ಬೆಂಗಳೂರು : ಟಾಲಿವುಡ್‌, ಕಾಲಿವುಡ್‌, ಸ್ಯಾಂಡಲ್‌ವುಡ್‌ ಪ್ರೇಕ್ಷಕರಿಗೆ ಕಾರ್ತಿ ಅವರನ್ನು ವಿಶೇಷವಾಗಿ ಪರಿಚಯಿಸಬೇಕಿಲ್ಲ. ನಾಯಕ ಕಾರ್ತಿ ತಮ್ಮ ಅಭಿಮಾನಿಗಳನ್ನು ತೆರೆಯ ಮೇಲೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ರಂಜಿಸುತ್ತಿದ್ದಾರೆ. ಕಾರ್ತಿ ಇಂಟರ್‌ನೆಟ್‌ನಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಕಾರ್ತಿ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ಟೀಟ್‌ ಮಾಡಿರುವ ಅವರು,  ಹಲೋ ಗೆಳೆಯರೇ.. ನನ್ನ ಫೇಸ್‌ಬುಕ್ ಪುಟವನ್ನು ಹ್ಯಾಕ್ ಮಾಡಲಾಗಿದೆ.. ನಾವು ಫೇಸ್‌ಬುಕ್ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇವೆ.. ನನ್ನ ಪುಟವನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಮ್ಮಾ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳು ಈ ರೀತಿ ಹ್ಯಾಕ್ ಆಗುತ್ತಿರುವುದು ಹೊಸದೇನಲ್ಲ. ಯಾರಾದರೂ ಯಾರದ್ದಾದರೂ ಫೇಸ್‌ಬುಕ್‌ ಅಥವಾ ಸೋಷಿಯಲ್‌ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಲೇ ಇರುತ್ತವೆ.


ಇದನ್ನೂ ಓದಿ: Ragini Dwivedi : ರಾಗಿಣಿ ದ್ವಿವೇದಿಯ ‘ಬಿಂಗೊ’ ಸಿನಿಮಾಗೆ ಸಚಿವ ವಿ.ಸೋಮಣ್ಣ ಕ್ಲಾಪ್‌


ಪವನ್ ಕಲ್ಯಾಣ್‌ ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್ : ಆ ಸಿನಿಮಾಗಳನ್ನು ಮಾಡಲ್ವಂತೆ ಪವರ್‌ ಸ್ಟಾರ್‌..!


ಕಾರ್ತಿ ಅವರ ಹೊಸ ಚಿತ್ರ ʼಜಪಾನ್ʼ ಅಪ್ಡೇಟ್ ಇಂದು ಬರಲಿದೆ. ಈ ಚಿತ್ರದಲ್ಲಿ ಕಾರ್ತಿಗೆ ಜೋಡಿಯಾಗಿ ಅನು ಇಮ್ಯಾನುಯೆಲ್ ನಟಿಸುತ್ತಿದ್ದಾರೆ. ಸುನೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜು ಮುರುಗನ್ ನಿರ್ದೇಶಿಸುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.