Ram Gopal Varma : 37 ವರ್ಷಗಳ ನಂತರ ʼB Techʼ ಪದವಿ ಪಡೆದ ಆರ್‌ಜಿವಿ..! ʼಸೂಪರ್‌ ಥ್ರಿಲ್‌ʼ ಗುರು

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಮುಗಿಸಿದ 37 ವರ್ಷಗಳ ನಂತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಕುರಿತು ಮಾರ್ಕ್ಸ್‌ ಶೀಟ್‌ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ. 

Written by - Krishna N K | Last Updated : Mar 16, 2023, 02:46 PM IST
  • ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿ ಟೆಕ್ ಪದವಿ ಪಡೆದಿದ್ದಾರೆ.
  • 37 ವರ್ಷಗಳ ನಂತರ ಎಂಜಿನಿಯರಿಂಗ್ ಪದವಿ ಸ್ವೀಕರಿಸಿದ್ದಾರೆ.
  • ಆರ್‌ಜಿವಿ ಜುಲೈ 1985 ರಲ್ಲಿ ನಡೆದ ಪರೀಕ್ಷೆಯಲ್ಲಿ ಬಿ ಟೆಕ್ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.
Ram Gopal Varma : 37 ವರ್ಷಗಳ ನಂತರ ʼB Techʼ ಪದವಿ ಪಡೆದ ಆರ್‌ಜಿವಿ..! ʼಸೂಪರ್‌ ಥ್ರಿಲ್‌ʼ ಗುರು title=

Ram Gopal Varma B Tech : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬಿಟೆಕ್ ಮುಗಿಸಿದ 37 ವರ್ಷಗಳ ನಂತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಕುರಿತು ಮಾರ್ಕ್ಸ್‌ ಶೀಟ್‌ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ. 

ʼನಾನು ಪಾಸ್‌ ಆದ 37 ವರ್ಷಗಳ ನಂತರ ಇಂದು ನನ್ನ ಬಿ ಟೆಕ್ ಪದವಿಯನ್ನು ಸ್ವೀಕರಿಸಲು ಸೂಪರ್ ಥ್ರಿಲ್ ಆಗಿದ್ದೇನೆ, 1985 ರಲ್ಲಿ ನಾನು ಸಿವಿಲ್ ಇಂಜಿನಿಯರಿಂಗ್ ಅಭ್ಯಾಸ ಮಾಡಲು ಆಸಕ್ತಿ ಇಲ್ಲದ ಕಾರಣ ಅದನ್ನು ಎಂದಿಗೂ ತೆಗೆದುಕೊಂಡಿದ್ದಿಲ್ಲ.ʼ ಅಂತ ಬರೆದುಕೊಂಡು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ವಿಶ್ವವಿದ್ಯಾನಿಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ದೇಶಕರು ಜುಲೈ 1985 ರಲ್ಲಿ ನಡೆದ ಪರೀಕ್ಷೆಯಲ್ಲಿ ಬಿ ಟೆಕ್ (ಸಿವಿಲ್ ಇಂಜಿನಿಯರಿಂಗ್) ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು.

ಇದನ್ನೂ ಓದಿ: ʼವಿಕಿಪೀಡಿಯಾʼವನ್ನು ಸಂಪೂರ್ಣವಾಗಿ ʼಎಡಪಂಥೀಯರುʼ ಹೈಜಾಕ್‌ ಮಾಡಿದ್ದಾರೆ..!

ಆರ್‌ಜಿವಿ ಅವರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಂದಿಗೆ ಚಿತ್ರವನ್ನು ಹಂಚಿಕೊಂಡು ʼಅಶಿಕ್ಷಿತರಾದ ನಾನು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪಡೆದ ಪ್ರಾಧ್ಯಾಪಕರೊಂದಿಗೆʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಅಲ್ಲದೆ, ʼಗೌರವಾನ್ವಿತ ಉಪಕುಲಪತಿ ಪ್ರೊ.ರಾಜ ಶೇಖರ್ ಅವರಿಗೆ ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ಹೇಳಿದ್ದೇನೆ ಆದರೆ ಅವರು ನನ್ನನ್ನು ಒತ್ತಾಯಿಸಿದರುʼ ಎಂದು ಆರ್‌ಜಿವಿ ಹೇಳಿದ್ದಾರೆ. ಸದ್ಯ ಆರ್‌ಜಿವಿ ಪದವಿ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News