ಬೆಂಗಳೂರು: ಸಿನಿಮಾರಂಗ ಎಷ್ಟೋ ಯುವ ಮನಸ್ಸುಗಳ ಕನಸಿನ ಲೋಕ, ಸಿನಿರಸಿಕರ ಮನಸನ್ನ ಗೆದ್ದು ಮೋಡಿ ಮಾಡಿದಂತಹ ಹೊಸತಂಡಗಳ ಹಲವು ಉದಾಹರಣೆಗಳು ನಮ್ಮ ಸ್ಯಾಂಡಲ್ ವುಡ್ ನಲ್ಲಿವೆ.ದೊಡ್ಡ ದೊಡ್ಡ ಸ್ಟಾರ್ ನಟರೂ ಕೂಡ ಹೊಸಬರಿಗೆ ಬೆಂಬಲಿಸಿ, ಪ್ರೋತ್ಸಾಹಿಸಿ ಬೆನ್ನೆಲುಬಾಗಿ ನಿಂತಿರುತ್ತಾರೆ. ಇದೀಗ 'ಮರ್ದಿನಿ' ಎಂಬ ಸಿನಿಮಾ ಕೂಡ ಪ್ರೇಕ್ಷಕರ ಮನ ಗೆಲ್ಲಲ್ಲು ಸಿದ್ದವಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಮರ್ದಿನಿ ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬೆಂಬಲ ವ್ಯಕ್ತಪಡಿಸಿ ಶುಭಕೋರಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಚಿತ್ರರಂಗಕ್ಕೆ ಮೊದಲಬಾರಿಗೆ ಸಿನಿಮಾವನ್ನ ಅರ್ಪಿಸುತ್ತಿರುವ ಜಗದೀಶ್ ಜಗ್ಗಿ ಕಷ್ಟದ ದಿನಗಳು ಹಾಗೂ ಬೆಳವಣಿಗೆಗಳನ್ನ ನೆನೆದು ನನ್ನ ಸಹೋದರನೆನಂದು ಚಿತ್ರ ತಂಡಕ್ಕೆ ಪ್ರೀತಿಯ ಶುಭಹಾರೈಸಿದ್ದರು ಕಿಚ್ಚ ಸುದೀಪ್. ಇದೀಗ ಇದೇ ಸೆಪ್ಟೆಂಬರ್ 16 ಕ್ಕೆ ತೆರೆಮೇಲೆ ಬಿಡುಗೊಳ್ಳುತ್ತಿದೆ 'ಮರ್ದಿನಿ' 


ಇದನ್ನೂ ಓದಿ: Bigg Boss OTT: ಕ್ಲೀನ್ ಶೇವ್ ಲುಕ್ ನಲ್ಲಿ ‘ಬಿಗ್’ ವೇದಿಕೆ ಏರಿದ ಕಿಚ್ಚ: ಸುದೀಪ್ ಹೊಸ ಗೆಟಪ್ ಗೆ ಕಾರಣ ಏನು ಗೊತ್ತಾ?[[{"fid":"253984","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಕಿರಣ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಭಾರತಿ ಜಗ್ಗಿ ಬಂಡವಾಳ ಹೂಡಿದ್ದಾರೆ. ರಿತನ್ಯ ಹೂವಣ್ಣ, ಮನೋಹರ್ ಎನ್, ಅಕ್ಷಯ್ ಗೌಡ, ಇಂಚರ ಜೋಷಿ, ಅನುಪ್ ಶೂನ್ಯ, ರಚನ ಎಸ್, ಮನ್ಮೊಹನ್ ರೈ, ಸುಷ್ಮಿತ ಸೋನು, ಅಂಕಿತ್ ಜೈ ಹಾಗೂ ಹಲವು ನಟರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನೂ ಹಿತನ್ ಹಾಸನ್ ರವರ ಸಂಗೀತವಿದ್ದು, ಅರುಣ್ ಸುರೇಶ್ ರವರ ಛಾಯಾ ಚಳಕ, ವಿಶ್ವ ರವರ ಸಂಕಲನವಿದೆ. ಸಸ್ಪೆನ್ಸ್ ತ್ರಿಲ್ಲರ್ ಕಥೆವುಳ್ಳ ಮರ್ದಿನಿ ಸಿನಿಮಾ ಸೆಪ್ಟೆಂಬರ್ 16 ರಂದು ಬಿಡುಗಡೆಗೊಳ್ಳುತ್ತಿದ್ದು ಜನರ ಮನವನ್ನ ಹೇಗೆ ಗೆಲ್ಲುತ್ತದೆಂಬುದು ಕಾದು ನೋಡ್ಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.