ಕಾಲಿವುಡ್ ಸ್ಟಾರ್ ಸೂರ್ಯ ಹುಟ್ಟುಹಬ್ಬಕ್ಕೆ `ಸೂರ್ಯ ಸನ್ ಆಫ್ ಕೃಷ್ಣನ್` ರಿ-ರಿಲೀಸ್
Surya S/O Krishnan Re-release : ಕಾಲಿವುಡ್ ಸ್ಟಾರ್ ಸೂರ್ಯ ಅಭಿನಯದ `ಸೂರ್ಯ ಸನ್ ಆಫ್ ಕೃಷ್ಣನ್` ಹಿಟ್ ಚಿತ್ರಗಳಲ್ಲಿ ಒಂದು. ಇಂತಹ ಕ್ಲಾಸಿಕ್ ಸಿನಿಮಾ ಮತ್ತೆ ರಿಲೀಸ್ ಆಗಬೇಕು ಎಂಬುದು ಅಭಿಮಾನಿಗಳ ಆಸೆ. ಆ ಕ್ಷಣ ಬಂದಿದೆ. ಈ ಚಿತ್ರವನ್ನು ತೆಲುಗಿನಲ್ಲಿ ಮರು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
Kollywood Star Soorya Birthday Special : ಗೌತಮ್ ವಾಸುದೇವ್ ಮೆನನ್ ನಿರ್ದೇಶಕ ಅವರ ನಿರ್ದೇಶನದಲ್ಲಿ ಮೂಡಿಬಂದ ಕ್ಲಾಸಿಕ್ ಹಿಟ್ ಸಿನಿಮಾ 'ಸೂರ್ಯ ಸನ್ ಆಫ್ ಕೃಷ್ಣನ್'. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಹಾಗೂ ಕಾಲಿವುಡ್ ಸ್ಟಾರ್ ಸೂರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ತಮಿಳಿನಲ್ಲಿ ಈ ಚಿತ್ರವನ್ನು ಆಸ್ಕರ್ ರವಿಚಂದ್ರನ್ ನಿರ್ಮಾಣ ಮಾಡಿದ್ದರು. ತೆಲುಗಿನಲ್ಲಿ SVR ಮೀಡಿಯಾ ಬ್ಯಾನರ್ ಅಡಿಯಲ್ಲಿ ಶೋಭಾರಾಣಿ ಗ್ರ್ಯಾಂಡ್ ಆಗಿ ಬಿಡುಗಡೆಯಾಯಿತು. ತಮಿಳಿನ ಜೊತೆಗೆ ತೆಲುಗಿನಲ್ಲೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾಗೆ ತೆಲುಗಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.
ಇನ್ನು ಈ ಚಿತ್ರಕ್ಕೆ ಹ್ಯಾರಿಸ್ ಜೈರಾಜ್ ಅವರ ಸಂಗೀತ ದೊರೆತಿದೆ. ಇದೀಗ ಈ ಕ್ಲಾಸಿಕ್ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ....ಹೌದು ನಿರ್ಮಾಪಕರು ಈ ಚಿತ್ರವನ್ನು ತೆಲುಗಿನಲ್ಲಿ ಮರು ಬಿಡುಗಡೆ ಮಾಡಲು ಹೊರಟಿದ್ದಾರೆ. ಇದೇ ತಿಂಗಳ 21ರಂದು ಸೂರ್ಯ ಹುಟ್ಟುಹಬ್ಬದ ಉಡುಗೊರೆಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.
ಯಶ್ ʼಮೊದಲಾಸಲʼ ನಟಿ ಭಾಮಾ ಫೋಟೋಸ್ ವೈರಲ್..! ನೋಡಿ
ಈ ಚಿತ್ರದಲ್ಲಿ ಸಮೀರಾ ರೆಡ್ಡಿ ಮತ್ತು ಸಿಮ್ರಾನ್ ನಾಯಕಿಯರಾಗಿದ್ದರೆ, ದಿವ್ಯಾ ಸ್ಪಂದನಾ ಅಲಿಯಾಸ್ ರಮ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹರೀಶ್ ಜೈ ರಾಜ್ ಸಂಗೀತ ಸಂಯೋಜಿಸಿದ್ದು, ರತ್ನವೇಲು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.
ಮೇಜರ್ ಕೆ. ಸೂರ್ಯ (ಸೂರ್ಯ) ರಕ್ಷಣಾ ಕಾರ್ಯಾಚರಣೆಗೆ ಹೋಗುವುದರೊಂದಿಗೆ ಚಲನಚಿತ್ರವು ಪ್ರಾರಂಭಗೊಳ್ಳುತ್ತದೆ. ಕಾರ್ಯಾಚರಣೆಯಲ್ಲಿದ್ದಾಗ ಅವನ ತಂದೆಯ ಸಾವಿನ ಸುದ್ದಿ ತಿಳಿಯುತ್ತದೆ. ಅವನು ತನ್ನ ತಂದೆಯೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಳ್ಳತ್ತಾನೆ. ಒಟ್ಟಾರೆಯಾಗಿ ಕೃಷ್ಣನ್ ಮತ್ತು ಸೂರ್ಯ ಅವರ ಜೀವನದ ಪ್ರಯಾಣವು ಕಥಾಹಂದರದ ತಿರುಳು. ಜೊತೆಗೆ ಈ ಚಿತ್ರವು ಹೃದಯಸ್ಪರ್ಶಿ ಪ್ರೇಮ ಕಥೆಗಳನ್ನು ಸಹ ತೋರಿಸುತ್ತದೆ.
ಇದನ್ನೂ ಓದಿ-3 ದಶಕಗಳ ನಂತರ ಆ ಸೀನ್‌ಗೆ ಒಪ್ಪಿದ ಕಾಜೋಲ್..! ರಿಹರ್ಸಲ್ ಕೂಡ ಮಾಡಿದ್ರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.