Ananya Panday ಮೇಲೆ ಕಣ್ಣು ಹಾಕಿದ್ದಳಂತೆ ಈ ನಟಿ... ಮುತ್ತಿಕ್ಕಲು ಕೂಡ ಮುಂದಾಗಿದ್ದಳಂತೆ!
Ananya Panday ಇತ್ತೀಚೆಗಷ್ಟೇ ಕಾಫಿ ವಿಥ್ ಕರಣ್ ಷೋನಲ್ಲಿ ತನ್ನ ಮುಂಬರುವ ಚಿತ್ರ ಲಾಯಿಗರ್ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಜೊತೆಗೆ ಬಂದಿದ್ದಳು. ಈ ಎಪಿಸೋಡ್ ನಲ್ಲಿ ಅವರು ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾಳೆ ಮತ್ತು ಅವುಗಳಲ್ಲಿ ಓರ್ವ ನಟಿ ಅನನ್ಯ ಮೇಲೆ ಕಣ್ಣು ಹಾಕಿದ್ದ ಸಂಗತಿಯೂ ಕೂಡ ಒಂದಾಗಿದೆ. ಅಷ್ಟೇ ಅಲ್ಲ ಆ ನಟಿ ತನ್ನನ್ನು ತಬ್ಬಿಕೊಂಡು ಮುತ್ತಿಕ್ಕಲು ಕೂಡ ಪ್ರಯತ್ನಿಸಿರುವುದಾಗಿ ಅನನ್ಯ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು ತಿಳಿದುಕೊಳ್ಳೋಣ ಬನ್ನಿ,
Ananya Panday Ignored Tara Sutaria Who Tried To Hug And Kiss Her: ಬಾಲಿವುಡ್ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆಗೆ ತನ್ನ ಮುಂಬರುವ ಚಿತ್ರ ಲಾಯಿಗರ್ ನ ಪ್ರಚಾರಕ್ಕಾಗಿ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಈ ಕಾರ್ಯಕ್ರಮದಲ್ಲಿ ಅನನ್ಯಾ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾಳೆ. ಈ ಚಾಟ್ ಷೋನ ವಿಭಾಗವೊಂದರಲ್ಲಿ ಅನನ್ಯ ನಟಿಯೋರ್ವಳು ತನ್ನನ್ನು ಹಲವಾರು ಬಾರಿ ಚುಂಬಿಸಲು ಮತ್ತು ತಬ್ಬಿಕೊಳ್ಳಲು ಯತ್ನಿಸಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಆ ನಟಿ ಯಾರು ಮತ್ತು ಅನನ್ಯ ಮೇಲೆ ಅದರ ಆಕೆಯ ಪ್ರಭಾವ ಹೇಗಾಯಿತು ತಿಳಿದುಕೊಳ್ಳೋಣ ಬನ್ನಿ
ಅನನ್ಯ ಮೇಲೆ ಕಣ್ಣು ಹಾಕಿದ ನಟಿ
ನಾವು ಈ ಮೊದಲೇ ಹೇಳಿದಂತೆ, ಈ ಸಂಗತಿಯನ್ನು ಖುದ್ದು ಅನನ್ಯ ಪಾಂಡೆ ಬಹಿರಂಗಪಡಿಸಿದ್ದಾಳೆ. ಕಾಫಿ ವಿಥ್ ಕರಣ್ ಕಾರ್ಯಕ್ರಮದ 'ಬಿಂಗೊ' ಸುತ್ತಿನಲ್ಲಿ ಅನನ್ಯ ತನ್ನ ಸಹ-ನಟಿಯೊಬ್ಬಳು ಹಲವಾರು ಬಾರಿ ತಮ್ಮ ಮೇಲೆ ಕಣ್ಣು ಹಾಕಿದ್ದಾಳೆ ಮತ್ತು ಪ್ರತಿಬಾರಿಯೂ ತಾನು ಆಕೆಯನ್ನು ಇಗ್ನೋರ್ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ಚೊಚ್ಚಿಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಸಹ ನಟಿ ತಾರಾ ಸುತಾರಿಯಾ ಬಗ್ಗೆ ಈ ಕಾರ್ಯಕ್ರಮದಲ್ಲಿ ಅನನ್ಯ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ-ಇಟಲಿ & ಬಾಂಗ್ಲಾ ಫ್ಯಾನ್ಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್..!
ತಾರಾ, ಅನನ್ಯಳನ್ನು ಮುತ್ತಿಕ್ಕಲು ಮತ್ತು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾಳೆ
ಯಾವುದೇ ಓರ್ವ ಸಹನಟ ಮಾಡಿರುವ ಫ್ಲರ್ಟಿಂಗ್ ಅನ್ನು ನಿರ್ಲಕ್ಷಿಸಿರುವ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅನನ್ಯ, ನನ್ನ ಸಹ ನಟಿ ತಾರ ಸುತಾರಿಯಾ ಹೆಸರನ್ನು ಉಲ್ಲೇಖಿಸಿದ್ದಾಳೆ. ಕಳೆದ ಬಾರಿಯೂ ಕೂಡ ತಾವು ತಾರಾ ಜೊತೆಗೆ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗಲೂ ಕೂಡ ತಾರಾ ಕೌಚ್ ಮೇಲೆ ತನ್ನನ್ನು ಚುಂಬಿಸಲು ಮತ್ತು ತಬ್ಬಿಕೊಳ್ಳಲು ಯತ್ನಿಸಿದ್ದಳು ಮತ್ತು ಅದು ತನಗೆ ಕಿಂಚಿತ್ತೂ ಕೂಡ ಇಷ್ಟವಾಗಲಿಲ್ಲ ಎಂದು ಅನನ್ಯ ಹೇಳಿದ್ದಾಳೆ.
ಇದನ್ನೂ ಓದಿ-ಡಾಲಿ ʼಮಾನ್ಸೂನ್ ರಾಗʼ ಬಿಡುಗಡೆಗೆ ದಿನಗಣನೆ: ಅಭಿಮಾನಿಗಳಲ್ಲಿ ಮನೆ ಮಾಡಿದ ಸಂತಸ
ಅನನ್ಯ ಉತ್ತರವನ್ನು ಕೇಳಿದ ಕರಣ್ 'ತಾರಾಳನ್ನು ನೀನು ಇಷ್ಟಪಡುವುದಿಲ್ಲವೇ?' ಎಂದು ಮರುಪ್ರಶ್ನಿಸಿದ್ದಾರೆ. ಅದಕ್ಕೆ ಮರುಉತ್ತರಿಸಿದ ಅನನ್ಯ, ತನಗೆ ತಾರಾ ಅಂದರೆ ಇಷ್ಟ ಆದರೆ, ತಾರಾ ಚುಂಬಿಸುವುದು ಹಾಗೂ ತಬ್ಬಿಕೊಳ್ಳುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.