ಬೆಂಗಳೂರಿಗೆ ಕಾಲಿಟ್ಟ ಜಪಾನೀಸ್ ಫಿಲ್ಮ್ ಫೆಸ್ಟಿವಲ್

Japanese Film Festival: ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾ ದೆಹಲಿ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಯಶಸ್ವಿ ಪ್ರದರ್ಶನದ ನಂತರ ಇದೀಗ ಮುಂಬೈ ಮತ್ತು ಬೆಂಗಳೂರಿನಲ್ಲಿ ಆರನೇ ಆವೃತ್ತಿಯ ಪ್ರದರ್ಶನ ನಡೆಸಲು ಸಿದ್ಧವಾಗಿದೆ.

Written by - Zee Kannada News Desk | Last Updated : Dec 6, 2023, 06:22 PM IST
  • ಮುಂಬೈ, ಬೆಂಗಳೂರಿಗೆ ಕಾಲಿಟ್ಟ ಜಪಾನೀಸ್ ಫಿಲ್ಮ್ ಫೆಸ್ಟಿವಲ್
  • ಡಿಸೆಂಬರ್ 7ರಿಂದ 10 ರವರೆಗೆ ಬೆಂಗಳೂರಿನಲ್ಲಿ ಜಪಾನಿ ಚಿತ್ರಗಳ ಪ್ರದರ್ಶನ
  • ಭಾರತದ 7 ನಗರಗಳಲ್ಲಿ ಚಲನಚಿತ್ರೋತ್ಸವ ಆಯೋಜನೆ
ಬೆಂಗಳೂರಿಗೆ ಕಾಲಿಟ್ಟ ಜಪಾನೀಸ್ ಫಿಲ್ಮ್ ಫೆಸ್ಟಿವಲ್ title=
Japanese Film Festival

Japanese Film Festival: ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾ ದೆಹಲಿ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಯಶಸ್ವಿ ಪ್ರದರ್ಶನದ ನಂತರ ಇದೀಗ ಮುಂಬೈ ಮತ್ತು ಬೆಂಗಳೂರಿನಲ್ಲಿ ಆರನೇ ಆವೃತ್ತಿಯ ಪ್ರದರ್ಶನ ನಡೆಸಲು ಸಿದ್ಧವಾಗಿದೆ. 2023 ಅಕ್ಟೋಬರ್ ನಿಂದ 2024ರ ಜನವರಿ ತಿಂಗಳಲ್ಲಿ ನಿಗಧಿಯಾಗಿರುವ ನಾಲ್ಕು ತಿಂಗಳ ಅವಧಿಯ ಸಿನಿಮಾ ಉತ್ಸವ ಭಾರತದ 7 ನಗರಗಳಲ್ಲಿ ನಡೆಯುತ್ತಿದೆ. 

ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾದ ಆರನೇ ಆವೃತ್ತಿಯನ್ನು ಜಪಾನ್ ಫೌಂಡೇಶನ್ ನವದೆಹಲಿಯಲ್ಲಿ PVR INOX ಸಹಯೋಗದೊಂದಿಗೆ ಅಕ್ಟೋಬರ್ 12ರಿಂದ 15ರವರೆಗೆ ಆಯೋಜಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಜಪಾನ್ ಮಾಹಿತಿ ಕೇಂದ್ರದ ನಿರ್ದೇಶಕರಾದ ಕೊಜಿ ಯೋಶೀದಾ, ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ ಮತ್ತು ಜಪಾನ್ ಫೌಂಡೇಶನ್ ನವದೆಹಲಿಯ ಮಹಾನಿರ್ದೇಶಕ ಕೊಜಿ ಸಾಟೊ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಪ್ರಮುಖ ಗಣ್ಯರು, ಚಲನಚಿತ್ರ ವಿಮರ್ಶಕರು, ಜಪಾನ್ ಫೌಂಡೇಶನ್ ಮತ್ತು ಜಪಾನ್ ರಾಯಭಾರ ಕಚೇರಿ ಸದಸ್ಯರು ಭಾಗವಹಿಸಿದ್ದರು. ದೆಹಲಿ ಅನಿಮೆ ಕ್ಲಬ್ ಮತ್ತು ದೆಹಲಿ ಫಿಲ್ಮ್ ಕ್ಲಬ್ ನ ಸದಸ್ಯರೊಂದಿಗೆ ಪ್ರಮುಖರು ಮತ್ತು ದೆಹಲಿ ಮೂಲದ ಕಾಸ್ಪ್ಲೇಯರ್ ಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : 

ದೆಹಲಿಯ ನಂತರ, ಜಪಾನೀಸ್ ಚಲನಚಿತ್ರೋತ್ಸವವನ್ನು ನವೆಂಬರ್ 2ರಿಂದ 5ರವರೆಗೆ ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಆಯೋಜಿಸಲಾಯಿತು. ಉತ್ತಮ ಯಶಸ್ಸು ಮತ್ತು ಪ್ರತಿಕ್ರಿಯೆ ಗಳಿಸಿತು. ಕಾರ್ಯಕ್ರಮದಲ್ಲಿ ಚೆನ್ನೈನಲ್ಲಿರುವ ಜಪಾನ್ ನ ಕಾನ್ಸುಲ್-ಜನರಲ್ ಸೇರಿದಂತೆ ಗಮನಾರ್ಹ ಘಟಕಗಳು ಮತ್ತು ಹೈದರಾಬಾದ್ ಅನಿಮೆ ಕ್ಲಬ್ ನಂತಹ ಜನಪ್ರಿಯ ತಂಡಗಳ ಸದಸ್ಯರು ಭಾಗವಹಿಸಿದ್ದರು.

ಮೂರು ನಗರಗಳಲ್ಲಿ ಯಶಸ್ವಿ ಪ್ರದರ್ಶನಗಳ ಬಳಿಕ ಜಪಾನ್ ಫೌಂಡೇಶನ್ ಇದೀಗ ಡಿಸೆಂಬರ್ 7ರಿಂದ 10 ರವರೆಗೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಜಪಾನೀಸ್ ಚಲನಚಿತ್ರೋತ್ಸವಕ್ಕೆ ಸಿದ್ಧವಾಗುತ್ತಿದೆ. ಮುಂಬೈನ ಅಂಧೇರಿ ವೆಸ್ಟ್ ನಲ್ಲಿರುವ ಇನ್ಫಿನಿಟಿ ಮಾಲ್ ನ ಪಿವಿಆರ್ ಐಕಾನ್ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್ ನ INOX ನಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ.

ಈ ವರ್ಷದ ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾದ ಪ್ರಮುಖ ಅಂಶವೆಂದರೆ ಪ್ರಪಂಚದ ಜನಪ್ರಿಯ ಅನಿಮೆ ಚಿತ್ರ ‘ಡಿಟೆಕ್ಟಿವ್ ಕಾನನ್ ’ ಮತ್ತು 1979 ರಲ್ಲಿ ಚಲನಚಿತ್ರ ನಿರ್ಮಾಪಕ ಹಯಾವೊ ಮಿಯಾಜಾಕಿ ನಿರ್ದೇಶಿಸಿದ ಮೊದಲ ಅನಿಮೇಟೆಡ್ ಚಲನಚಿತ್ರ 4K  ಮರುನಿರ್ಮಾಣ ಆವೃತ್ತಿಯ ‘ಲುಪಿನ್ ದಿ 3rd: ದಿ ಕ್ಯಾಸ್ಟಲ್ ಆಫ್ ಕ್ಯಾಗ್ಲಿಸ್ಟ್ರೋ’.  JFF ನ ಆರನೇ ಆವೃತ್ತಿಯು ‘ಎ ಮ್ಯಾನ್, ಅನಿಮೆ ಸುಪ್ರಿಮೆಸಿ, ಇಂಟಾಲರೆನ್ಸ್, ಮಂಡೇಸ್: ಸೀ ಯು ದಿಸ್ ವೀಕ್, ಫಾದರ್ ಆಫ್ ದಿ ಮಿಲ್ಕಿ ವೇ ರೈಲ್ರೋಡ್, ಡಿಟೆಕ್ಟಿವ್ ಕ್ಯಾನಾನ್: ಎಪಿಸೋಡ್ ಒನ್, ಡಿಟೆಕ್ಟಿವ್ ಕ್ಯಾನಾನ್ ದ ಮೂವಿ: ಕ್ರಾಸ್ ರೋಡ್ ಇನ್ ದ ಏನ್ಶಿಯೆಂಟ್ ಕ್ಯಾಪಿಟಲ್, ವಿ ಮೇಡ್ ಎ ಬ್ಯೂಟಿಫುಲ್ ಬುಕೆಟೆ, ಡಿಟೆಕ್ಟಿವ್ ಕ್ಯಾನನ್ ತಹೆ ಮೂವಿ: ದಿ ಲಾಸ್ಟ್ ವಿಝಾರ್ಡ್ ಆಫ್ ದಿ ಸೆಂಚುರಿ, ಹಿರೊಕಾಜು ಕೊರ್-ಎಡಾ ಅವರ ಇತ್ತೀಚಿನ ಪ್ರಶಸ್ತಿ ವಿಜೇತ ಚಿತ್ರ ‘ಮಾನ್ಸ್ಟರ್’ ಪ್ರದರ್ಶನಗೊಳ್ಳಲಿವೆ.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಜಪಾನ್ ಫೌಂಡೇಶನ್ ನವದೆಹಲಿಯ ಡೈರೆಕ್ಟರ್ ಜನರಲ್ ಕೋಜಿ ಸಾಟೊ, ‘2017ರಲ್ಲಿ ಪ್ರಾರಂಭವಾದ JFF ಈಗ ಅದರ ಆರನೇ ಆವೃತ್ತಿಯಲ್ಲಿದ್ದು, ಭಾರತದ ಜನರಿಗೆ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ, ಜನರ ಮೆಚ್ಚುಗೆ ಪಡೆದಿರುವುದಕ್ಕೆ ಸಂತೋಷವಾಗಿದೆ. ಭಾರತದಲ್ಲಿ ಆನಿಮೇಟೆಡ್ ತರಹದ ಚಿತ್ರಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಈ ಚಲನಚಿತ್ರೋತ್ಸವದ ಮೂಲಕ ಜನರು ಇತ್ತೀಚಿನ ಜಪಾನೀಸ್ ಚಲನಚಿತ್ರಗಳ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : 

ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯಲ್ಲಿರುವ ಜಪಾನ್ ಮಾಹಿತಿ ಕೇಂದ್ರದ ನಿರ್ದೇಶಕ ಕೋಜಿ ಯೋಶಿಡಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ ಜಪಾನೀಸ್ ಚಲನಚಿತ್ರೋತ್ಸವದ ಆರನೇ ಆವೃತ್ತಿಯನ್ನು ಭಾರತದಲ್ಲಿ ಯಶಸ್ವಿಯಾಗಿ ನಡೆಸಲು ಜಪಾನ್ ಫೌಂಡೇಶನ್ ಅನ್ನು ನಾವು ಅಭಿನಂದಿಸುತ್ತೇವೆ. ಎರಡೂ ದೇಶಗಳ ನಡುವಿನ ಸಂಬಂಧ ಚಲನಚಿತ್ರ ಮಾಧ್ಯಮದ ಮೂಲಕ ಬೆಳೆಯುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿದರು.

ಮುಂಬೈ ಮತ್ತು ಬೆಂಗಳೂರು ಆವೃತ್ತಿಯ ನಂತರ, JFF ಭಾರತದ ಕೊನೆಯ ಹಂತದ ಚಲನಚಿತ್ರೋತ್ಸವವನ್ನು ಕೋಲ್ಕತ್ತಾ ಮತ್ತು ಪುಣೆಯಲ್ಲಿ 2024ರ ಜನವರಿ 18ರಿಂದ 21ರವರೆಗೆ ನಡೆಸಲಿದೆ. ಕೋಲ್ಕತ್ತಾ ಸೌತ್ ಸಿಟಿ INOX ಮತ್ತು ಪುಣೆಯ ಪೆವಿಲಿಯನ್ ಮಾಲ್ ನ PVR ICON ನಲ್ಲಿ ಪ್ರದರ್ಶನ ನಡೆಸಲಿದೆ.

PVR INOX ಲಿಮಿಟೆಡ್ ನ ಸಹ-ಸಿಇಒ ಗೌತಮ್ ದತ್ತಾ, ನಾವು ವಾರ್ಷಿಕ ಜಪಾನೀಸ್ ಚಲನಚಿತ್ರೋತ್ಸವದ 6ನೇ ಆವೃತ್ತಿಯನ್ನು ಮತ್ತೊಮ್ಮೆ ಆಯೋಜಿಸಲು ತುಂಬಾ ಸಂತೋಷಪಡುತ್ತೇವೆ. ಈಗ PVR INOX ನ ವಿಲೀನ ಘಟಕವಾಗಿ ಭಾರತದಲ್ಲಿ ಅತಿದೊಡ್ಡ ಮತ್ತು  ಪ್ರೀಮಿಯಂ ಚಲನಚಿತ್ರ ಪ್ರದರ್ಶಕವಾಗಿದೆ. 2017 ರಿಂದ ಜಪಾನ್ ಫೌಂಡೇಶನ್ ಮತ್ತು ಪಿವಿಆರ್ ಸುಧೀರ್ಘ ಸಂಬಂಧ ಹಂಚಿಕೊಂಡಿದೆ. ಜಪಾನ್ ಫೌಂಡೇಶನ್ ನ  ಹೊಸ ಉದಯೋನ್ಮುಖ ಚಲನಚಿತ್ರೋತ್ಸವಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಮತ್ತು ಭಾರತೀಯ ಚಿತ್ರರಂಗದ ದಂತಕಥೆಗಳನ್ನು ಆಧರಿಸಿದ ನಮ್ಮ ಇತ್ತೀಚಿನ ಚಲನಚಿತ್ರೋತ್ಸವಗಳು ದೊಡ್ಡ ಯಶಸ್ಸು ಕಂಡಿವೆ’ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News