Taapsee Pannu six pack : ಇಂಡಿಯನ್‌ ಫಿಟ್‌ ನಟಿಯರಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು. ನಟನೆಯಲ್ಲದೇ ರೂಪದರ್ಶಿಯಾಗಿಯೂ ಸಹ ಹೆಸರು ಮಾಡಿದ್ದಾರೆ. ಪ್ರಸ್ತುತ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ತಾಪ್ಸಿ ಪನ್ನು 2010 ರಲ್ಲಿ ತೆಲುಗು ಸಿನಿಮಾ ʼಜುಮ್ಮನಂದಿ ನಾದಂʼ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ 2011 ರಲ್ಲಿ ವೆಟ್ರಿಮಾರನ್ ನಿರ್ದೇಶನದ ಧನುಷ್ ಅಭಿನಯದ ʼಆಡುಕಾಲಂʼ ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ತಾಪ್ಸಿ ತಮಿಳು ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದರು. ಇದರ ನಂತರ ಅವರು ವಂದನ್ ಬಂಧನ್, ಕಾಂಚನಾ 2- ಗೇಮ್ ಓವರ್ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.


Sanjay dutt : ʼಕೆಡಿʼ ಶೂಟಿಂಗ್‌ ವೇಳೆ ʼಬಾಂಬ್‌ ಬ್ಲಾಸ್ಟ್‌ʼ.. ಸತ್ಯಾಂಶ ಬಿಚ್ಚಿಟ್ಟ ʼಸಂಜಯ್‌ ದತ್‌ʼ..!


ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಮಲಯಾಳಂನಂತಹ ಇತರ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಸದ್ಯ ಅವರು ಬಾಲಿವುಡ್ ಚಿತ್ರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ನಟಿ ತಾಪ್ಸಿ ತಮಗೆ ಪ್ರಾಮುಖ್ಯತೆ ನೀಡುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಸದ್ಯ ತಾಪ್ಸಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ, ತಮ್ಮ ಜಿಮ್ ತರಬೇತುದಾರ ಸುಜೀತ್ ಕರ್ಗುಡ್ಕರ್ ಅವರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 


ಇದರಲ್ಲಿ ನಟಿ ತಾಪ್ಸಿ ಸಿಕ್ಸ್ ಪ್ಯಾಕ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಸ್‌ ಪ್ಯಾಕ್‌ ಪಡೆಯಲು ಸ್ಟೀರಾಯ್ಡ್‌ ಬಳಸಲಿಲ್ಲ, ಸುರಕ್ಷಿತ ಪೂರಕಗಳನ್ನು ಮಾತ್ರ ಬಳಸಿದ್ದೇನೆ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ. ಸದ್ಯ ತಾಪ್ಸಿ ಲುಕ್‌ ನೋಡಿದ ನೆಟ್ಟಿಗರು ಬಾಯ್ತೆರೆದು ನೋಡುತ್ತಿದ್ದಾರೆ. ಹಾಟ್‌ ಬ್ಯೂಟಿ ಫಿಟ್‌ ಲುಕ್‌ಗೆ ಪ್ಯಾನ್ಸ್‌ ಫಿದಾ ಆಗಿದ್ದು, ಹಾರ್ಟ್‌, ಫೈರ್‌ ಇಮೋಜಿ ಮೂಲಕ ಲವ್‌ ತೋರಿಸುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.