Sushant Case:ಶೀಘ್ರದಲ್ಲಿಯೇ NCB ಯಿಂದ ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕರೊಬ್ಬರ ವಿಚಾರಣೆ ಸಾಧ್ಯತೆ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಯ ತನಿಖೆಯಲ್ಲಿ ಇದೀಗ ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕರ ಹೆಸರೂ ಕೂಡ ಕೇಳಿಬಂದಿದೆ.
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಅವರ ಸಾವಿಗೆ ಸಂಬಂಧಿಸಿದ ಡ್ರಗ್ ಆಂಗಲ್ ಬಗ್ಗೆ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ (Sara Ali Khan) ಮತ್ತು ಶ್ರದ್ಧಾ ಕಪೂರ್ (Shraddha Kapoor) ಅವರನ್ನು ಪ್ರಶ್ನಿಸಲು ಸಮನ್ಸ್ ಕಳುಹಿಸಲಿದೆ. ಈ ವಾರ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ಇನ್ನೂ ಹಲವರಿಗೆ NCB ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಈ ಸರಣಿಯಲ್ಲಿ ದೀಪಿಕಾ ಪಡುಕೋಣೆ (Deepika Padukone) ಅವರ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಎಂಬ ಮತ್ತೊಂದು ಹೊಸ ಹೆಸರೂ ಕೂಡ ಕೇಳಿಬಂದಿದೆ. ಇದೇ ವೇಳೆ, ಇದೀಗ ಎನ್‌ಸಿಬಿ ತನಿಖೆಯಲ್ಲಿ ಚಲನಚಿತ್ರ ನಿರ್ಮಾಪಕರೊಬ್ಬರ ಹೆಸರೂ ಕೂಡ ಕೇಳಿಬಂದಿದೆ.
ಇದನ್ನು ಓದಿ- Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ
ಮಧು ಮಾಂಟೆನಾ ವರ್ಮಾ ವಿಚಾರಣೆ ಸಾಧ್ಯತೆ
ಈ ಚಿತ್ರ ನಿರ್ಮಾಪಕರ ಹೆಸರು ಮಧು ಮಾಂಟೆನಾ ವರ್ಮಾ. ಜಯ ಸಹಾ ಅವರೊಂದಿಗೆ ಮಧು ಚಾಟ್ ಮಾಡಿದ ನಂತರ ಈ ಹೆಸರು ಬಹಿರಂಗವಾಗಿದೆ. ಮುಂದಿನ ದಿನಗಳಲ್ಲಿ ಎನ್‌ಸಿಬಿ ಮಧು ಅವರನ್ನು ಪ್ರಶ್ನಿಸಲು ಕರೆಯಬಹುದು. ಎನ್‌ಸಿಬಿಯ ತನಿಖೆಯಲ್ಲಿ ಇನ್ನೂ ಕೆಲವು ಬಾಲಿವುಡ್ ತಾರೆಯರ ವಾಟ್ಸಾಪ್ ಸಂದೇಶ ಬಹಿರಂಗಗೊಂಡಿವೆ. ಅದರಲ್ಲಿ ಕೆಲವು ನಟಿಯರ ಹೆಸರೂ ಇದೆ. ಚಾಟ್‌ನಲ್ಲಿ ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಈ ವಾಟ್ಸಾಪ್ ಸಂದೇಶವನ್ನು ಶೀಘ್ರದಲ್ಲೇ ತನಿಖೆ ಮಾಡಲಾಗುವುದು. ಎನ್‌ಸಿಬಿ ಮೂಲಗಳ ಪ್ರಕಾರ, ಈ ಚಾಟ್ ಜಯ ಸಹಾ, ಶ್ರದ್ಧಾ ಕಪೂರ್, ನಮ್ರತಾ ಶಿರೋಡ್ಕರ್ ಮತ್ತು ಸುಶಾಂತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಅವರಿಂದ ಬಂದಿದೆ.
ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು
ದೀಪಿಕಾ ವ್ಯವಸ್ಥಾಪಕಿಗೆ NCB ಸಮನ್ಸ್
ದೀಪಿಕಾ ಪಡುಕೋಣೆ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರಿಗೆ ಎನ್‌ಸಿಬಿ ಸಮನ್ಸ್ ಕಳುಹಿಸಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ NCB ಅವರನ್ನು ಮಂಗಳವಾರ ಪ್ರಶ್ನಿಸುವ ಸಾಧ್ಯತೆ ಇದೆ. ಕ್ವಾನ್ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯಾಗಿದ್ದು ಅದು ವಿವಿಧ ಸೆಲೆಬ್ರಿಟಿಗಳಿಗೆ ಟ್ಯಾಲೆಂಟ್ ಮ್ಯಾನೇಜರ್ ಗಳನ್ನು ಒದಗಿಸುತ್ತದೆ. ಕರಿಷ್ಮಾ ಕ್ವಾನ್‌ನಲ್ಲಿ ಕೆಲಸ ಮಾಡುತ್ತಾಳೆ ಮತ್ತು ಆ ಮೂಲಕ ಅವಳು ದೀಪಿಕಾ ಪಡುಕೋಣೆ ವ್ಯವಹಾರಗಳನ್ನು ನಿರ್ವಹಿಸುತ್ತಾಳೆ. ಜಯ ಸಹಾ ಅವರ ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕರಿಷ್ಮಾ ಜೂನಿಯರ್ ಆಗಿದ್ದಾಳೆ. ಈ ಹಿಂದೆ ಜಯಾ ಷಾ ಅವರು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮೂಲಕ ಸುಶಾಂತ್ ಸಿಂಗ್ ಅವರನ್ನು ನಿರ್ವಹಿಸುತ್ತಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.