ಮುಂಬೈ: ಅಭಿಮಾನಗಳ ಮನದಲ್ಲಿ ತಲೈವಾ ಎಂದೇ ಖ್ಯಾತಿ ಪಡೆದಿರುವ ರಜನಿ ಕಾಂತ್ ಇಂದು 67 ನೇಯ ಹುಟ್ಟುಹಬ್ಬಕ್ಕೆ ಕಾಲಿರಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವದಾದ್ಯಂತ  ತಮ್ಮ ಅಭಿಮಾನಿ ಬಳಗ ಹೊಂದಿರುವ ರಜನಿ ಭಾರತೀಯ ಸಿನಿಮಾರಂಗದಲ್ಲಿ ಅತಿ ದೊಡ್ಡ ಹೆಸರು, ತಮ್ಮ ನಟನಾ ಶೈಲಿಯಿಂದಲೇ ಬೇರೆ ಯಾವ ನಟನೂ ಹೊಂದಿರದ ಅಭಿಮಾನಿ ಸಂಘಗಳನ್ನು ರಜನಿಕಾಂತ್ ಹೊಂದಿದ್ದಾರೆ. ಇವರ ಚಿತ್ರ ಬಿಡುಗಡೆಗೊಂಡಾಗ ತಮಿಳುನಾಡಿನಲ್ಲಿ  ಸ್ವಯಂಘೋಷಿತ ರಜೆಯನ್ನು ಘೋಷಿಸಿಸಲಾಗುತ್ತದೆ.


1950  ಡಿಸೆಂಬರ್ 12 ರಂದು  ಕರ್ನಾಟಕದ  ಬೆಂಗಳೂರಿನಲ್ಲಿ ಜನಿಸಿದ ರಜನಿ, ಬೆಂಗಳೂರಿನ ಸಾರಿಗೆ ಸಂಸ್ಥೆಯೊಂದರಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದಾಗ ಇವರ ನಟನಾ ಕೌಶಲ್ಯ ಬೆಳಕಿಗೆ ಬಂದಿತು. ಅವರು 1973ರಲ್ಲಿ ಮದ್ರಾಸ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಗೆ ಸಂಬಂಧಪಟ್ಟ ಡಿಪ್ಲೋಮಾ ಶಿಕ್ಷಣವನ್ನು ಪಡೆದರು. ಮುಂದೆ ದಕ್ಷಿಣ ಭಾರತದ  ಖ್ಯಾತ ನಿರ್ದೇಶಕ ಕೆ ಬಾಲಚಂದರ್ ರವರ  ತಮಿಳಿನ ಅಪೂರ್ವರಂಗಗಳ್ ಎನ್ನುವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಅಂದಿನಿಂದ ಭಾರತೀಯ ಸಿನಿಮಾ ರಂಗದ ಅಧಿಪತಿಯಾಗಿ ಮೆರೆದರು. ಕನ್ನಡದಲ್ಲಿ ಸೋದರ ಸವಾಲ್ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಏಷ್ಯಾದಲ್ಲಿ ಜಾಕಿಜಾನ್ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿಯೂ ಇವರ ಹೆಸರಿನಲ್ಲಿದೆ.


ಭಾರತ ಸರ್ಕಾರ ಇವರ ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿರುವ ಸಾಧನೆಯನ್ನು ಪರಿಗಣಿಸಿ  ಪದ್ಮಭೂಷಣ,ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.