Sunny Deol viral video : ಬಾಲಿವುಡ್‌ ಖ್ಯಾತ ನಟ ಸನ್ನಿ ಡಿಯೋಲ್‌ ನಡುರಾತ್ತಿ ದೆಹಲಿ ರಸ್ತೆಯಲ್ಲಿ ತೂರಾಡುತ್ತ ಒಂಟಿಯಾಗಿ ತಿರುಗುತ್ತಿದ್ದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಡಿಯೋಲ್‌ ಮದ್ಯಪಾನ ಮಾಡಿದ್ರಾ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ, ತೂರಾಡುತ್ತಿರುವ ದೃಶ್ಯ ನೋಡಿದ್ರೆ ಮದ್ಯ ಸೇವನೆ ಮಾಡಿದಂತಿದೆ.


COMMERCIAL BREAK
SCROLL TO CONTINUE READING

ಹೌದು.. ಸನ್ನಿ ಡಿಯೋಲ್ ಇತ್ತೀಚೆಗೆ 'ಗದರ್ 2' ಬ್ಲಾಕ್‌ಬಸ್ಟರ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಮಿಂಚಿದರು. ಗದರ್‌ 2 ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಮಧ್ಯರಾತ್ರಿ ಮುಂಬೈನ ಬೀದಿಗಳಲ್ಲಿ ಸನ್ನಿ ತೂರಾಡುತ್ತ ತಿರುಗುತ್ತಿರುವುದನ್ನು ಕಾಣಬಹುದು. 


ಇದನ್ನೂ ಓದಿ: ಬೆಂಗಳೂರಿಗೆ ಕಾಲಿಟ್ಟ ಜಪಾನೀಸ್ ಫಿಲ್ಮ್ ಫೆಸ್ಟಿವಲ್


ವೈರಲ್‌ ವಿಡಿಯೋದಲ್ಲಿ ಸನ್ನಿ ಪ್ರಜ್ಞೆಇಲ್ಲದವರಂತೆ ನಡುರಸ್ತೆಯಲ್ಲಿ ತೂರಾಡುತ್ತಿರುವುದನ್ನು ಕಾಣಬಹದು. ಆಗ ಸ್ಥಳಕ್ಕೆ ಬರುವ ಆಟೋರಿಕ್ಷಾ ಚಾಲಕನ ಅವರನ್ನು ಆಟೋದಲ್ಲಿ ಕೈಹಿಡಿದು ಕೂರಿಸಿ ಕರೆದುಕೊಂಡು ಹೋಗುವ ದೃಶ್ಯ ವಿಡಿಯೋದಲ್ಲಿದೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೆ ನಟ ಕುಡಿದಿದ್ದ ಎಂಬ ಊಹಾಪೋಹಗಳು ಹುಟ್ಟಿಕೊಂಡಿವೆ.


ಅಲ್ಲದೆ, ಈ ವೀಡಿಯೋಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವು ಬಳಕೆದಾರರ ಪ್ರಕಾರ, ಈ ವಿಡಿಯೋ ಸನ್ನಿಯ ಮುಂಬರುವ ಚಿತ್ರ 'ಸಫರ್'ನ ಚಿತ್ರೀಕರಣ ದೃಶ್ಯ ಅಂತ ವಾದಿಸಿದ್ದಾರೆ. ಎನ್ನೂ ಕೆಲವರು ಗದರ್‌ 2 ಯಶಸ್ವಿಯಾಗಿದ್ದರ ನಶೆ ಅಂತ ಟೀಕೆ ಮಾಡಿದ್ದಾರೆ. ಸತ್ಯ ಅಂದ್ರೆ ಇದು ಸಫರ್‌ ಚಿತ್ರದ ಚಿತ್ರೀಕರಣದ ದೃಶ್ಯವಾಗಿದೆ.


ಇದನ್ನೂ ಓದಿ: 38 ರಿಂದ 18ರ ವಯಸ್ಸಿಗೆ ಕಾಲಿಟ್ರಾ ಜ್ಯೋತಿ..! ಅಬ್ಬಬ್ಬಾ.. ಫೋಟೋಸ್‌ ನೋಡಿ ಗೊತ್ತಾಗುತ್ತೆ..


ಸಧ್ಯ ಸನ್ನಿ ಶಶಾಂಕ್ ಉದ್ರಾಪುರಕರ್ ನಿರ್ದೇಶನದ ಸಫರ್ ಚಿತ್ರೀಕರಣದಲ್ಲಿದ್ದಾರೆ. ಅಲ್ಲದೆ, ಅಮೀರ್ ಖಾನ್ ನಿರ್ಮಾಣದ ರಾಜ್‌ಕುಮಾರ್ ಸಂತೋಷಿ ಅವರ 'ಲಾಹೋರ್ 1947' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, 'ಬಾರ್ಡರ್ 2' ಚಿತ್ರಕ್ಕಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ.. ಇದಲ್ಲದೆ, 'ಅಪ್ನೆ' ಚಿತ್ರದ ಸೀಕ್ವೆಲ್ ಕೂಡ ಸನ್ನಿ ಲಿಸ್ಟ್‌ನಲ್ಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.