Weekend with Ramesh highest TRP: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕರುನಾಡಿನಾದ್ಯಂತ ಭಾರೀ ಖ್ಯಾತಿ ಪಡೆದಿದೆ. ಮನೆ ಮಾತಾಗಿರುವ ಈ ಕಾರ್ಯಕ್ರಮವನ್ನು ಜೀ ಕನ್ನಡ ವಾಹಿನಿ ಆಯೋಜಿಸಿದ್ದರೆ, ನಟ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿದ್ದಾರೆ. ಜನಸಾಮಾನ್ಯರಂತೆ ಬದುಕುತ್ತಾ ಸಾಧನೆಯ ಶಿಖರ ಏರಿರುವ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ.
ಇದೀಗ ಕಿರುತೆರೆಯ ಜನಪ್ರಿಯ ಸಂದರ್ಶನ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದ್ದು, ಈಗಾಗಲೇ ನಾಲ್ವರು ಸಾಧಕರ ಜೀವನ ಚರಿತ್ರೆ ಕನ್ನಡಿಗರ ಮುಂದೆ ತೆರೆದಿಡಲಾಗಿದೆ. ಇನ್ನು ಮುಂಬರುವ ಸಂಚಿಕೆಯಲ್ಲಿ ನಟ ಡಾಲಿ ಧನಂಜಯ ಅತಿಥಿಯಾಗಿ ಬರುತ್ತಿದ್ದಾರೆ. ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ಬಂಡೀಪುರದಲ್ಲಿ ಪ್ರಧಾನಿ ಮೋದಿಗೆ ಕಾಣಿಸದ ಹುಲಿ: ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ?
ಇನ್ನು ಇವೆಲ್ಲದರ ಮಧ್ಯೆ, ಈವರೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅತಿ ಹೆಚ್ಚು TRP ಬಂದದ್ದು ಯಾರು ಅತಿಥಿಯಾಗಿ ಬಂದ ಎಪಿಸೋಡ್’ಗೆ ಎಂಬುದಕ್ಕೆ ಸಂಬಂಧಿಸಿದ ಹಳೇ ವಿಡಿಯೋ ವೈರಲ್ ಆಗ್ತಿದೆ.
ವೀಕೆಂಡ್ ವಿತ್ ರಮೇಶ್ 5ನೇ ಸೀಸನ್ ಮೊದಲ ಸಂಚಿಕೆಗೆ ನಟಿ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು, ಆದರೆ ಅವರ ಭಾಷೆಯ ಬಗ್ಗೆ ಅನೇಕರು ಆಕ್ಷೇಪಣೆ ಸೂಚಿಸಿ, ಕೊಂಚ ಟ್ರೋಲ್ ಕೂಡ ಮಾಡಲಾಗಿತ್ತು. ಆ ಬಳಿಕ ಬಂದದ್ದು ಡ್ಯಾನ್ಸರ್ ಪ್ರಭುದೇವ. ಕಳೆದ ವಾರದ ಹಿರಿಯ ನಟ ದತ್ತಣ್ಣ ಹಾಗೂ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಅವರು ಅತಿಥಿಯಾಗಿ ಬಂದಿದ್ದರು. ಇನ್ನು ಮುಂದಿನ ಸಂಚಿಕೆಯಲ್ಲಿ ಡಾಲಿ ಧನಂಜಯ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಕಿರುತೆರೆಯಲ್ಲಿ ಅದೆಷ್ಟೋ ಕಾರ್ಯಕ್ರಮಗಳು ಬಂದು ಹೋಗಿವೆ, ಕೆಲವೊಂದು ಈಗಲೂ ಚಾಲ್ತಿಯಲ್ಲಿದೆ. ಆದರೆ ಅದಕ್ಕೆ ಬರುವ TRP ಮಾತ್ರ ಕೊಂಚ ಏರುಪೇರಾಗಿರಬಹುದು. ಅಥವಾ ಸಂಪೂರ್ಣವಾಗಿ ಕುಸಿದುಹೋಗಿರಬಹುದು. ಇನ್ನು ಕಳೆದ 9 ವರ್ಷಗಳಲ್ಲಿ 5 ಸೀಸನ್‌ಗಳಾಗಿ ಪ್ರಸಾರಗೊಂಡ 'ವೀಕೆಂಡ್ ವಿತ್ ರಮೇಶ್'ದಲ್ಲೂ ಈ ಪರಿಸ್ಥಿತಿ ಬಂದಿದೆ.
ವೀಕೆಂಡ್ ವಿತ್ ರಮೇಶ್ ಪ್ರಥಮ ಸೀಸನ್’ನಲ್ಲಿ 20 ಸಾಧಕರ 26 ಸಂಚಿಕೆ, 2 ನೇ ಸೀಸನ್ 24 ಸಾಧಕರ 34 ಸಂಚಿಕೆ, 3ನೇ ಸೀಸನ್‌ನಲ್ಲಿ 21 ಸಾಧಕರ 28 ಸಂಚಿಕೆ, 4ನೇ ಸೀಸನ್‌ನಲ್ಲಿ 18 ಸಾಧಕರ 22 ಸಂಚಿಕೆಗಳು ಹಾಗೂ 5 ಸೀಸನ್‌ನಲ್ಲಿ ಈವರೆಗೆ 6 ಸಂಚಿಕೆಗಳಲ್ಲಿ 4 ಜನ ಸಾಧಕರ ಜೀವನಗಾಥೆಯನ್ನು ತಿಳಿಸಲಾಗಿತ್ತು. ಆದರೆ ಇಷ್ಟೆಲ್ಲಾ ಸಾಧಕರು ಬಂದಿದ್ದರೂ ಸಹ ಹೆಚ್ಚು ಟಿಆರ್‌ಪಿ ಬಂದಿದ್ದು ನಟ ದರ್ಶನ್ ಅವರ ಸಂಚಿಕೆಗೆ.
ಈ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದ್ದರು. ''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಟಿ.ಆರ್.ಪಿ ಗಳಿಸಿರುವುದು ದರ್ಶನ್ ರವರ ಎಪಿಸೋಡ್'' ಎಂದು ಹೇಳಿದ್ದರು.
ಈ ವಿಡಿಯೋ ವೈರಲ್ ಆಗಿದ್ದೇ ತಡ, ಡಿಬಾಸ್ ಫ್ಯಾನ್ಸ್ ಸಂತಸದಲ್ಲಿ ತೇಲಾಡಿದ್ದಾರೆ. 31ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ 2016ರ ಜನವರಿ 30 ಹಾಗೂ 31ರಂದು ವಾಹಿನಿಯಲ್ಲಿ ಪ್ರಸಾರವಾಗಿತ್ತು. ತಮ್ಮ ಜೀವನದ ಏಳುಬೀಳಿನ ಕಥೆಯನ್ನು ಹೇಳಿದ್ದ ನಟ ದರ್ಶನ್’ಗೆ ಅಪಾರ ಅಭಿಮಾನಿ ಬಳಗವೇ ಇದೆ.
ಇದನ್ನೂ ಓದಿ: KGF ಜೋಡಿಯ ಸ್ಪೋಟಕ ಬ್ಯಾಟಿಂಗ್ ವ್ಯರ್ಥ: ಬೃಹತ್ ಗುರಿ ತಲುಪಿ ‘ಸೂಪರ್’ ಗೆಲುವು ಸಾಧಿಸಿದ ಲಕ್ನೋ
ಮೊದಲು ಕಾರ್ಯಕ್ರಮಕ್ಕೆ ಬರಲು ನಿರಾಕರಿಸುತ್ತಿದ್ದ ದರ್ಶನ್ ಆಮೇಲೆ ಷರತ್ತಿನ ಮೇಲೆ ಆಗಮಿಸಿದ್ದರು. ಯಾವುದೇ ರಿಯಾಲಿಟಿ ಶೋ ಇರಲಿ, ಅದರಿಂದ ಒಂದು ಲಕ್ಷ ರೂಪಾಯಿಯನ್ನು ರೈತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡುವುದಾದರೆ, ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೇನೆ ಎಂದು ಸಾಮಾಜಿಕ ಕಳಕಳಿಯುಳ್ಳ ಷರತ್ತನ್ನು ಹಾಕಿದ್ರು ಡಿ ಬಾಸ್. ಇದಕ್ಕೆ ಒಪ್ಪಿಗೆ ಸೂಚಿಸಿದ ಜೀ ಕನ್ನಡ ವಾಹಿನಿ ದರ್ಶನ್ ಅವರನ್ನು ಕರೆತಂದಿತ್ತು. ಬಳಿಕ ಶೋನಿಂದ ಬಂದ ಗೌರವಧನವನ್ನು ಮೃತ ರೈತರ ಕುಟುಂಬಕ್ಕೆ ನೀಡಲಾಗಿತ್ತಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.