ಒಂದೇ ಸಿನಿಮಾದಲ್ಲಿ ಅಣ್ಣ-ತಮ್ಮ ಮುಖಾಮುಖಿ : ಕಾರ್ತಿ ಹೀರೋ ಸೂರ್ಯ ವಿಲನ್...!
Kaithi 2 : ಕಾಲಿವುಡ್ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ದಳಪತಿ ವಿಜಯ್ ಅಭಿನಯದ ಬಹಿನಿರೀಕ್ಷಿತ ಸಿನಿಮಾ ʼಲಿಯೋʼ ಈ ವರ್ಷ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ. ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದೆ. ಇದೀಗ ಲೋಕೇಶ್ ಅವರು ಬಿಗ್ ಅಪ್‌ಡೇಟ್ ನೀಡಿದ್ದಾರೆ.
Suriya Karthi in Kaithi 2 : ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಸದ್ಯ 'ಲಿಯೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ನಡುವೆ ಬಿಗ್ ಅಪ್‌ಡೇಟ್ ಒಂದು ಹೊರ ಬಿದ್ದಿದೆ.
ಹೌದು.. ಕೊಯಮತ್ತೂರಿನಲ್ಲಿ ನಡೆದ ಖಾಸಗಿ ಕಾಲೇಜು ಸಮಾರಂಭದಲ್ಲಿ ಭಾಗವಹಿಸಿದ ಲೋಕೇಶ್, ಸಿನಿಮಾ ನಿರ್ದೇಶಕನಾಗಿ ತಮ್ಮ ಪಯಣದ ಬಗ್ಗೆ ವಿವರವಾಗಿ ಮಾತನಾಡಿದರು. ನಿರೀಕ್ಷೆಯಂತೆ ವಿದ್ಯಾರ್ಥಿಗಳು ಅವರ ಮುಂಬರುವ ಎಲ್ಲಾ ಚಿತ್ರಗಳ ಬಗ್ಗೆ ಪ್ರಶ್ನೆ ಕೇಳಿದರು. ಲೋಕೇಶ್ ಕನಕರಾಜ್ ಎಲ್ಲರ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸಿದರು.
ಇದನ್ನೂ ಓದಿ: ರಾ..ರಾ..ರಕ್ಕಮ್ಮ ಜಾಕ್ಲಿನ್.. ಸೋಂಟಕ್ಕೆ ಫ್ಯಾನ್ಸ್ ಫಿದಾ; ಇಲ್ಲಿವೆ ಹಾಟ್ ಫೋಟೊಸ್
ಅಕ್ಟೋಬರ್ 19 ರಂದು 'ಲಿಯೋ' ಚಿತ್ರ ಬಿಡುಗಡೆಯಾದ ನಂತರ ಮುಂದಿನ ಚಿತ್ರ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೆ, ಕಾರ್ತಿ ದಿಲ್ಲಿಯಾಗಿ ನಟಿಸಿರುವ 'ಖೈದಿ 2' ಮುಗಿದ ನಂತರ ಈ ಮುಂದಿನ ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದರು.. ಲೋಕೇಶ್ ಮತ್ತು ನಿರ್ಮಾಪಕ ಎಸ್.ಆರ್. ಪ್ರಭು ಇತ್ತೀಚೆಗೆ 'ಖೈದಿ 2' ಚಿತ್ರಕ್ಕಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ವರದಿಗಳ ಪ್ರಕಾರ, ಕಮಲ್ ಹಾಸನ್ ನಟನೆಯ ʼವಿಕ್ರಮ್ʼ ಚಿತ್ರದಲ್ಲಿ ರೋಲೆಕ್ಸ್ ಪಾತ್ರವನ್ನು ತರಲು ಸೂರ್ಯ ಅವರನ್ನು ಲೋಕೇಶ್ ಕೇಳಿದ ನಂತರ ಚಿತ್ರಕಥೆ ಬರೆಯಲು ನಿರ್ಧರಿಸಿದ್ದಾರಂತೆ. ಕಮಲ್ ಹಾಸನ್ ಅಭಿನಯದ 'ವಿಕ್ರಂ' ಚಿತ್ರದಲ್ಲಿ ಕಾರ್ತಿ ಅವರು ದಿಲ್ಲಿಗೆ ಧ್ವನಿ ನೀಡಿದ್ದರು. ಅಂತೆಯೇ, ಕ್ಲೈಮ್ಯಾಕ್ಸ್‌ನಲ್ಲಿ ಅರ್ಜುನ್ ದಾಸ್ ಮತ್ತು ಹರೀಶ್ ಉತ್ಮಾನ್ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಒಲೆಯಲ್ಲಿ ಅಡುಗೆ ಮಾಡಿ, ಹಳ್ಳಿ ಸೊಡಗನ್ನು ಎಂಜಾಯ್ ಮಾಡಿದ ಬಾಲಿವುಡ್ ಶ್ರೀಮಂತ ನಟಿ..!
ಹಾಗಾಗಿ ಈ ಚಿತ್ರದ ಬಗ್ಗೆ ಅಪ್‌ಡೇಟ್ ಒಂದು ದೊರಕಿದ್ದು, ಸಹೋದರರಾದ ಸೂರ್ಯ ಮತ್ತು ಕಾರ್ತಿ ಅಂತಿಮವಾಗಿ ಖೈದಿ 2ದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದು ಹೇಳಲಾಗಿದೆ. ಈ ಸಿನಿಮಾದ ಚಿತ್ರೀಕರಣವು 2025 ರ ಆರಂಭದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಅದೇ ವರ್ಷ ಹಬ್ಬದ ದಿನದಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
ಕಾರ್ತಿ ಪ್ರಸ್ತುತ ಈ ವರ್ಷದ ದೀಪಾವಳಿಯಂದು ರಾಜು ಮುರುಗನ್ ಅವರ 'ಜಪಾನ್' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಾನಲ್ ಕುಮಾರಸ್ವಾಮಿ ನಿರ್ದೇಶನದ ಹೆಸರಿಡದ ಚಿತ್ರದಲ್ಲಿಯೂ ಸಹ ಕಾರ್ತಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಸಿರುತೈ ಶಿವ ನಿರ್ದೇಶನದ 'ಗಂಗುವ' ಚಿತ್ರ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಸೂರ್ಯ, ಸುಧಾ ಕೊಂಗರ ನಿರ್ದೇಶನದ 'ಸೂರ್ಯ 43' ಚಿತ್ರದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ʼಪದ್ಮಾವತಿʼ ವಿರುದ್ಧ ಗೆದ್ದ ʼಹಾಸ್ಟೆಲ್ ಹುಡುಗರುʼ..! ಕೋಟಿ ಪರಿಹಾರ ಕೇಳಿದ್ದ ನಟಿ ರಮ್ಯಾಗೆ ಮುಖಭಂಗ
ಅಲ್ಲದೆ, ಪ್ರಸ್ತುತ ಜೈಲರ್ ಸಿನಿಮಾವನ್ನು ಮುಗಿಸಿರುವ ರಜನಿ, ಮುಂದೆ ಜ್ಞಾನವೇಲ್ ರಾಜಾ ಅವರ 170 ನೇ ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಈ ಚಿತ್ರದ ನಂತರ ಅವರು ಲೋಕೇಶ್ ಕನಕರಾಜ್ ನಿರ್ದೇಶನದ 171ನೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ರಜನಿ ಅವರ ಕೊನೆಯ ಚಿತ್ರ ಎಂಬ ವರದಿಗಳೂ ಇವೆ. ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.