ಶೂಟಿಂಗ್ ವೇಳೆ ಭಾರೀ ಅಪಘಾತ : ತಮಿಳು ನಟ ವಿಜಯ್ ಸ್ಥಿತಿ ಗಂಭೀರ..!
ಶೂಟಿಂಗ್ ವೇಳೆ ಸಂಭವಿಸಿದ ಅಪಘಾತದಿಂದಾಗಿ ತಮಿಳು ನಟ ವಿಜಯ್ ಅಂತೋನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ವಿಜಯ್ ಅಂತೋನಿ ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಗಾಯಕರಾಗಿ ಹಲವು ಹಾಡುಗಳನ್ನು ಹಾಡಿದ್ದಾರೆ. ಹಲವು ಚಿತ್ರಗಳಿಗೆ ಗೀತರಚನೆಕಾರರಾಗಿ, ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ.
Vijay Antony Health updates : ಶೂಟಿಂಗ್ ವೇಳೆ ಸಂಭವಿಸಿದ ಅಪಘಾತದಿಂದಾಗಿ ತಮಿಳು ನಟ ವಿಜಯ್ ಅಂತೋನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ವಿಜಯ್ ಅಂತೋನಿ ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಗಾಯಕರಾಗಿ ಹಲವು ಹಾಡುಗಳನ್ನು ಹಾಡಿದ್ದಾರೆ. ಹಲವು ಚಿತ್ರಗಳಿಗೆ ಗೀತರಚನೆಕಾರರಾಗಿ, ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ.
ಈ ಹಿಂದೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಅಂತೋನಿ ʼನಾನ್ʼ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಅವರ ಸಲೀಂ, ಇಂಡಿಯಾ ಪಾಕಿಸ್ತಾನ್, ಬಿಚ್ಚಗಾಡು, ಬೇತಾಳುದ, ಎಮನ್, ಅಣ್ಣಾದೊರೈ, ಕಲಿ, ತಿಮಿರು ಬುಡಿಚವನ್, ಖೋಲಕಾರನ್, ಕೋಡಿಯಲ್ಲಿ ಒರುವನ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದರು. ಕನ್ನಡದ ʼಅಮ್ಮಾ ಐ ಲವ್ ಯೂʼ ಸಿನಿಮಾ ವಿಜಯ್ ನಟನೆಯ ಬಿಚ್ಚಗಾಡು ಸಿನಿಮಾದ ರಿಮೇಕ್ ಆಗಿತ್ತು.
ಇದನ್ನೂ ಓದಿ: "ನಟ್ವರ್ ಲಾಲ್" ಅವತಾರದಲ್ಲಿ ಕಾಣಿಸಿಕೊಂಡ ತನುಷ್ ಶಿವಣ್ಣ
ಸದ್ಯ ವಿಜಯ್ ಕಕ್ಕಿ, ಪಿಚೈಕಾರನ್ 2, ಖೋಲಾ, ರಟ್ಟಂ, ಬೋರಿ ಪಟ್ಟದ ಮನ್ಮನ್, ವಲ್ಲಿ ಮೇಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ಆಂಟೋನಿ ಪ್ರಸ್ತುತ ಮಲೇಷ್ಯಾದಲ್ಲಿ 'ಪಿಚೈಕಾರನ್ 2' ಚಿತ್ರೀಕರಣದಲ್ಲಿದ್ದಾರೆ. ಈ ಸಮಯದಲ್ಲಿ ಲಂಕಾವಿ ದ್ವೀಪದ ಬಳಿಯ ಸಮುದ್ರದಲ್ಲಿ ಸ್ಕೈ ಜೆಟ್ ವಾಹನವನ್ನು ಪೈಲಟ್ ಮಾಡುವಾಗ ಅಪಘಾತದ ಸಂಭವಿಸಿ ವಿಜಯ್ ಗಾಯಗೊಂಡಿದ್ದರು. ಅವರ ದೋಣಿಯಲ್ಲಿದ್ದ ನಟಿ ಕಾವ್ಯಾ ಥಾಪರ್ ಸುರಕ್ಷಿತವಾಗಿದ್ದಾರೆ. ಸದ್ಯ ವಿಜಯ್ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ತುಟಿ ಬಿರುಕು ಬಿಟ್ಟಿದ್ದಲ್ಲದೆ, ಹಲ್ಲು ಕೂಡ ಮುರಿದಿದೆಯಂತೆ.
ಇದೀಗ ಈ ಅಪಘಾತ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಗಂಭೀರ ಗಾಯಗಳಿಂದ ಪ್ರಜ್ಞೆ ತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಿಜಯ್ ಅಂತೋನಿ ಅವರನ್ನು ಚಿತ್ರತಂಡ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯ್ ಬಾಯಿಯ ಕೆಳಭಾಗಕ್ಕೆ ತೀವ್ರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಲಾಗಿದೆ. ವಿಜಯ್ ಕುಟುಂಬ ನಿನ್ನೆ ಕೌಲಾಲಂಪುರಕ್ಕೆ ತೆರಳಿದೆ. ಇಂದು ರಾತ್ರಿ ಕುಟುಂಬಸ್ಥರು ಅವರನ್ನು ಚೆನ್ನೈಗೆ ಕರೆತರಲಿದ್ದಾರೆ ಎಂದು ವರದಿಯಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.