Sheela Rajkumar divorce : ಇತ್ತೀಚಿಗೆ ಚಿತ್ರರಂಗದಲ್ಲಿ ಸಡನ್ನಾಗಿ ಮದುವೆ ಆಗೋದು, ಡೈವೋರ್ಸ್‌ ಘೋಷಣೆ ಮಾಡೋದು ಕಾಮನ್‌ ಆಗಿದೆ. ಎಲ್ಲವೂ ಚನ್ನಾಗಿದೆ, ಸೂಪರ್‌ ಜೋಡಿ ಎನ್ನುವಷ್ಟರಲ್ಲೆ, ಸ್ಟಾರ್‌ ನಟಿ ನಟಿಯರು ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿರುತ್ತಾರೆ. ಇದೀಗ ಖ್ಯಾತ ನಟಿಯೊಬ್ಬರು ದಿಢೀರನೇ ಡೈವೋರ್ಸ್‌ ಘೋಷಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟಿ ಶೀಲಾ ರಾಜ್‌ಕುಮಾರ್ ತಮ್ಮ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ಪೋಷಕರ ವಿರೋಧದ ನಡುವೆಯೂ ಸಮುದ್ರದ ಮಧ್ಯದಲ್ಲಿ ವಿಭಿನ್ನವಾಗಿ ಮದುವೆಯಾಗಿದ್ದರು. ಇದೀಗ ಡೈವೋರ್ಸ್‌ ನೀಡಿರುವುದಾಗಿ ತಮ್ಮ ಸೋಷಿಯಲ್‌ ಖಾತೆಯ ಮೂಲಕ ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ: ನೀನು ಬಾತ್‌ ರೂಂ ತೊಳಿ.. ನೀನು.. ಟಾಯ್ಲೆಟ್ ತಿಕ್ಕು, ನಾನು..! ತುಕಾಲಿ ಮಾತು ಕೇಳಿದ್ರೆ ಪಕ್ಕಾ ನಗ್ತೀರಾ..


ನಟಿ ಶೀಲಾ 'ಅರಾಡು ಚಿನಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಟು ಲೆಟ್, ಮಂಡೇಲಾ, ದ್ರೌಪದಿ, ಪಿಚೈಕರನ್ 2, ಜಿಗರ್ತಂಡ ಡಬಲ್ ಎಕ್ಸ್ ಹಿಟ್‌ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದರು. ಪ್ರಸ್ತುತ ಅವರು ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.


ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಶೀಲಾ ಅವರು, ಚಲನಚಿತ್ರ ಸಹಾಯಕ ನಿರ್ದೇಶಕ ತಂಬಿ ಚೋಳನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪೋಷಕರ ವಿರೋಧದ ನಡುವೆಯೂ ಸಮುದ್ರದ ಮಧ್ಯದಲ್ಲಿ ವಿಭಿನ್ನ ರೀತಿಯಲ್ಲಿ ಸಪ್ತಪದಿ ತುಳಿದಿದ್ದರು. ಸಧ್ಯ ತಮ್ಮ ಪತಿಗೆ ವಿಚ್ಚೇದನ ನೀಡಿರುವುದಾಗಿ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಅದ್ರೆ ಈ ನಿರ್ಧಾರಕ್ಕೆ ಕಾರಣವೇನು ಎಂದು ಹೇಳಿಕೊಂಡಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.