Sunny Leone: ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಆಕೆಯ ಹೆಸರು ಮುಂಚೂಣಿಗೆ ಬಂದಿದ್ದು ಆಕೆಗೂ ಅದಕ್ಕೂ ಸಂಬಂಧವೇ ಇಲ್ಲ... ಕಾರಣ.. ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಆಕೆಯ ಹೆಸರು ಮಾತ್ರವಲ್ಲದೆ ಆಕೆಯ ಫೋಟೋಗಳೂ ಇವೆ.  


COMMERCIAL BREAK
SCROLL TO CONTINUE READING

ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಹೆಸರು ಮತ್ತು ಫೋಟೋಗಳು ಹೇಗೆ ಕಾಣಿಸಿಕೊಂಡವು? ಅವಳು ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವೇ ಇಲ್ಲ... ಹಾಗಾದರೆ ನಟಿಯ ಹೆಸರು ಮತ್ತು ಫೋಟೋ ಇರುವ ಅಡ್ಮಿಟ್ ಕಾರ್ಡ್ ಹೇಗೆ ಮಾಡಲಾಗಿತ್ತು? ಯುಪಿ ಪೊಲೀಸ್ ಸೈಬರ್ ಸೆಲ್ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ-ʻರಶ್ಮಿಕಾ ಮಂದಣ್ಣ ಪ್ರಾಣಾಪಾಯದಿಂದ ಪಾರು!ʼ ಆತಂಕ ಹುಟ್ಟಿಸಿರುವ ಖ್ಯಾತ ನಟಿಯ ಪೋಸ್ಟ್!!


ಯುಪಿ ಪೊಲೀಸ್ ನೇಮಕಾತಿ ಮಂಡಳಿಯು ಫೆಬ್ರವರಿ 17 ರಂದು ಉತ್ತರ ಪ್ರದೇಶದಲ್ಲಿ 60,244 ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಿದೆ. 48 ಲಕ್ಷ ಮಂದಿ ಈ ಪರೀಕ್ಷೆ ಬರೆದಿದ್ದಾರೆ. ಆದರೆ, ಕನೌಜ್ ಜಿಲ್ಲೆಯ ಶ್ರೀ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಒಬ್ಬರು ಪರೀಕ್ಷೆ ಬರೆಯಲು ಬಂದಿಲ್ಲ ಎಂದು ತಿಳಿದುಬಂದಿದೆ. ಏಕೆ ಎಂದು ಪರಿಶೀಲಿಸಿದಾಗ ಆ ಸೀಟಿನ ರೋಲ್ ನಂಬರ್ ಮೇಲೆ ಸನ್ನಿ ಲಿಯೋನ್ ಎಂದು ಬರೆಯಲಾಗಿತ್ತು. ಈ ಕಾರ್ಡ್ ಅನ್ನು ಯುಪಿ ಪೊಲೀಸರಿಗೆ ನೀಡಲಾಗಿದೆ..


ಇದನ್ನೂ ಓದಿ-Bollywood Actress: 19 ಸಿನಿಮಾ ಫ್ಲಾಪ್‌.. 4000 ಕೋಟಿ ಗಳಿಕೆ, ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ.!


ಈ ಕುರಿತು ಕನೌಜ್ ಎಎಸ್ಪಿ ಅಮಿತ್ ಕುಮಾರ್ ಆನಂದ್ ಮಾತನಾಡಿದ್ದು.. “ನಾವು ತನಿಖೆ ನಡೆಸುತ್ತಿದ್ದೇವೆ. ಕಾಸ್ಗಂಜ್ ಜಿಲ್ಲೆಯಿಂದ ಆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಅಲ್ಲಿನ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು.. ಮೂಲ ಪ್ರವೇಶ ಪತ್ರವನ್ನು ಹೇಗೆ ನೀಡಲಾಗಿದೆ ಎಂದು ಯುಪಿ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ" ಎಂದು ತಿಳಿಸಿದ್ದಾರೆ.


ಕೆನಡಾದಲ್ಲಿ ಸಿಖ್ ಪೋಷಕರಿಗೆ ಜನಿಸಿದ ಸನ್ನಿ ಲಿಯೋನ್ ಅಮೆರಿಕದ ಅಡಲ್ಟ್‌ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದಾರೆ. ನಂತರ ಭಾರತಕ್ಕೆ ಬಂದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದರ ನಂತರ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.