ಬೆಂಗಳೂರು: ಕವಿತಾ ಲಂಕೇಶ್ ಅವರ ನಿರ್ದೇಶನದಲ್ಲಿ  ಬಹಳ ದಿನಗಳ ನಂತರ ತೆರೆಗೆ ಬರುತ್ತಿರುವ 'ಸಮರ ಹಾಲಿಡೆಸ್' ಚಿತ್ರದ ಟ್ರೈಲರ್  ಈಗ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಚಿತ್ರ ಪ್ರಮುಖವಾಗಿ ನಾಲ್ವರು ಮಕ್ಕಳನ್ನು ಒಳಗೊಂಡ ಚಿತ್ರವಾಗಿದ್ದು, ಮಕ್ಕಳು ಹಾಲಿಡೆಸ್ ಹೋದಾಗ ಅಲ್ಲಿ ನಡೆಯುವ ಮಕ್ಕಳ ಮಧ್ಯ ನಡೆಯುವ ಘಟನೆಗಳನ್ನೇ ಈ ಚಿತ್ರದ ಮುಖ್ಯ ಕಥಾ ಹಂದರವನ್ನಾಗಿ ಹೆಣೆಯಲಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇಷಾ ಲಂಕೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಸುಂದರ ರಮ್ಯ ತಾಣಗಳಲ್ಲಿ ಚಿತ್ರಿಕರಿಸಲಾಗಿದೆ. ಇದೆ ಮೊದಲ ಬಾರಿಗೆ ಮಕ್ಕಳ ಕುರಿತಾಗಿ ಭಾರತದಲ್ಲಿ ಇಂಗ್ಲಿಷ್ ಭಾಷೆ ಯಲ್ಲಿ ತಯಾರಾದ ಚಿತ್ರ ಎನ್ನುವ ಖ್ಯಾತಿಯನ್ನು ಈ ಚಿತ್ರ ಪಡೆದಿದೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಇಷಾ ಲಂಕೇಶ್, ಸಮರಜಿತ್ ಲಂಕೇಶ್, ಸೋನಿಯಾ ಹೆಗಡೆ, ಅಂಶ ಅಂಗ್ರೇ, ಪ್ರಕಾಶ್ ರೈ, ಗೌರಿ ಲಂಕೇಶ್, ಮತ್ತು ಸುಮನ್ ನಾಗರ್ಕರ್ ಅವರು ನಟಿಸಿದ್ದಾರೆ.


ಕನ್ನಡದಲ್ಲಿ ಕವಿತಾ ಲಂಕೇಶ್ ಅವರು ಪ್ರಮುಖವಾಗಿ ತಮ್ಮ ಸೃಜನಾತ್ಮಕ ಚಿತ್ರಗಳಿಗೆ ಹೆಸರಾದವರು. 1999 ರಲ್ಲಿ ತಮ್ಮ ಮೊದಲ ಯತ್ನದಲ್ಲೇ ಪಿ ಲಂಕೇಶ್ ಅವರ ಅಕ್ಕ ಕಾದಂಬರಿ ಆಧಾರಿತ ಚಿತ್ರ 'ದೇವೀರಿ'ಗೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ದೊರಕಿದ್ದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಈ ಚಿತ್ರ ಹೆಸರು ಮಾಡಿತ್ತು. ಅದೇ ರೀತಿಯಾಗಿ 2003 ರಲ್ಲಿ ತೆರೆಗೆ ಬಂದ ಪ್ರೀತಿ ಪ್ರೇಮ ಪ್ರಣಯ ಚಿತ್ರಕ್ಕೆ ಪ್ರಾದೇಶಿಕ ಚಿತ್ರದ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.