Viral Video : ಇಂಟರ್ನೆಟ್ ಪ್ರಪಂಚವು ಮನಸ್ಸಿಗೆ ಮುದ ನೀಡುವ ಸಂಗತಿಗಳಿಂದ ತುಂಬಿದೆ. ಪ್ರತಿನಿತ್ಯ ಅನೇಕ ವಿಡಿಯೋಗಳು ಇಲ್ಲಿ ವೈರಲ್‌ ಆಗುತ್ತವೆ. ಪ್ರಾನಿಗಳ ವಿಡಿಯೋಗಳಿಂದ ಮದುವೆಯ ವಿಡಿಯೋ ವರೆಗೂ ಅನೇಕ ರೀತಿಯ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಕೆಲವು ಫನ್ನಿಯಾಗಿದ್ದರೆ, ಮತ್ತೆ ಕೆಲವು ನೋಡುಗರನ್ನು ನಿಬ್ಬೆರಗಾಗಿಸುತ್ತವೆ. ಇದೀಗ ಆಘಾತಕಾರಿ ವಿಡಿಯೋವೊಂದು ಮುನ್ನೆಲೆಗೆ ಬಂದಿದೆ. ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಆ ಆತ್ಮ ಈಗ ನ್ಯಾಯ ಕೇಳಲು ಬಂದಿದೆ. ಈ ವಿಡಿಯೋ ಇದುವರೆಗೆ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆದಿದ್ದು, ನೂರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಸುಮಾರು ಮೂವತ್ತು ಸೆಕೆಂಡ್‌ಗಳ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ಕುಳಿತು ಜೋರಾಗಿ ಕೂಗುತ್ತಿರುವುದು ಕಂಡು ಬರುತ್ತಿದೆ. ತುಂಬಾ ಕೋಪಗೊಂಡಿದ್ದು, ಮುಖವನ್ನು ನೋಡಿದರೆ ಯಾರಾದರೂ ಭಯಪಡುತ್ತಾರೆ. ಆದರೆ, ಮಹಿಳಾ ವರದಿಗಾರ್ತಿ ಹೇಗೋ ಈ ಮಹಿಳೆ ಹತ್ತಿರ ಬಂದು ಮಾತನಾಡಿಸುತ್ತಾರೆ. ಇದರಲ್ಲಿ ಮಹಿಳೆ ತನ್ನನ್ನು ದಿವಂಗತ ಸುಶಾಂತ್ ಸಿಂಗ್ ರಜಪೂತ್ ಎಂದು ಬಣ್ಣಿಸಿಕೊಂಡಿದ್ದಾರೆ. ಇದರಲ್ಲಿ ಕೋಪಗೊಂಡ ಮಹಿಳೆ ಇದು ತನ್ನ ತಾಯಿಯ ದೇಹ ಎಂದು ಹೇಳಿಕೊಂಡಿದ್ದಾರೆ. "ಇದು ನನ್ನ ತಾಯಿಯ ದೇಹ ಮತ್ತು ನಾನು ನನ್ನ ತಾಯಿಯ ದೇಹದಲ್ಲಿ ಹುಟ್ಟಿದ್ದೇನೆ. ನಾನು ಸುಶಾಂತ್ ಸಿಂಗ್ ರಜಪೂತ್ ಜೀವಂತವಾಗಿದ್ದೇನೆ. ನನ್ನನ್ನು ಕೊಂದಿದ್ದಾರೆ" ಎಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆ ಹೇಳುತ್ತಾರೆ. 


ಇದನ್ನೂ ಓದಿ: Viral Video : ಜೋರು ಮಳೆಯಲ್ಲಿ ತುಮ್‌ ಸೆ ಹಿ ಹಾಡನ್ನು ಮರುಸೃಷ್ಟಿಸಿದ ರೊಮ್ಯಾಂಟಿಕ್‌ ಕಪಲ್‌


ತನ್ನನ್ನು ಕೊಲೆ ಮಾಡಲಾಗಿದೆ ಮತ್ತು ತನ್ನ ಗಂಟಲಿಗೆ ಇಂಜೆಕ್ಷನ್ ಕೊಟ್ಟು ಕೊಂದಿದ್ದಾರೆ ಎಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆ ಹೇಳುತ್ತಾರೆ. ಈ ಬಗ್ಗೆ ವರದಿಗಾರರು, ಚುಚ್ಚುಮದ್ದು ನೀಡಿ ಕೊಂದವರು ಯಾರು? ಎಂದು ಕೇಳುತ್ತಾರೆ. ಈ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮವು ತನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆ ಹೇಳಿದ್ದಾರೆ. ಮಹಿಳೆಯೊಬ್ಬರು ಈ ರೀತಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಕೂಡ ತೀವ್ರವಾಗಿ ಕಮೆಂಟ್ ಮಾಡುತ್ತಿದ್ದಾರೆ. 


 


Deepika Ranveer: ಗಂಡನ ಬರ್ತ್‌ ಡೇ ಗೆ ವಿಶ್‌ ಮಾಡದ ದೀಪಿಕಾ! ರಣವೀರ್‌ ಜೊತೆ ಡಿವೋರ್ಸ್‌ ವದಂತಿ ಸತ್ಯವೇ!?


ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು 14 ಜೂನ್ 2020 ರಂದು ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾದರು. ಅವರ ಸಾವಿಗೆ ಆತ್ಮಹತ್ಯೆಯೇ ಕಾರಣ ಎನ್ನಲಾಗಿದೆ. ದಿವಂಗತ ನಟ ಕಳೆದ ಹಲವು ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದ್ದು, ಈ ಸಂಬಂಧ ಮುಂಬೈ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ