T Series owner daughter death : ನಿರ್ಮಾಪಕ ಮತ್ತು ನಟ ಕ್ರಿಶನ್ ಕುಮಾರ್ ಅವರು ಪ್ರಮುಖ ನಿರ್ಮಾಣ ಕಂಪನಿ ಟಿ-ಸಿರೀಸ್ ಅಡಿಯಲ್ಲಿ ಅನೇಕ ಬಾಲಿವುಡ್ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅನಿಮಲ್, ಶ್ರೀಕಾಂತ್, ಪೋರ್, ಆದಿಪುರುಷ, ಸರ್ಕಸ್, ದೃಶ್ಯಂ 2 ಸೇರಿದಂತೆ 70 ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಕುಶಾಲ್ ಕುಮಾರ್ T Series ಕಂಪನಿಯನ್ನು ಸ್ಥಾಪಿಸಿದರು. ನಂತರ ಅವರ ಕುಟುಂಬ ಸದಸ್ಯರಾದ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಈ ಕಂಪನಿಯ ಮುಖ್ಯ ಭಾಗವಾಗಿದ್ದಾರೆ. ಟಿ-ಸೀರೀಸ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಆಲ್ಬಮ್ ಹಾಡುಗಳು ಮತ್ತು ಚಲನಚಿತ್ರ ಹಾಡುಗಳು, ಟ್ರೇಲರ್‌ಗಳು ಇತ್ಯಾದಿಗಳ ಹಕ್ಕುಗಳನ್ನು ಪಡೆದು ಬಿಡುಗಡೆ ಮಾಡಿದೆ.


ಇದನ್ನೂ ಓದಿ:ನಟಿ, ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ ಸಹೋದರ!


ಈ ಜನಪ್ರಿಯ ಕಂಪನಿಯ ಸಹ-ಮಾಲೀಕ ಕ್ರಿಶನ್ ಕುಮಾರ್ ಅವರ ಪುತ್ರಿ ದಿಶಾ ಕುಮಾರ್ ಕಳೆದ ಕೆಲವು ವರ್ಷಗಳಿಂದ ಗಂಭೀರ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜರ್ಮನಿಯಲ್ಲಿ ದಿಶಾ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. 


ದಿಶಾ ಕೊನೆಯ ಬಾರಿಗೆ ಅನಿಮಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ದಿಶಾ ಕುಮಾರ್ ಅವರು 21ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಇದು ಬಾಲಿವುಡ್ ವಲಯವನ್ನು ಬೆಚ್ಚಿಬೀಳಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.