BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌

Bigg Boss Kannada 10: ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದ  ಡ್ರೋನ್ ಪ್ರತಾಪ್‌ಗೆ ಸಂಗೀತಾ ಲವ್ ಪ್ರಪೋಸ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕೈ ಹಿಡಿದು ‘ಐ ಲವ್ ಯೂ’ ಎಂದಿದ್ದಾರೆ. ಈ ಸಮಯದಲ್ಲಿ ಡ್ರೋನ್ ಪ್ರತಾಪ್ ನಾಚಿ ನೀರಾಗಿ, ಬಿದ್ದು ಬಿದ್ದು ನಕ್ಕಿದ್ದಾರೆ. 

Written by - Zee Kannada News Desk | Last Updated : Nov 16, 2023, 10:02 AM IST
  • ಡ್ರೋನ್‌ ಪ್ರತಾಪನ್ನು ಪ್ರೀತಿಸುವ ಹುಡುಗಿ ಬಗ್ಗೆ ತಮಾಷೆಗಾಗಿ ಮಾತುಕತೆ ನಡೆಯುತ್ತಿದ್ದು, ನಟಿ ಸಂಗೀತಾ ಶೃಂಗೇರಿ, ನೀತು ಹಾಗೂ ನಮ್ರತಾ ಡ್ರೋನ್ ಪ್ರತಾಪ್ ಕಾಲೆಳೆದಿದ್ದಾರೆ.
  • ಸಂಗೀತಾ ಯಾಕೆ ನಗ್ತಿದ್ದೀಯಾ.. ಐ ಲವ್ ಯೂ ಅಲ್ವಾ.. ಐ ಲವ್ ಯೂ… ಅಂತ ಹೇಳಿದರು.
  • ಡ್ರೋನ್ ಚೆನ್ನಾಗಿ ಕಾಣಿಸುತ್ತಿದ್ದೀರಾ, ಅಕ್ಕನ ತರಹ ಕಾಣ್ತಿದ್ದೀರಾ ಅಂತ ಉತ್ತರಸಿದಕ್ಕೆ ಸಂಗೀತಾ ನೀವು ನನಗೆ ಲವರ್ ತರಹ ಕಾಣ್ತಿದ್ಧೀರಾ ಎಂದರು.
BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌ title=

Sangeetha And Drone Prathap: ಬಿಗ್‌ಬಾಸ್‌ ಮನೆಯೊಳಗೆ ಡ್ರೋನ್‌ ಪ್ರತಾಪನ್ನು ಪ್ರೀತಿಸುವ ಹುಡುಗಿ ಬಗ್ಗೆ ತಮಾಷೆಗಾಗಿ ಮಾತುಕತೆ ನಡೆಯುತ್ತಿದ್ದು, ನಟಿ ಸಂಗೀತಾ ಶೃಂಗೇರಿ, ನೀತು ಹಾಗೂ ನಮ್ರತಾ ಡ್ರೋನ್ ಪ್ರತಾಪ್ ಕಾಲೆಳೆಯುತ್ತಿದ್ದರು.ಡ್ರೋನ್ ಪ್ರತಾಪ್ ದಯವಿಟ್ಟು ಬಿಟ್‌ಬಿಡಮ್ಮ ನನಗೆ ತುಂಬಾ ಗೋಲ್ಸ್‌ ಇದೆ ಲೈಫ್‌ನಲ್ಲಿ ಅಂತೀನಿ ಅಂತ ಹೇಳಿದಕ್ಕೆ, ಸಂಗೀತಾ  ಅಪ್ಪನನ್ನ ಒಪ್ಪಿಸ್ತೀನಿ. ಆದರೂ ಡ್ರೋನ್ ಪ್ರತಾಪ್  ಒಪ್ಪದೆ, ನನಗೆ ಮುಂದೆ ಕೆರಿಯರ್‌ ಇದೆ. ನಮ್ಮಪ್ಪ ನೋಡಿದ ಹುಡುಗಿಯನ್ನ ಮದುವೆ ಆಗಬೇಕು. ನನ್ನನ್ನ ಬಿಟ್‌ಬಿಡಮ್ಮ ಹೇಳಿದರು. ಆಗ ಸಂಗೀತಾ ಈಗ ನಾನೇ ಆ ಹುಡುಗಿ.. ಅಪ್ಪನನ್ನ ಒಪ್ಪಿಸ್ತೀನಿ ಅಂತ ಮತ್ತೆ ಕಾಲೆಳೆದರು. ಡ್ರೋನ್ ಪ್ರತಾಪ್ ಇಲ್ಲ ಅಂತ ನಗಾಡಲು ಆರಂಭಿಸಿದಕ್ಕೆ ಸಂಗೀತಾ  ಯಾಕೆ ನಗ್ತಿದ್ದೀಯಾ.. ಐ ಲವ್ ಯೂ ಅಲ್ವಾ.. ಐ ಲವ್ ಯೂ… ಅಂತ ಹೇಳಿದರು.

ಆ ವೇಳೆ ಡ್ರೋನ್ ಪ್ರತಾಪ್ ನಗುತ್ತಲೇ ನನಗೆ ಇಷ್ಟ ಇಲ್ಲ ಅಂದಿದಕ್ಕೆ ಸಂಗೀತಾ, ನಾನು ಇಷ್ಟ ಇಲ್ವಾ? ನಿಮಗೆ ನಾನು ಇಷ್ಟ ಇಲ್ವಾ? ಅಂತ ಕೇಳಿದಕ್ಕೆ ಮತ್ತೆ ಪ್ರತಾಪ್ ನಗುತ್ತಲೇ ಇಲ್ಲವೆಂದರು. ಸಂಗೀತಾ ಯಾಕೆ ನಗ್ತಿದ್ಧೀರಾ.. ನಾನು ಫನ್ನಿ ಆಗಿ ಕಾಣ್ತಿದ್ಧೀನಾ? ನಾನು ನಿಮಗೆ ಚೆನ್ನಾಗಿ ಕಾಣಿಸ್ತಿಲ್ವಾ? ಅಂತ ಪ್ರಶ್ನಿಸಿದಕ್ಕೆ ಡ್ರೋನ್  ಚೆನ್ನಾಗಿ ಕಾಣಿಸುತ್ತಿದ್ದೀರಾ. ಅಕ್ಕನ ತರಹ ಕಾಣ್ತಿದ್ದೀರಾ.. ಉತ್ತರಸಿದರು. ಸಂಗೀತಾ  ನೀವು ನನಗೆ ಲವರ್ ತರಹ ಕಾಣ್ತಿದ್ಧೀರಾ. ನನ್ನ ಫ್ಯೂಚರ್‌ ಹಸ್ಬೆಂಡ್‌ ನಿಮ್ಮಲ್ಲಿ ಕಾಣ್ತಿದೆ ಎಂದ ರೇಗಿಸಿದರು.ಡ್ರೋನ್ ಪ್ರತಾಪ್  ಇಲ್ಲ ನನಗೆ ಅಕ್ಕನ ತರಹ ಕಾಣ್ತಿದ್ದೀರಾ ಅಂತ ಮತ್ತೆ ಹೇಳಿದರು. ಸಂಗೀತಾ ಹಾಗೆಲ್ಲಾ ಹೇಳಬೇಡಿ. ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ. ನಿಮ್ಮನ್ನ ನೋಡಿದಾಗಿನಿಂದ ನನಗೆ ಕ್ರಶ್ ಆಗ್ಬಿಟ್ಟಿದೆ ಎಂದಿದಕ್ಕೆ ಡ್ರೋನ್ ಪ್ರತಾಪ್  ನನ್ನ ಮೇಲಾ? ಅಂತ ಆಶ್ಚರ್ಯದಿಂದ ಕೇಳಿದರು. ಅದಕ್ಕೆ ಸಂಗೀತಾ ಹೂ ಎಂದರು.

ಇದನ್ನು ಓದಿ: ಪ್ರತಾಪ್ ನನ್ನು ಹೊಗಳಿದ ವಿನಯ್!!

ಬಳಿಕ  ಪ್ರತಾಪ್  ಆಯ್ತು! ನನ್ನ ಹತ್ತಿರ ದುಡ್ಡಿಲ್ಲ ಎಂದಿದಕ್ಕೆ ಸಂಗೀತಾ  ದುಡ್ಡಿಗಾಗಿ ಯಾರಾದರೂ ಪ್ರೀತಿ ಮಾಡ್ತಾರಾ? ಮದುವೆ ಆಗ್ತಾರಾ? ನಿಮ್ಮ ಸ್ಮೈಲ್, ಹೃದಯ, ಉಸ್ತುವಾರಿ ನೋಡಿ ಫ್ಲಾಟ್‌ ಆಗ್ಬಿಟ್ಟೆ.. ಹೇಳಿದರು. ಆಗ ಡ್ರೋನ್ ನಾನು ನಿಮ್ಮನ್ನ ಎಲ್ಲೂ ಕರ್ಕೊಂಡ್ ಹೋಗಲ್ಲ. ನನ್ನದು ಬೋರಿಂಗ್ ಲೈಫ್. ಅದಕ್ಕೆ ಸಂಗೀತಾ ನಾನು ಕರ್ಕೊಂಡ್ ಹೋಗ್ತೀನಿ. ನಾನೇ ನಿಮಗೆ ಎಂಟರ್‌ಟೇನ್ಮೆಂಟ್ ಮಾಡ್ತೀನಿ. ಆ ವೇಳೆ
 ಪ್ರತಾಪ್  ವರ್ಷಗಳ ಕಾಲ ನಾನು ಹಾಗೇ ಇರೋದು ಎಂದಿದಕ್ಕೆ ಸಂಗೀತಾ ಬದುಕಿರೋವರೆಗೂ ಜೊತೆಗೆ ಇರ್ತೀನಿ. ಅದಕ್ಕೆ ಡ್ರೋನ್  ಸಿನಿಮಾಗೆ ಹೋಗಲ್ಲ, ರೆಸ್ಟೋರೆಂಟ್‌ಗೆ ಹೋಗಲ್ಲ, ಪಾರ್ಕ್‌ಗೆ ಹೋಗಲ್ಲ ಎಂದಿದಕ್ಕೆ ಸಂಗೀತಾ  ಏನೂ ಬೇಡ ಎಂದು ಹೇಳಿದರು. 

ಡ್ರೋನ್ ಪ್ರತಾಪ್  ನಮ್ಮ ಮನೆಯಲ್ಲಿ ಅಡುಗೆ ಮಾಡಬೇಕು ಅಂದಿದಕ್ಕೆ ಸಂಗೀತಾ  ಮಾಡಿದ್ರೆ ಆಯ್ತು ಎಂದರು. ಅದಕ್ಕೆ ಪ್ರತಾಪ್  ನಮ್ಮ ಅಪ್ಪ-ಅಮ್ಮನಿಗೆ ಅಡುಗೆ ಮಾಡಬೇಕು ಸಂಗೀತಾ  ಮಾಡೋಣ.. ನೀವು ಹೂ ಅನ್ನಿ ಸಾಕು ಎಂದು ಉತ್ತರಿಸಿದರು. ಡ್ರೋನ್ ಪ್ರತಾಪ್ ಆಗ ದೀದಿ ಸಾಕು ಅಂತ ಹೇಳಿದಕ್ಕೆ ಸಂಗೀತಾ  ಇಲ್ಲಿ ಬಾಯ್‌ಫ್ರೆಂಡ್ - ಗರ್ಲ್‌ಫ್ರೆಂಡ್ ಆಗಿರೋಣ ಅಂದಿದಕ್ಕೆ ಡ್ರೋನ್ ಪ್ರತಾಪ್  ಬೇಡ ಎಂದರು. ಅಷ್ಟಕ್ಕೂ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಮಧ್ಯೆ ನಡೆದ ಈ ತಮಾಷೆಯ ಮಾತುಕತೆ ವೀಕ್ಷಕರಿಗೆ ಇಷ್ಟವಾಗಿದ್ದು, ಸಂಗೀತಾ  ಕ್ಯೂಟ್‌ನೆಸ್‌ಗೆ ವೀಕ್ಷಕರು, ಅಭಿಮಾನಿಗಳು ಫಿದಾ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News