ಕೂಡಾ ಬದಲಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.  ರಣಬೀರ್ ಮತ್ತು ಆಲಿಯಾ ಭಟ್ ಕುಟುಂಬ ಸದಸ್ಯರು ಕೂಡಾ ರಣಥಂಬೋರ್ ನಲ್ಲಿ ಕಾಣಿಸಿಕೊಂಡಿರುವುದು ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

Written by - Zee Kannada News Desk | Last Updated : Dec 30, 2020, 03:14 PM IST
  • ರಣಥಂಬೋರ್ ನಲ್ಲಿ ಕಾಣಿಸಿಕೊಂಡ ರಣಬೀರ್ ಆಲಿಯಾ ಪರಿವಾರ
  • ರಣಥಂಬೋರ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಗೆ ಸಾಕಷ್ಟು ರೆಕ್ಕೆ ಪುಕ್ಕ
  • ರಣವೀರ್, ರಣಬೀರ್ ಜೊತೆಗಿನ ಸೆಲ್ಫಿ ಶೇರ್ ಮಾಡಿದ ನೀತು ಕಪೂರ್
Alia Bhatt : ರಣಥಂಬೋರ್ ನಲ್ಲಿ ರಣಬೀರ್ – ಆಲಿಯಾ ನಿಶ್ಚಿತಾರ್ಥ..?  ಹೊರಬಿದ್ದ ಸಂಗತಿ ಇಷ್ಟು..! title=
ರಣಥಂಬೋರ್ ನಲ್ಲಿ ನಡೆಯಲಿದೆ ರಣಬೀರ್ – ಆಲಿಯಾ ನಿಶ್ಚಿತಾರ್ಥ (filephotoe)

ನವದೆಹಲಿ : ಬಾಲಿವುಡ್ ಸೂಪರ್ ಜೋಡಿಗಳಾದ ರಣಬೀರ್ ಕಪೂರ್  ಮತ್ತು ಆಲಿಯಾ  ಭಟ್ (Alia Bhatt )ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಈಗ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ರಣಬೀರ್-ಆಲಿಯಾ ಜೋಡಿ ಜೈಪುರ ವಿಮಾನ ನಿಲ್ದಾಣದಲ್ಲಿ (Jaipur airport) ಮಂಗಳವಾರ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ರಣಬೀರ್ ತಾಯಿ ನೀತು ಕಪೂರ್ (Neetu Kapoor), ಸಹೋದರಿ ರಿಧಿಮಾ ಕಪೂರ್ ಕೂಡಾ ಕಾಣಿಸಿಕೊಂಡಿದ್ದಾರೆ. ರಣಬೀರ್ ಆಲಿಯಾ ಜೋಡಿ ಹೊಸವರ್ಷಾಚರಣೆಗಾಗಿ ರಣಥಂಬೋರ್ ನಲ್ಲಿ  ತಂಗಲಿದ್ದು, ಅಲ್ಲಿಯೇ ನಿಶ್ಚಿತಾರ್ಥದ ರಿಂಗ್ ಕೂಡಾ ಬದಲಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.  

ಈ ನಡುವೆ, ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ದಂಪತಿ ಕೂಡಾ ರಣಥಂಬೋರ್ ಗೆ ಮಂಗಳವಾರ ಆಗಮಿಸಿದ್ದಾರೆ. ಎಲ್ಲರೂ ರಣಥಂಬೋರ್ ನಲ್ಲಿ ಜೊತೆಯಾಗಿದ್ದಾರೆ. ಜೊತೆಗೆ ರಣವೀರ್ ಸಿಂಗ್ ನೀತು ಕಪೂರ್ ಮತ್ತು ರಣಬೀರ್ ಕಪೂರ್ (Ranbir Kapoor) ಜೊತೆಗೆ ತೆಗೆದ ಸೆಲ್ಫಿ ಒಂದು ವೈರಲ್ ಆಗಿದೆ. ದೀಪಿಕಾ ಆಗಲಿ, ಆಲಿಯಾ  ಆಗಲಿ ಈ ಸೆಲ್ಫಿಯಲ್ಲಿ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.  ಈ ಸೆಲ್ಫಿಯನ್ನು ನೀತು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ALSO READ: ಅಲಿಯಾ ಭಟ್ ಜೊತೆಗಿನ ಡೇಟಿಂಗ್ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು ಗೊತ್ತೆ?

ಆಲಿಯಾ ಪರಿವಾರದ ಕಡೆಯಿಂದ ತಂದೆ ಮಹೇಶ್ ಭಟ್ (Mahesh Bhatt), ತಾಯಿ ಸೋನಿ ರಾಜ್ಧಾನ್ (Soni Razdan) ಹಾಗು ಸಹೋದರಿ ಶಹೀನ್ ಭಟ್ (Shaheen Bhatt) ಜೈಪುರಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ಎರಡೂ ಪರಿವಾರದ ಸದಸ್ಯರ ಉಪಸ್ಥಿತಿಯಲ್ಲಿ ರಣಥಂಬೋರ್ ನಲ್ಲಿ ಈ ಪ್ರೇಮ ಪಕ್ಷಿಗಳು ಉಂಗುರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವಿಷಯದ ಬಗ್ಗೆ ಇದುವರೆಗೆ ಅಧಿಕೃತವಾಗಿ ಪರಿವಾರದ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ನಿಶ್ಚಿತಾರ್ಥ ಅಥವಾ ವಿವಾಹ ದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. 

ರಣಬೀರ್ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಲಿಯಾ  (Alia Bhat) ಮತ್ತು  ತಮ್ಮ ವಿವಾಹದ ಬಗ್ಗೆ ಸುಳಿವನ್ನಿತ್ತಿದ್ದರು. ಕೋವಿಡ್ (COVID-19) ಕಾರಣದಿಂದ ಮದುವೆ ವಿಳಂಬವಾಗುತ್ತಿದೆ ಎಂದು ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News