ಕಿಚ್ಚನ ಬ್ಯಾನರ್‌ನಲ್ಲಿ ನ್ಯೂ ಪ್ರಾಜೆಕ್ಟ್‌; ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಯ ಮಾಸ್‌ ಎಂಟ್ರಿ..!

Kichha Sudeep : ಕಿಚ್ಚ ಸುದೀಪ್‌ ಇತ್ತಿಚೇಗೆ ತಮ್ಮ 46 ನೇ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಕಿಚ್ಚ ಸುದೀಪ್‌ ತಮ್ಮದೇ ಬ್ಯಾನರ್‌ನಡಿನಲ್ಲಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ತಮ್ಮ ಸೋದರಳಿಯ ಸಂಚಿತ್‌ ಸಂಜೀವ್‌ ಅವರನ್ನು ಕಲಾಲೋಕಕ್ಕೆ ಪರಿಚಯಿಸಿದ್ದಾರೆ.   

Written by - Savita M B | Last Updated : Jun 14, 2023, 08:53 AM IST
  • ಕೆಲವು ದಿನಗಳ ಹಿಂದೆ ಸಂಚಿತ್‌ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿತ್ತು.
  • ಇದೀಗ ಅದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.
  • ಮುಂಚೆಯೇ ಕಿಚ್ಚನ ʼಅಂಬಿ ನಿಂಗೆ ವಯಸ್ಸಾಯ್ತೋʼ, ʼವಿಕ್ರಾಂತ್‌ ರೋಣʼ ಸಿನಿಮಾಗಳಲ್ಲಿ ಸಂಚಿತ್‌ ಕೆಲಸ ಮಾಡಿದ್ದಾರೆ.
ಕಿಚ್ಚನ ಬ್ಯಾನರ್‌ನಲ್ಲಿ ನ್ಯೂ ಪ್ರಾಜೆಕ್ಟ್‌; ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಯ ಮಾಸ್‌ ಎಂಟ್ರಿ..!  title=

Sanchith Sanjeev : ಕೆಲವು ದಿನಗಳ ಹಿಂದೆ ಸಂಚಿತ್‌ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಅದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮುಂಚೆಯೇ ಕಿಚ್ಚನ ʼಅಂಬಿ ನಿಂಗೆ ವಯಸ್ಸಾಯ್ತೋʼ, ʼವಿಕ್ರಾಂತ್‌ ರೋಣʼ ಸಿನಿಮಾಗಳಲ್ಲಿ ಸಂಚಿತ್‌ ಕೆಲಸ ಮಾಡಿದ್ದಾರೆ. ತೆರೆ ಮೇಲೆ ಅಲ್ಲದಿದ್ದರು, ತೆರೆ ಹಿಂದೆ ಗುರುತಿಸಿಕೊಂಡಿದ್ದರು. ಜೊತೆಗೆ ಕಿಚ್ಚ ಅವರ ಸೋದರಳಿಯ ಮುಂಬೈನಲ್ಲಿ ನಟನೆಯನ್ನು ಕೂಡ ಕಲಿತು ಬಂದಿದ್ದಾರೆ. 

ಭರ್ಜರಿ ತಯಾರಿಯೊಂದಿಗೆ ಸಂಜಿತ್‌ ಬಣ್ಣದ ಲೋಕಕ್ಕೆ ಆಗಮಿಸಲಿದ್ದಾರೆ. ಇನ್ನು ವಿಶೇಷ ಎಂದರೆ ತಮ್ಮ ಮೊದಲ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ ಜೊತೆ ಕೆ. ಪಿ ಶ್ರೀಕಾಂತ್‌ ಹಾಗೂ ಮನೋಹರ್‌ ನಾಯ್ಡು ಚಿತ್ರಕ್ಕೆ ಇನ್ವೆಸ್ಟ್‌ ಮಾಡಿದ್ದಾರೆ. ಈ ವಿಚಾರವಾಗಿ ಶ್ರೀಕಾಂತ್‌ ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ. ಇಂದು (ಜೂನ್‌ 14) ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ.

ಇದನ್ನೂ ಓದಿ-Ketika Sharma : ನಿದ್ದೆಯಲ್ಲೂ ಕಾಡುವಂತಿದೆ ಕೇತಿಕಾ ಕಾಂತಿಯು ಅಂದ..! ಫೋಟೋಸ್‌ ನೋಡಿ

ಲಹರಿ ಸಂಸ್ಥೆಯ ಮನೋಹರ್‌ ನಾಯ್ಡು ಹಾಗೂ ವೀನಸ್‌ ಮೂವಿಸ್‌ ಕೆ ಪಿ ಶ್ರೀಕಾಂತ್‌ ಈ 2 ಸಿನಿಮಾ ನಿರ್ಮಿಸುತ್ತಿದ್ದಾರೆ. ಉಪೇಂದ್ರ ನಟನೆಯ ಯುಐ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಿಕರಣ ನಿಂತು ಹೋಗಿದ್ದ ವಿನಯ್‌ ರಾಜಕುಮಾರ್‌ ಸಿನಿಮಾ ಗ್ರಾಮಾಯಣ ಸಿನಿಮಾ ಮರುಜೀವ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಮುಹೂರ್ತ ನಡೀತು. ಇದೀಗ ಸುದೀಪ್‌ ತಮ್ಮ ಸೋದರಳಿಯಯ ಚಿತ್ರಕ್ಕೆ  ಸಾತ್‌ ನೀಡಿದ್ದಾರೆ. 

ಸುದೀಪ್‌ ಸೋದರಳಿಯ ಅವರಂತಯೇ ಆರಡಿ ಕಟೌಟ್‌. ಇದೀಗ ಸೋದರ ಮಾನವ ಹಾದಿಯಲ್ಲೆ ಭರ್ಜರಿಯಾಗಿ ಸಿನಿರಂಗ ಪ್ರವೇಶೀಸಲು ಸಜ್ಜಾಗಿದ್ದಾರೆ. ಸಂಜಿತ್‌ ಅರು ಹಿರೋ ಆಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳಲಿದ್ದಾರೆ ಅನ್ನೊದು ವಿಶೇಷ. ಇನ್ನು ಸಿನಿಮಾ ಬಗ್ಗೆ ಕಿಚ್ಚ ಸುದೀಪ್‌ ಕೂಡ ಭಾರೀ ಉತ್ಸುಕರಾಗಿ ಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ-Photo Gallery: ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೊಕೆ ಸಜ್ಜಾದ ಕಿಚ್ಚ ಸುದೀಪ್ ಅಕ್ಕನ ಮಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News