ನವದೆಹಲಿ: ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ:ದಿ ಅನ್ಸಂಗ್ ವಾರಿಯರ್' ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ. ಗಳಿಕೆ ಮಾಡಿದ ವರ್ಷದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರ ಈ ಕುರಿತು ಘೋಷಣೆ ಮಾಡಿರುವ ಚಿತ್ರ ನಿರ್ಮಾಪಕರು ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸುದ್ದಿ ಸಂಸ್ಥೆ PTI ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಕಳೆದ ಶುಕ್ರವಾರ ಈ ಚಿತ್ರ ಒಟ್ಟು 5.38ಕೋಟಿ ರೂ. ಹಣ ಗಳಿಕೆ ಮಾಡಿದ್ದು, ಇದುವರೆಗೆ ಈ ಚಿತ್ರದ ಒಟ್ಟು ಗಳಿಕೆ 202. 83 ಕೋಟಿ ರೂ.ಗೆ ತಲುಪಿದೆ ಎಂದು ಚಿತ್ರ ನಿರ್ಮಾಪಕರು ಘೋಷಿಸಿದ್ದಾರೆ. ಈ ವೇಳೆ ತಮ್ಮ ನೂರನೇ ಚಿತ್ರವನ್ನು ಸೂಪರ್ ಹಿಟ್ ಆಗಿಸಿರುವ ಪ್ರೇಕ್ಷಕರಿಗೆ ಅಜಯ್ ಧನ್ಯವಾದ ತಿಳಿಸಿದ್ದಾರೆ.



COMMERCIAL BREAK
SCROLL TO CONTINUE READING

 ಈ ಕುರಿತು ಟ್ವೀಟ್ ಮಾಡಿರುವ ಅಜಯ್, "ನಿಮ್ಮೆಲ್ಲರ ಪ್ರೀತಿಯಿಂದ ಗೌರವಾನ್ವಿತನಾಗಿದ್ದೇನೆ. 'ತಾನಾಜಿ: ದಿ ಅನ್ಸಂಗ್ ಹಿರೋನನ್ನು 2020ರ ಸೂಪರ್ ಹಿಟ್ ಚಿತ್ರವಾಗಿಸಿದ ನಿಮ್ಮೆಲ್ಲರಿಗೂ ನಾನು ಚಿರಋಣಿ" ಎಂದಿದ್ದಾರೆ. ನಟಿ ಕಾಜೋಲ್ ಕೂಡ ತಮ್ಮ ಇನ್ಸ್ತಾಗ್ರಾಮ್ ಖಾತೆಯಲ್ಲಿ ಚಿತ್ರದ ಯಶಸ್ಸಿನ ಕುರಿತು ಬರೆದು ಕೊಂಡಿದ್ದಾರೆ. "200 ಕೋಟಿ ರೂ.ಗಾಗಿ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು.. 250 ಕೋಟಿ ರೂ. ನಿರೀಕ್ಷೆಯಲ್ಲಿದ್ದೇನೆ" ಎಂದು ಕಾಜೋಲ್ ಬರೆದುಕೊಂಡಿದ್ದಾರೆ.



ಚಿತ್ರ ಬಿಡುಗಡೆಯಾದ 9ನೇ ದಿನವೇ ಈ ಚಿತ್ರ 150 ಕೋಟಿ ರೂ. ಹಣಗಳಿಕೆ ಮಾಡಿತ್ತು. ಅಜಯ್ ದೇವಗನ್ ಅಭಿನಯದ ಈ ಚಿತ್ರದ ಬಾಕ್ಸ್ ಆಫೀಸ್ ಗ್ರಾಫ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನವರಿ 10ರಂದು ಬಿಡುಗಡೆಯಾಗಿದ್ದ ಈ ಚಿತ್ರ ಮೊದಲ ದಿನವೇ ರೂ.15.10 ಕೋಟಿ ರೂ. ಗಳಿಕೆ ಮಾಡಿದೆ. ಗಳಿಕೆಯ ವಿಚಾರದಲ್ಲಿ 'ತಾನಾಜಿ:ದಿ ಅನ್ಸಂಗ್ ವಾರಿಯರ್' ಚಿತ್ರ, ದೀಪಿಕಾ ಪಡುಕೋಣೆ ಅಭಿನಯದ 'ಛಪಾಕ್' ಚಿತ್ರವನ್ನು ಭಾರಿ ಹಿಂದಕ್ಕೆ ಹಾಕಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಈ ಚಿತ್ರ ಒಟ್ಟು 75 ಕೋಟಿ ರೂ. ಗಳಿಕೆ ಮಾಡಿತ್ತು.


ಓಂ ರಾವತ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ಕಾಜೋಲ್ ಹಾಗೂ ಸೈಫ್ ಅಲಿ ಖಾನ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.  ಒಂದೆಡೆ ಕಳೆದ 12 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಈ ಚಿತ್ರದಲ್ಲಿ ಅಜಯ್-ಕಾಜೋಲ್ ಜೋಡಿ ಕಾಣಿಸಿಕೊಂಡಿದ್ದಾರೆ, ಇನ್ನೊಂದೆಡೆ ಸೈಫ್ ಅಲಿ ಖಾನ್-ಅಜಯ್ ದೇವಗನ್ ಕೂಡ ಸುದೀರ್ಘ 21 ವರ್ಷಗಳ ಅವಧಿಯ ನಂತರ ಬೆಳ್ಳಿ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.