ಅಮೂಲ್ಯ ಕೆಂಪಾದ ತುಟಿ ನೋಡಿ ಭವಿಷ್ಯ ನುಡಿದ ಗುರೂಜಿ..!

ನೀವು ಕೈ ರೇಖೆ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು, ಅಬ್ಬಬ್ಬಾ ಅಂದ್ರೆ ಕಾಲಿನ ಗೆರೆಯನ್ನಾದ್ರೂ ನೋಡಿ ಭವಿಷ್ಯ ಹೇಳ್ತಾರೆ ಅಂದುಕೊಳ್ಳೋಣ, ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಯಸ್‌ ಬಿಗ್‌ಹೌಸ್‌ನಲ್ಲಿ ಆರ್ಯವರ್ಧನ ಗುರೂಜಿ ಹಿಂಗೊಂದು ಪ್ರಯೋಗ ಮಾಡಿದ್ದು, ಅಮೂಲ್ಯ ಅಧರ ನೋಡಿ ಭವಿಷ್ಯ ನುಡಿದಿದ್ದಾರೆ.

Written by - Krishna N K | Last Updated : Oct 7, 2022, 08:17 PM IST
  • ಬಿಗ್‌ಹೌಸ್‌ನಲ್ಲಿ ತುಟಿ ನೋಡಿ ಭವಿಷ್ಯ ನುಡಿದ ಆರ್ಯವರ್ಧನ ಗುರೂಜಿ
  • ನಟಿ ಅಮೂಲ್ಯ ತುಟಿ ನೋಡಿ, ಹೀಗಿದ್ರೆ ಒಳ್ಳೆಯದು ಎಂದ ಗುರೂಜಿ
  • ಆರ್ಯವರ್ಧನ್‌ ಭವಿಷ್ಯ ಕೇಳಿ ಬಿದ್ದು ಬಿದ್ದು ನಕ್ಕ ದೊಡ್ಮನೆ ಮಂದಿ
ಅಮೂಲ್ಯ ಕೆಂಪಾದ ತುಟಿ ನೋಡಿ ಭವಿಷ್ಯ ನುಡಿದ ಗುರೂಜಿ..! title=

BBKS 9 :  ನೀವು ಕೈ ರೇಖೆ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು, ಅಬ್ಬಬ್ಬಾ ಅಂದ್ರೆ ಕಾಲಿನ ಗೆರೆಯನ್ನಾದ್ರೂ ನೋಡಿ ಭವಿಷ್ಯ ಹೇಳ್ತಾರೆ ಅಂದುಕೊಳ್ಳೋಣ, ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಯಸ್‌ ಬಿಗ್‌ಹೌಸ್‌ನಲ್ಲಿ ಆರ್ಯವರ್ಧನ ಗುರೂಜಿ ಹಿಂಗೊಂದು ಪ್ರಯೋಗ ಮಾಡಿದ್ದು, ಅಮೂಲ್ಯ ಅಧರ ನೋಡಿ ಭವಿಷ್ಯ ನುಡಿದಿದ್ದಾರೆ.

ಆರ್ಯವಧರ್ನ್‌ ಗುರೂಜಿ ಬಿಗ್‌ಹೌಸ್‌ ಹೊರಗೆ ಇದ್ದಾಗಿನಿಂದಾಗ್ಲೂ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಜ್ಯೋತಿಷ್ಯ ಪ್ರವೀಣನಾಗಿರುವ ಗುರೂಜಿ ದೊಡ್ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದ ಪ್ರೇಕ್ಷಕರ ನಗುವಿಗೆ ಕಾರಣವಾಗಿದೆ. ಅಲ್ಲದೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳ್ತಾರಾ.. ಎನಪ್ಪಾ ನಿನ್ನ ಆಟ ಎಂದು ಹಣೆ ಮೇಲೆ ಕೈಯಿಟ್ಟು ಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral Video: ವಧು ಮಂಟಪಕ್ಕೆ ಬರ್ತಿದ್ದಂತೆ ಕಣ್ಣೀರು ಹಾಕಿದ ವರ: ವಿಡಿಯೋ ನೋಡಿದ್ರೆ ಫಿದಾ ಆಗ್ತೀರ

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಟಾಸ್ಕ್‌ ಮಧ್ಯ ಗುರೂಜಿ ತುಟಿ ನೋಡಿ ಭವಿಷ್ಯ ಹೇಳಿ ವೈರಲ್‌ ಆಗಿದ್ದಾರೆ. ಎಲ್ಲರೂ ಎರಡೆರಡು ತಂಡಗಳಾಗಿ ಜಟಾಪಟಿ ನಡೆಸುತ್ತಿದ್ದಾಗ ಗುರೂಜಿ ಮತ್ತು ನಟಿ ಅಮೂಲ್ಯ ನಡುವೆ ನಡೆದ ಸಂಭಾಷಣೆ ಎಲ್ಲರ ನಗುವಿಗೆ ಕಾರಣವಾಗಿದೆ. ಅಲ್ಲದೆ, ಅಮೂಲ್ಯ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕಂಡ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ನಿಮ್ಮ ತುಟಿ ಬಹಳ ಅಂದವಾಗಿದೆ. ಹೀಗಿದ್ರೆ ಒಳ್ಳೆಯದು, ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತಿಗೆ ಅಮೂಲ್ಯ ಸ್ಮೈಲ್‌ ಮಾಡಿದ್ದಾರೆ. ಇದನ್ನ ನೋಡುತ್ತಿದ್ದ ರಾಕೇಶ್ ಅಡಿಗ ಸುಮ್ಮನಿರದೆ ಗುರೂಜಿ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾನೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಬೀಳ್ತಿಯಾ ಎಂದಾಗ ಮನೆಮಂದಿಯೆಲ್ಲಾ ನಕ್ಕಿದ್ದಾರೆ. ಇನ್ನು ಅರುಣ್ ಸಾಗರ್ ಅವರು ಕೂಡ ತುಟಿ ನೋಡಿ ಭವಿಷ್ಯ ಹೇಳುವಂತೆ ಗುರೂಜಿಗೆ ಕೇಳಿದ್ದಾರೆ. ಆಗ ಆರ್ಯವರ್ಧನ್‌ ಗುರೂಜಿಯವರು, ಮೊದಲು ನೀವು ಮೀಸೆ ಬೊಳಿಸಿಕೊಂಡು ಬನ್ನಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News