Deepika Ranveer: ಗಂಡನ ಬರ್ತ್‌ ಡೇ ಗೆ ವಿಶ್‌ ಮಾಡದ ದೀಪಿಕಾ! ರಣವೀರ್‌ ಜೊತೆ ಡಿವೋರ್ಸ್‌ ವದಂತಿ ಸತ್ಯವೇ!?

Deepika Padukone - Ranveer Singh: ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಪತ್ನಿ ದೀಪಿಕಾ ಪಡುಕೋಣೆಯಿಂದ ಬರ್ತ್‌ ಡೇ ವಿಶ್‌ ಪೋಸ್ಟ್‌ನ್ನು ನಿರೀಕ್ಷಿಸುತ್ತಿದ್ದರು. ಆದರೆ ಫ್ಯಾನ್ಸ್‌ಗೆ ಕಾದಿತ್ತು ಬಹುದೊಡ್ಡ ನಿರಾಸೆ.   

Written by - Chetana Devarmani | Last Updated : Jul 7, 2023, 10:57 AM IST
  • ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ವಿಶ್‌ ಮಾಡಲಿಲ್ಲವೇ ದೀಪಿಕಾ?
  • ಪತ್ನಿ ದೀಪಿಕಾ ಪಡುಕೋಣೆಯಿಂದ ಬರ್ತ್‌ ಡೇ ವಿಶ್‌ ಪೋಸ್ಟ್‌ ನಿರೀಕ್ಷಿಸಿದ್ದ ಫ್ಯಾನ್ಸ್‌ಗೆ ನಿರಾಸೆ
  • ಜುಲೈ 6 ರಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಣವೀರ್ ಸಿಂಗ್
Deepika Ranveer: ಗಂಡನ ಬರ್ತ್‌ ಡೇ ಗೆ ವಿಶ್‌ ಮಾಡದ ದೀಪಿಕಾ! ರಣವೀರ್‌ ಜೊತೆ ಡಿವೋರ್ಸ್‌ ವದಂತಿ ಸತ್ಯವೇ!? title=
Deepika Padukone - Ranveer Singh

Deepika Padukone did not post on Ranveer Singh birthday: ರಣವೀರ್ ಸಿಂಗ್ ಜುಲೈ 6 ರಂದು ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಸಹೋದ್ಯೋಗಿಗಳು ಮತ್ತು ಆಪ್ತರು ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿಯ ಶುಭಾಶಯಗಳನ್ನು ಕೋರಿದರು. ಆದರೆ ಅವರ ಪತ್ನಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮಾತ್ರ ಸೈಲೆಂಟ್‌ ಆಗಿದ್ದರು. ನಟ ರಣವೀರ್ ಸಿಂಗ್ ಅವರ ಜನ್ಮದಿನದಂದು ಯಾವುದೇ ಪೋಸ್ಟ್ ಅನ್ನು ಶೇರ್‌ ಮಾಡಲಿಲ್ಲ. ಇದು ದೀಪ್‌ವೀರ್ ಅಭಿಮಾನಿಗಳ ಬೇಸರ ಮತ್ತು ಆತಂಕಕ್ಕೆ ಕಾರಣವಾಯಿತು. ಅಲ್ಲದೇ ಮತ್ತೆ ದೀಪಿಕಾ - ರಣವೀರ್‌ ಅವರ ವಿಚ್ಛೇದನ ವದಂತಿಗಳು ಮುನ್ನೆಲೆಗೆ ಬರುತ್ತಿವೆ.

ಅಭಿಮಾನಿಗಳ ಗುಂಪೊಂದು ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ಪಡುಕೋಣೆ ಅವರ ಕೆಲ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಅಭಿಮಾನಿಯೊಬ್ಬರು ಹೀಗೆ, "ದೀಪಿಕಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ರಣವೀರ್ ಅವರ ಹುಟ್ಟುಹಬ್ಬದ ಶುಭಾಶಯ ಪೋಸ್ಟ್‌ಗಾಗಿ ನಾನು ಇಡೀ ದಿನ ಕಾಯುತ್ತಿದ್ದೇನೆ" ಎಂದು ಕಾಮೆಂಟ್‌ ಮಾಡಿದ್ದಾರೆ. "ನಿಮ್ಮ ಗಂಡನ ಹುಟ್ಟುಹಬ್ಬದಂದು ಏನನ್ನಾದರೂ ಪೋಸ್ಟ್ ಮಾಡಿ" ಎಂದು ಮತ್ತೊಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. "ನೀವು ನಿಮ್ಮ ಪತಿಗೆ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಾಕಿಲ್ಲವೇ?" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Bollywood Richest Villain: ಇವರೇ ನೋಡಿ ಅತ್ಯಂತ ಶ್ರೀಮಂತ ವಿಲನ್.. ಕೋಟ್ಯಾಧಿಪತಿಗಳು ಈ ಖಳನಾಯಕರು!

ಕರಣ್ ಜೋಹರ್ ಅವರು ರಣವೀರ್ ಸಿಂಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ. ನಟನ ಮುಂಬರುವ ಬಿಡುಗಡೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ಕರಣ್ ಜೋಹರ್, ಇನ್‌ಸ್ಟಾಗ್ರಾಮ್‌ನಲ್ಲಿ ಹುಟ್ಟುಹಬ್ಬದ ಶುಭಾಶಯದ ಜೊತೆ ಚಿತ್ರದ ಸೆಟ್‌ಗಳಿಂದ ತೆರೆಮರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಇದು ರಾಕಿ ದಿನ!!!! ಪ್ರಕೃತಿಯ ಈ ಮಹಾನ್ ಶಕ್ತಿಗೆ ಜನ್ಮದಿನದ ಶುಭಾಶಯಗಳು… ನಮ್ಮ ಕಹಾನಿಗೆ ನಿಮ್ಮ ಹೃದಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು… ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಎಂದು ಕರಣ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

Deepika Padukone did not wish Ranveer Singh on his birthday

ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ರಣವೀರ್ ಅವರಿಗೆ ಈ ತಿಂಗಳು ವಿಶೇಷವಾಗಿದೆ. ರಣವೀರ್ ಸಿಂಗ್‌ ಅವರು ಕರಣ್ ಜೋಹರ್ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿದ್ದಾರೆ. 

ಇದನ್ನೂ ಓದಿ: ಉಪೇಂದ್ರ, ಶಿವಣ್ಣ ರಿಜೆಕ್ಟ್ ಮಾಡಿದ್ದ ʻಹುಚ್ಚʼ.. ಸುದೀಪ್‌ಗೆ ಕೊಡ್ತು ದೊಡ್ಡ ಸಕ್ಸಸ್!

ಮತ್ತೊಂದೆಡೆ, ದೀಪಿಕಾ ಪಡುಕೋಣೆ ಪ್ರಸ್ತುತ ತನ್ನ ಮುಂಬರುವ ಚಿತ್ರಗಳಾದ ಪ್ರಾಜೆಕ್ಟ್ ಕೆ ಮತ್ತು ಫೈಟರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಪ್ರಭಾಸ್ ಎದುರು ದೀಪಿಕಾ ಪಡುಕೋಣೆ ನಟಿಸಲಿದ್ದಾರೆ. ಹೃತಿಕ್ ರೋಷನ್ ಜೊತೆಗೆ ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News