Sushant Singh Rajput : ಸುಶಾಂತ್ ಸಿಂಗ್ ರಜಪೂತ್, ಅಸಾಧಾರಣ ಪ್ರತಿಭಾನ್ವಿತ ನಟ, ಪರದೆಯ ಮೇಲೆ ತನ್ನ ಅದ್ಭುತ ನಟನೆಯಿಂದ ಸಿನಿರಸಿಕರ ಹೃದಯದಲ್ಲಿ ಮರೆಯಲಾಗದ ಪ್ರಭಾವ ಬೀರಿದ ಸ್ಪುರದ್ರೂಪಿ ಕಲಾವಿದ. ವಿಪರ್ಯಾಸ ಅಂದ್ರೆ ಇಂತಹ ನಟನ ಅಗಾಧ ಪ್ರತಿಭೆ ಅವರ ದುರಂತ ಮರಣದ ನಂತರ ಜನರಿಗೆ ಅರ್ಥವಾಗಿದ್ದು.


COMMERCIAL BREAK
SCROLL TO CONTINUE READING

ಹೌದು.. ಸುಶಾಂತ್‌ ಅಗಲಿಕೆಯ ನಂತರ ಜಗತ್ತು ಅವರ ಅಪ್ರತಿಮ ಸಾಮರ್ಥ್ಯವನ್ನು ಅರಿತುಕೊಂಡಿತು ಎನ್ನುವುದೇ ಬೇಸರದ ಸಂಗತಿ. ಇಂದು ಅವರ ಮೂರನೇ ವರ್ಷದ ಪುಣ್ಯತಿಥಿ. ಈ ಸಂದರ್ಭದಲ್ಲಿ, ಸುಶಾಂತ್ ಅವರ ಕೆಲವು ಅತ್ಯುತ್ತಮ ಸಿನಿಮಾಗಳ ಬಗ್ಗೆ ತಿಳಿಯೋಣ.. 


ಇದನ್ನೂ ಓದಿ: ಕಿಚ್ಚನ ಬ್ಯಾನರ್‌ನಲ್ಲಿ ನ್ಯೂ ಪ್ರಾಜೆಕ್ಟ್‌; ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಯ ಮಾಸ್‌ ಎಂಟ್ರಿ..!   


ಕೈ ಪೋ ಚೆ! (2013) : ಸುಶಾಂತ್ ಸಿಂಗ್ ರಜಪೂತ್ ಅವರು ಚೇತನ್ ಭಗತ್ ಅವರ ಕಾದಂಬರಿ "ದಿ 3 ಮಿಸ್ಟೇಕ್ಸ್ ಆಫ್ ಮೈ ಲೈಫ್" ಅನ್ನು ಆಧರಿಸಿದ "ಕೈ ಪೋ ಚೆ!" ಚಿತ್ರದ ಮೂಲಕ ನಟನೆಯನ್ನು ಪ್ರಾರಂಭಿಸಿದರು. ರಜಪೂತ್ ಈ ಚಿತ್ರದಲ್ಲಿ ಇಶಾನ್ ಭಟ್ ಎಂಬ ಉತ್ಸಾಹಭರಿತ ಮತ್ತು ಮಹತ್ವಾಕಾಂಕ್ಷೆಯ ಯುವಕನನ್ನು ಚಿತ್ರಿಸಿದ್ದಾರೆ. ಸ್ನೇಹ, ಪ್ರೀತಿ ಮತ್ತು ದುಃಖದ ಮೂಲಕ ಇಶಾನ್ ಅವರ ಪ್ರಯಾಣದ ಚಿತ್ರಣವು ಅವರ ನಟನಾ ಕೌಶಲ್ಯ ಮತ್ತು ಬಹುಮುಖತೆಯನ್ನು ಪ್ರದರ್ಶಿಸುತ್ತದೆ.


ಎಂಎಸ್ ಧೋನಿ : ದಿ ಅನ್‌ಟೋಲ್ಡ್ ಸ್ಟೋರಿ (2016): "MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ" ಚಿತ್ರದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಭಾರತದ ಹೆಸರಾಂತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸಿದರು. ಧೋನಿಯಂತೆ ಆಟವಾಡಲು ಮತ್ತು ಅವರ ವ್ಯಕ್ತಿತ್ವವನ್ನು ಎಲ್ಲಿಯೂ ಬಿಟ್ಟು ಕೊಡದ ರೀತಿಯಲ್ಲಿ ಸುಶಾಂತ್‌ ನಟಿಸಿ ವಿಮರ್ಶಕ ಮತ್ತು ಪ್ರೇಕ್ಷಕನಿಂದ ಪ್ರಶಂಸಿಸಲ್ಪಟ್ಟರು. ಈ ಸಿನಿಮಾ ಭಾರತೀಯ ಸಿನಿರಂಗದಲ್ಲಿ ಪ್ರದರ್ಶಿಸಲ್ಪಟ್ಟ ಉತ್ತಮ ಸಿನಿಮಾಗಳಲ್ಲಿ ಒಂದು ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: ನಾನು ಕುಸುಮ’ದ ಅನಿತಾಳ ಬಗ್ಗೆ ಸನಾತನಿ ಸಂತೃಪ್ತಿ..
 
ಪತ್ತೇದಾರ ಬ್ಯೋಮಕೇಶ್ ಬಕ್ಷಿ! (2015): ಈ ನಿಯೋ-ನಾಯರ್ ಮಿಸ್ಟರಿ ಚಿತ್ರದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅಪ್ರತಿಮ ಪತ್ತೇದಾರಿ ಬ್ಯೋಮಕೇಶ್ ಬಕ್ಷಿಯ ಸವಾಲಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಬುದ್ಧಿವಂತ ಪತ್ತೇದಾರಿ ಚಿತ್ರವು ನೋಡುಗರಿಗೆ ಥ್ರಿಲ್ಲ್‌ ನೀಡಿತ್ತು. 


ಸೋಂಚಿರಿಯಾ (2019) : ಸುಶಾಂತ್ ಸಿಂಗ್ ರಜಪೂತ್ ಹೆಚ್ಚು ಮೆಚ್ಚುಗೆ ಪಡೆದ ಚಲನಚಿತ್ರ "ಸೋಂಚಿರಿಯಾ". ಈ ಚಿತ್ರದಲ್ಲಿ ಅವರು ಲಖ್ನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಜಪೂತ್ ನಾಟಕೀಯ ಮತ್ತು ಭಾವನಾತ್ಮಕವಾಗಿ ಅಭಿನಯ ಗಮನಸೆಳೆಯಿತು. ಅವರ ಸಾಮರ್ಥ್ಯವು ಜನರನ್ನು ಆಕರ್ಷಿಸಿತು ಅಲ್ಲದೆ, ಅವರ ಅದ್ಭುತ ನಟನಾ ಪ್ರತಿಭೆಯನ್ನು ಹೊರಹಾಕಿತು.


ಇದನ್ನೂ ಓದಿ: Gandii Baat: ವಿವಾದ ಸೃಷ್ಟಿಸಿದ ಏಕ್ತಾ ಕಪೂರ್ 'ಗಂಧೀಬಾತ್​' ಪೋಸ್ಟರ್..‌ ಲಕ್ಷ್ಮೀ ದೇವಿಗೆ ಇದೆಂಥ ಅವಮಾನ! ​


ಚಿಚೋರೆ (2019) : ಸುಶಾಂತ್ ಸಿಂಗ್ ರಜಪೂತ್ "ಚಿಚೋರೆ" ಚಿತ್ರದಲ್ಲಿ ಅನಿರುದ್ಧ ಅನ್ನಿ ಪಾಠಕ್ ಪಾತ್ರವನ್ನು ನಿರ್ವಹಿಸಿದರು, ಒಬ್ಬ ಮಧ್ಯವಯಸ್ಕ ವ್ಯಕ್ತಿ ತನ್ನ ಕಾಲೇಜು ದಿನಗಳನ್ನು ನೆನೆದು ತನ್ನ ಮಗನಿಗೆ ಜೀವನದ ಪಾಠಗಳನ್ನು ಕಲಿಸುವ ಕಥಾ ಹಂದರ ಹೊಂದಿದೆ. ಹಾಸ್ಯ ಮತ್ತು ಅರ್ಥಗರ್ಭಿತ ಸಿನಿಮಾದಲ್ಲಿನ ರಜಪೂತ್ ಅಭಿನಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 


ಸತತವಾಗಿ ಅತ್ಯುತ್ತಮ ಸಿನಿಮಾಗಳನ್ನು ನೀಡಿದರೂ, ಸಹ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರತಿಭೆ ಮತ್ತು ಸಾಮರ್ಥ್ಯ ಅವರ ಮರಣದ ನಂತರ ಜನರಿಗೆ ಅರ್ಥವಾಗಿದ್ದು ನಿಜಕ್ಕೂ ವಿಪರ್ಯಾಸ.. ಸತ್ತ ನಂತರ ಮನುಷ್ಯನ ಮೌಲ್ಯ ಅರ್ಥವಾಗುತ್ತೆ ಎನ್ನುವ ಮಾತು ಇದಕ್ಕೆ ನಿಜ ಇರ್ಬೇಕು ಅಲ್ವಾ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.