Sushmita Sen : ತೃತೀಯಲಿಂಗಿಯಾಗಿ ನಟಿ ಸುಶ್ಮಿತಾ ಸೇನ್! ಲುಕ್ ಕಂಡು ವಾವ್ ಎಂದ ಫ್ಯಾನ್ಸ್
Taali first look : ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ತಮ್ಮ ಮುಂಬರುವ ವೆಬ್ ಸಿರೀಸ್ ತಾಲಿ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೆಬ್ ಸರಣಿಯಲ್ಲಿ ನಟಿ ಟ್ರಾನ್ಸ್‌ಜೆಂಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಶ್ಮಿತಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Taali First Look Poster : ಮಾಜಿ ಮಿಸ್ ಯೂನಿವರ್ಸ್ ಮತ್ತು ಬಾಲಿವುಡ್ ಬೆಡಗಿ ಸುಶ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇವರು ಬಹುಕಾಲದಿಂದ ಬಾಲಿವುಡ್ ಚಿತ್ರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ, ಸುಶ್ಮಿತಾ ಸೇನ್ ತನ್ನ ಮುಂಬರುವ ವೆಬ್ ಸರಣಿ ತಾಲಿ ಫಸ್ಟ್ ಲುಕ್‌ನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಟ್ರಾನ್ಸ್‌ಜೆಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಸುಶ್ಮಿತಾ ಅವರ ಈ ಪೋಸ್ಟ್ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ಅವರು ಆರ್ಯ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ : Filmfare Award 2022 : ನಾಳೆ ಬೆಂಗಳೂರಿನಲ್ಲಿ ʻಫಿಲ್ಮ್ ಫೇರ್’ ಅವಾರ್ಡ್ ಕಾರ್ಯಕ್ರಮ, ನೀವೂ ಹೋಗಬೇಕೇ? ಹೀಗೆ ಮಾಡಿ!
ತೃತೀಯಲಿಂಗಿಯಾಗಿ ಸುಶ್ಮಿತಾ ಸೇನ್ :
ಸುಶ್ಮಿತಾ ಸೇನ್ ಮತ್ತೊಮ್ಮೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಬ್ಬರದಿಂದ ಪುನರಾಗಮನ ಮಾಡಲಿದ್ದಾರೆ. ಸಹಜವಾಗಿ, ನಟಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ ಆದರೆ ಅವರು ತಮ್ಮ ವೆಬ್ ಸರಣಿಯ ಮೂಲಕ ಜನರ ಹೃದಯವನ್ನು ಆಳುತ್ತಿದ್ದಾರೆ. ಸುಶ್ಮಿತಾ ಸೇನ್ ತಾಲಿ ಎಂಬ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ತೃತೀಯಲಿಂಗಿ ಗೌರಿ ಸಾವಂತ್ ಅವರ ಜೀವನವನ್ನು ಆಧರಿಸಿದೆ.
ಅಮೂಲ್ಯ ಕೆಂಪಾದ ತುಟಿ ನೋಡಿ ಭವಿಷ್ಯ ನುಡಿದ ಗುರೂಜಿ..!
ಗೌರಿ ಸಾವಂತ್ ಯಾರು?
ಗೌರಿ ಸಾವಂತ್ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ. 2019 ರಲ್ಲಿ, ಭಾರತದ ಚುನಾವಣಾ ಆಯೋಗವು ಗೌರಿ ಸಾವಂತ್ ಅವರನ್ನು ಮಹಾರಾಷ್ಟ್ರದ 12 ಚುನಾವಣಾ ರಾಯಭಾರಿಗಳಲ್ಲಿ ಒಬ್ಬರನ್ನಾಗಿ ನೇಮಿಸಿದೆ. ಅವರು LGBTQIA+ ಸಮುದಾಯದಿಂದ ಈ ಸ್ಥಾನವನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ. ಗೌರಿ ಸಾವಂತ್ ವಿಕ್ಸ್ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ