Bigg Boss OTT: ಕ್ಲೀನ್ ಶೇವ್ ಲುಕ್ ನಲ್ಲಿ ‘ಬಿಗ್’ ವೇದಿಕೆ ಏರಿದ ಕಿಚ್ಚ: ಸುದೀಪ್ ಹೊಸ ಗೆಟಪ್ ಗೆ ಕಾರಣ ಏನು ಗೊತ್ತಾ?

ಕಿಚ್ಚ ಈಗಾಗಲೇ ತಮ್ಮ ವಿಭಿನ್ನ ನಿರೂಪಣೆಯ ಶೈಲಿಯ ಮೂಲಕ ಬಿಗ್ ಬಾಸ್ ನ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದೀಗ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ ನಲ್ಲಿ ತಮ್ಮ ಖದರ್ ತೋರಿಸುತ್ತಿದ್ದಾರೆ. ಪ್ರತೀ ದಿನ ವಿಭಿನ್ನವಾದ ಗೆಟಪ್ ನಲ್ಲಿ ಮಿಂಚುವ ಸುದೀಪ್ ಅವರನ್ನು ನೋಡೋದಕ್ಕೆಂದೇ ಅನೇಕ ಅಭಿಮಾನಿಗಳಿಗೆ ತೆರೆ ಮುಂದೆ ಕಾದುಕುಳಿತುಕೊಳ್ಳುತ್ತಾರೆ.

Written by - Bhavishya Shetty | Last Updated : Aug 21, 2022, 10:46 AM IST
    • ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್
    • ಬಿಗ್ ಬಾಸ್ ನಿರೂಪಣೆಯಿಂದಲೇ ಗಮನ ಸೆಳೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
    • ಕಿಚ್ಚ ಸುದೀಪ್ ಕ್ಲೀನ್ ಶೇವ್ ಲುಕ್ ಗೆ ಅಭಿಮಾನಿಗಳು ಫಿದಾ
Bigg Boss OTT: ಕ್ಲೀನ್ ಶೇವ್ ಲುಕ್ ನಲ್ಲಿ ‘ಬಿಗ್’ ವೇದಿಕೆ ಏರಿದ ಕಿಚ್ಚ: ಸುದೀಪ್ ಹೊಸ ಗೆಟಪ್ ಗೆ ಕಾರಣ ಏನು ಗೊತ್ತಾ? title=
Bigg Boss OTT

ಕನ್ನಡ ಚಿತ್ರರಂಗ ಕಂಡ ಅಭೂತಪೂರ್ವ ಕಲಾವಿದ ಕಿಚ್ಚ ಸುದೀಪ್. ಅಭಿಮಾನಿಗಳ ಪಾಲಿಗೆ ದೇವರಂತೆ ಇರುವ ಕಿಚ್ಚ ಅಭಿನಯ ಚಕ್ರವರ್ತಿ ಎಂದೇ ಕರುನಾಡಿನಲ್ಲಿ ಫೇಮಸ್ ಆಗಿದ್ದಾರೆ. ಕಿಚ್ಚ ನಟನೆಗೂ ಸೈ, ಅಡುಗೆಗೂ ಸೈ, ಹಾಡಿಗೂ ಸೈ, ಡ್ಯಾನ್ಸ್ ಗೂ ಸೈ. ಇವೆಲ್ಲದಕ್ಕೂ ಮುಖ್ಯವಾಗಿ ಅವರ ನಿರೂಪಣೆ ಶೈಲಿ ಮಾತ್ರ ಎಂಥವರನ್ನೂ ಸಹ ಮಂತ್ರಮುಗ್ಧಗೊಳಿಸುತ್ತೆ. ಅದಕ್ಕೆ ಮುಖ್ಯ ಕಾರಣ ಅವರ ದನಿಯಲ್ಲಿ ಅಡಗಿರುವ ಗತ್ತು. 

ಇದನ್ನೂ ಓದಿ: ‘ಡೊಳ್ಳು’ ಟ್ರೇಲರ್ ರಿಲೀಸ್ ಮಾಡಿದ ಗೋಲ್ಡನ್ ಸ್ಟಾರ್: ಕಲೆಯ ಬೆಲೆ ಬಗ್ಗೆ ಹೇಳಿದ್ದು ಹೀಗೆ

ಕಿಚ್ಚ ಈಗಾಗಲೇ ತಮ್ಮ ವಿಭಿನ್ನ ನಿರೂಪಣೆಯ ಶೈಲಿಯ ಮೂಲಕ ಬಿಗ್ ಬಾಸ್ ನ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದೀಗ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ ನಲ್ಲಿ ತಮ್ಮ ಖದರ್ ತೋರಿಸುತ್ತಿದ್ದಾರೆ. ಪ್ರತೀ ದಿನ ವಿಭಿನ್ನವಾದ ಗೆಟಪ್ ನಲ್ಲಿ ಮಿಂಚುವ ಸುದೀಪ್ ಅವರನ್ನು ನೋಡೋದಕ್ಕೆಂದೇ ಅನೇಕ ಅಭಿಮಾನಿಗಳಿಗೆ ತೆರೆ ಮುಂದೆ ಕಾದುಕುಳಿತುಕೊಳ್ಳುತ್ತಾರೆ. ಆದರೆ ಕಳೆದ ದಿನ ನಡೆದ ಬಿಗ್ ಬಾಸ್ ನ ವಾರದ ಎಪಿಸೋಡ್ ನಲ್ಲಿ ಕಿಚ್ಚ ಕ್ಲೀನ್ ಶೇವ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಕಂಡ ಅಭಿಮಾನಿಗಳು ಶಾಕ್ ಜೊತೆ, ನೆಚ್ಚಿನ ನಟನ ಹೊಸ ಅವತಾರ ಕಂಡು ಫಿದಾ ಆಗಿದ್ದಾರೆ.

ಇನ್ನು ಸುದೀಪ್ ಅವರ ಈ ಹೊಸ ಲುಕ್ ಗೆ ಒಂದು ಪ್ರಮುಖ ಕಾರಣವಿದೆ. ವಿಕ್ರಾಂತ್ ರೋಣಾ ಸಿನಿಮಾದ ನಂತರ ಸಖತ್ ಯಂಗ್ ಆಗಿ ಕಾಣಿಸುತ್ತಿದ್ದ ಕಿಚ್ಚ ಇದೀಗ ಮತ್ತಷ್ಟು ಯಂಗ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣಾ ಸಿನಿಮಾ ಸಕ್ಸಸ್ ಕಂಡಿದೆ. ಸದ್ಯ ‘ಕಬ್ಜ’ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿದ್ದು, ಇದಕ್ಕಾಗಿ ಅವರು ಕ್ಲೀನ್ ಶೇವ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಖತ್ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ರೆಟ್ರೋ ಸ್ಟೈಲ್ ನಲ್ಲಿ ಮೂಡಿಬರಲಿದ್ದು, ಹೀಗಾಗಿ ಕಿಚ್ಚ ಕ್ಲೀನ್ ಶೇವ್ ಮಾಡಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ: ವೂಟ್ ನಲ್ಲಿ ‘ಸೈಬರ್ ವಾರ್’: ತೆರೆಗೆ ಬರಲಿದೆ ‘ಮುಂಬೈ ಅಪರಾಧ ಲೋಕ‘

ಸದ್ಯ ಕಿಚ್ಚ ಸುದೀಪ್ ಅವರ ಈ ಹೊಸ ಲುಕ್ ನ್ನು ಕಲರ್ಸ್ ಸೂಪರ್ ಟಿವಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಅಭಿಮಾನಿಗಳು ಸೇರಿದಂತೆ ಅನೇಕರು ಲೈಕ್ಸ್ ಜೊತೆಗೆ ಕಮೆಂಟ್ ಸಹ ಮಾಡಿದ್ದು, ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News