South Actress: ತಮಿಳು ಚಿತ್ರರಂಗದಲ್ಲಿ ನಯನತಾರಾ - ತ್ರಿಷಾ ನಂತರ 18 ವರ್ಷಕ್ಕೂ ಹೆಚ್ಚು ಕಾಲ ನಾಯಕಿಯಾಗಿ ನಟಿಸುತ್ತಿರುವ ನಟಿ ತಮನ್ನಾ 2005 ರಲ್ಲಿ 'ಕೆಡಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ, ಅವರು ನಟಿಸಿದ ಹ್ಯಾಪಿ ಡೇಸ್ ಚಿತ್ರವು ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಅದರಲ್ಲೂ ನಟ ಧನುಷ್ ಜೊತೆ ನಟಿಸಿದ ‘ಪಡಿಕಧವನ್’ ಸಿನಿಮಾ ಅವರ ಸಿನಿಮಾ ಕೆರಿಯರ್ ಗೆ ದೊಡ್ಡ ತಿರುವು ನೀಡಿತು.


COMMERCIAL BREAK
SCROLL TO CONTINUE READING

ಈ ಚಿತ್ರದ ಯಶಸ್ಸಿನ ನಂತರ, ತಮನ್ನಾ ವಿಜಯ್, ಅಜಿತ್, ಸೂರ್ಯ ಸೇರಿದಂತೆ ಅನೇಕ ಪ್ರಮುಖ ನಟರ ಎದುರು ನಟಿಸಿದರು. ಅದೇ ರೀತಿ ತೆಲುಗಿನಲ್ಲಿ ಹಲವು ನಾಯಕ ನಟರ ಎದುರು ನಟಿಸಿ ಫೇಮಸ್ ಆದರು.


ಇದನ್ನೂ ಓದಿ- BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌


ಒಂದು ಹಂತದಲ್ಲಿ ತಮನ್ನಾಗೆ ಸಿನಿಮಾ ಅವಕಾಶಗಳು ಕಡಿಮೆಯಾಗತೊಡಗಿದವು. ಆ ಸಮಯದಲ್ಲೇ ಪ್ರಭಾಸ್ ಎದುರು ತಮನ್ನಾ ನಟಿಸಿದ್ದ ‘ಬಾಹುಬಲಿ’ ಸಿನಿಮಾ ತೆರೆಕಂಡು ಮತ್ತೆ ಅವರನ್ನು ಲೈಮ್ ಲೈಟ್ ಗೆ ತಂದಿತ್ತು. ಚಿತ್ರದ ಯಶಸ್ಸಿನ ನಂತರ ನಯನತಾರಾ ಹೆಚ್ಚು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಲು ಆಯ್ಕೆ ಮಾಡಿಕೊಳ್ಳ ತೊಡಗಿದರು. 


ಚಲನಚಿತ್ರಗಳ ಹೊರತಾಗಿ, ವೆಬ್ ಸರಣಿಯತ್ತ ಗಮನ ಹರಿಸುತ್ತಿರುವ ತಮನ್ನಾ, ಲಸ್ಟ್ ಸ್ಟೋರಿ 2 ವೆಬ್ ಸರಣಿಯಲ್ಲಿ ನಟಿಸಿದಾಗ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದಾದ ಬಳಿಕ ಇತ್ತೀಚೆಗಷ್ಟೇ ಅವರ ಪೋಷಕರು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.


ಮುಂದಿನ ವರ್ಷ ಇವರಿಬ್ಬರ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮನ್ನಾ ಮದುವೆಯ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ಹೊರಗುಳಿಯುವ ಅನುಮಾನ ಮೂಡಿಸಿದ್ದಾರೆ.


ಇದನ್ನೂ ಓದಿ-ಪಂಚಭಾಷಾ ನಟ ಸುಮನ್ ಅಭಿನಯದ "ತ್ರಿಷ" ಚಿತ್ರಕ್ಕೆ ಮುಹೂರ್ತ


ಈ ಸಂದರ್ಶನದಲ್ಲಿ ಅವರು "ನಾನು ನಟಿಸಲು ಪ್ರಾರಂಭಿಸಿದಾಗ ಹತ್ತು ವರ್ಷ ಸಿನಿಮಾದಲ್ಲಿ ನಟಿಸಿದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದೆ. ಹೇಗಾದರೂ ಮಾಡಿ 30ನೇ ವಯಸ್ಸಿನಲ್ಲಿ ಮದುವೆಯಾಗಿ ಮಗುವನ್ನು ಪಡೆಯುತ್ತೇನೆ ಎಂದು ಭಾವಿಸಿದ್ದೆ. ಆದರೆ ಈಗ 30 ವರ್ಷ ದಾಟಿದರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ.


ಮದುವೆಗೆ ಕೆಲವು ಜವಾಬ್ದಾರಿಗಳು ಬೇಕಾಗುತ್ತವೆ. ನಾವು ಅದಕ್ಕೆ ಸಿದ್ಧರಾಗಿರಬೇಕು. ಹಾಗಾಗಿ ಯಾವಾಗ ನಾನು ಮದುವೆಗೆ ಸಿದ್ಧ ಎಂದು ಅನಿಸುತ್ತದೋ ಆಗ ಖಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ. ತಮನ್ನಾ ಈಗ ಮದುವೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ, ಹಾಗಾಗಿ ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದು ಮಗು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.