Taapsee Pannu : ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಫಿಟ್ ಸೆಲೆಬ್ರಿಟಿಗಳಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು. ಇತ್ತೀಚೆಗೆ ತಾಪ್ಸಿ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದು, ತಮ್ಮ ಡಯೆಟಿಷಿಯನ್‌ಗೆ ಖರ್ಚು ಮಾಡುವ ಮೊತ್ತದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಾಪ್ಸಿ ಬಾಡಿ ಫಿಟ್ನೆಸ್‌ಗೆ ಖರ್ಚು ಮಾಡುವ ಹಣದ ಮೊತ್ತ ಕೇಳಿ ನೆಟ್ಟಿಗರು ಶಾಖ್‌ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಲಾಲನ್‌ಟಾಪ್‌ ನಡೆಸಿದ ಸಂದರ್ಶನದಲ್ಲಿ ತಾಪ್ಸಿ ಭಾಗವಹಿಸಿದ್ದರು. ಆಗ ಸಂದರ್ಶಕ ನಟಿಯನ್ನು ಆಹಾರ ತಜ್ಞರ ಸೇವೆಗಳಿಗೆ ನಿಖರವಾಗಿ ಎಷ್ಟು ಖರ್ಚು ಮಾಡ್ತೀರಾ ಅಂತ ಪ್ರಶ್ನೆ ಕೇಳುತ್ತಾರೆ. ಒಂದೆರಡು ಸೆಕೆಂಡುಗಳ ಕಾಲ ತಡವರಿಸಿದ ತಾಪ್ಸಿ, ತಿಂಗಳಿಗೆ ಸರಿಸುಮಾರು 1 ಲಕ್ಷ ರೂಪಾಯಿ ಅಂತ ಹೇಳುತ್ತಾರೆ. ಅದನ್ನು ಕೇಳಿ ಸಂದರ್ಶಕನಿಗೆ ಶಾಕ್‌ ಆಗುತ್ತದೆ. ಅಲ್ಲದೆ, ತಾಪ್ಸಿ ಡಯಟಿಷಿಯನ್‌ಗೆ ಇಷ್ಟು ಖರ್ಚು ಯಾಕ್‌ ಮಾಡ್ತಾರೆ ಎನ್ನುವ ಕಾರಣವನ್ನು ವಿವರಿಸಿದರು.


ಇದನ್ನೂ ಓದಿ: Weekend with Ramesh : ʼವೀಕೆಂಡ್ ವಿತ್ ರಮೇಶ್ʼ ಫಸ್ಟ್‌ ಗೆಸ್ಟ್‌ ಯಾರ್‌ ಗೊತ್ತಾ..! ಶಾಕಿಂಗ್‌ ವಿಚಾರ ಇಲ್ಲಿದೆ ನೋಡಿ


ಅಲ್ಲದೆ, ನಾನು ಯಾವ ಸಿನಿಮಾ ಮಾಡುತ್ತಿದ್ದೇನೆ. ಆ ಸಿನಿಮಾದ ಶೂಟಿಂಗ್‌ ಯಾವ ಸ್ಥಳದಲ್ಲಿ ನಡೆಯುತ್ತಿದೆ. ನಾನು ಯಾವ ಊರಿನಲ್ಲಿ ಇದ್ದೇನೆ ಎಂಬುದರ ಆಧಾರದ ಮೇಲೆ ನನ್ನ ಆಹಾರಕ್ರಮವು ನಿರಂತರವಾಗಿ ಬದಲಾಗುತ್ತಿರುತ್ತದೆ. ವೃತ್ತಿಪರರು, ಯಾವ ನಗರ ಅಥವಾ ಯಾವ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ ಎಂಬುದರ ಆಧಾರದ ಮೇಲೆ ನಮಗೆ ಯಾವ ಆಹಾರವು ಉತ್ತಮ ಎಂಬುವುದನ್ನು ತಿಳಿಸುತ್ತಾರೆ. ಹವಾಮಾನ ಮತ್ತು ಸ್ಥಳೀಯ ಉತ್ಪನ್ನಗಳು ಇಲ್ಲಿ ಪ್ರಮುಖವಾಗಿರುತ್ತವೆ.


ಇನ್ನು ತಾಪ್ಸಿ ಸಿನಿಮಾ ವಿಚಾರಕ್ಕೆ ಬರುವುದಾದ್ರೆ, ಅವರು ಕೊನೆಯ ಬಾರಿಗೆ ಜೀ 5ನಲ್ಲಿ ಬಿಡುಗಡೆಯಾದ 'ಬ್ಲರ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಇದೀಗ 'ಡುಂಕಿ', 'ಏಲಿಯನ್' ಮತ್ತು 'ವೋ ಲಡ್ಕಿ ಹೈಲ್ ಕಹಾನ್ʼ ಸೇರಿದಂತೆ ಒಂದೆರಡು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.