ನವದೆಹಲಿ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ(Tamannaah Bhatia)ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆಕರ್ಷಕ ಮೈಮಾಟ ಹೊಂದಿರುವ ಈ ಟಾಲಿವುಡ್(Tollywood) ಸುಂದರಿ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡುವ ತಮನ್ನಾ ನಟನೆಗೆ ಫಿದಾ ಆಗದವರೇ ಇಲ್ಲ. ಇಂತಹ ನಟಿಗೆ ಈಗ ಮೋಸ ಆಗಿದೆ. ತಮಗಾಗಿರುವ ಮೋಸದ ವಿರುದ್ಧ ನಟಿ ಸಮರ ಸಾರಲು ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರಂತೆ.


COMMERCIAL BREAK
SCROLL TO CONTINUE READING

ಹೌದು, ಮಿಲ್ಕಿ ಬ್ಯೂಟಿ ತಮನ್ನಾಗೆ ಮೋಸ ಆಗಿದೆಯಂತೆ. ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್​ ಶೆಫ್’​(MasterChef Telugu) ಅಡುಗೆ ಶೋವನ್ನು ತಮನ್ನಾ ನಡೆಸಿಕೊಡುತ್ತಿದ್ದರು. ಈ ಶೋ ನಿರೂಪಣೆಗೆ ತಮನ್ನಾ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಟಿಗೆ ಸರಿಯಾಗಿ ಸಂಭಾವನೆ ನೀಡದೆ ವಂಚಿಸಲಾಗಿದೆಯಂತೆ. ಇದಲ್ಲದೆ ಅಡುಗೆ ರಿಯಾಲಿಟಿ ಶೋ ಸೆಟ್​ನಲ್ಲಿ ಯಾರೂ ಕೂಡ ನಟಿ ಜೊತೆ ಸರಿಯಾಗಿ ನಡೆದುಕೊಂಡಿಲ್ಲವಂತೆ. ಹೀಗಾಗಿ ತಮಗಾಗಿರುವ ಮೋಸದ ವಿರುದ್ಧ ತಮನ್ನಾ ಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರ ತೆಗೆದುಕೊಂಡಿದ್ದಾರಂತೆ.  


ಇದನ್ನೂ ಓದಿ: ಆರ್ಯಾನ್ ಖಾನ್ ಜೊತೆ ಸಿಗರೇಟ್ ವಿಚಾರ ಮಾತನಾಡುತ್ತಿದ್ದೆ ಎಂದ ಅನನ್ಯಾ ಪಾಂಡೆ


ಜೆಮಿನಿ ಟಿವಿಯ ‘ಮಾಸ್ಟರ್‌ಚೆಫ್’ ಅಡುಗೆ ಶೋ(Reality Show) ಮೂಲಕ ನಟಿ ತಮನ್ನಾ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಆರಂಭದಲ್ಲಿಯೇ ಅವರಿಗೆ ಇಲ್ಲಿ ಕಹಿ ಅನುಭವವಾಗಿದೆ. ಆಗಸ್ಟ್ 27ರಂದು ಈ ಅಡುಗೆ ಶೋ ಆರಂಭಗೊಂಡಿದ್ದು, ಇದುವರೆಗೆ 20ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಈ ಅಡುಗೆ ಕಾರ್ಯಕ್ರಮದಲ್ಲಿನಟಿ ಹಾಕಿದ್ದ ಮನಮೋಹಕ ಬಟ್ಟೆಗಳ ಬಗ್ಗೆಯೂ ವ್ಯಾಪಕ ಚರ್ಚೆಯಾಗಿತ್ತು. ಆದರೆ ವಾಹಿನಿಯವರು ನಟಿ ಜೊತೆಗೆ ಸರಿಯಾಗಿ ನಡೆದುಕೊಳ್ಳದೆ ಅಗೌರವ ತೋರಿದ್ದಾರೆ ಅಂತಾ ಆರೋಪಿಸಲಾಗಿದೆ. ಬರಬೇಕಾದ ಸಂಭಾವನೆ ಬಾರದ ಹಿನ್ನೆಲೆ ನಟಿ ಶೋನಿಂದ ಹೊರಬಂದಿದ್ದಾರೆ. ಸದ್ಯ ಖ್ಯಾತ ಆ್ಯಂಕರ್​ ಅನುಸೂಯಾ ಭಾರದ್ವಾಜ್​ ಈ ಶೋ ನಡೆಸಿಕೊಡುತ್ತಿದ್ದಾರೆ.


ತಮನ್ನಾ ಪರ ಅವರ ವಕೀಲರು ಹೇಳಿಕೆ ನೀಡಿದ್ದು, ‘ಮಾಸ್ಟರ್ ಚೆಫ್’ ಅಡುಗೆ ಶೋ(Masterchef Reality Show)ಗೆ ವಾಹಿನಿಯರು ತಮನ್ನಾರಿಗೆ ಬಾಕಿ ಪಾವತಿಸಿಲ್ಲ. ಪ್ರೊಡಕ್ಷನ್ ಹೌಸ್ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯ ವೃತ್ತಿಪರವಲ್ಲದ ನಡವಳಿಕೆಗೆ ಬೇಸರ ವ್ಯಕ್ತಪಡಿಸಿರುವ ನಟಿ ತಮನ್ನಾ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ವಾಹಿನಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ನಟಿ ಶೋನಿಂದ ಹೊರಬಂದಿದ್ದಾರೆ. ವಾಹಿನಿಯ ವಿರುದ್ಧ ಕಾನೂನು ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ’ ಅಂತಾ ಹೇಳಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ನಟಿಗೆ ಮೋಸ ಆಗಿರುವುದಕ್ಕೆ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಡ್ರಗ್ಸ್ ಬಗ್ಗೆ Aryan Khan ಮತ್ತು Ananya Panday ನಡುವಿನ ಮಾತುಕತೆ ವಾಟ್ಸ್ ಆಪ್ ಚಾಟ್ ನಲ್ಲಿ ಬಹಿರಂಗ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ