ಡಾಲಿ ʼಮಾನ್ಸೂನ್‌ ರಾಗʼ ಬಿಡುಗಡೆಗೆ ದಿನಗಣನೆ: ಅಭಿಮಾನಿಗಳಲ್ಲಿ ಮನೆ ಮಾಡಿದ ಸಂತಸ

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿರುವ ನಟಿಸಿರುವ ಮನ್ಸೂನ್ ರಾಗ ಸಿನಿಮಾ ದಿನಕ್ಕೊಂದು  ವಿಚಾರದಲ್ಲಿ ಸುದ್ದಿ ಮಾಡ್ತಿದೆ. ಆಗಸ್ಟ್ 19ರಂದು ತೆರೆಗೆ ಬರುತ್ತಿರುವ ಮಾನ್ಸೂನ್​ ರಾಗ ಚಿತ್ರದ ಟ್ರೈಲರ್​ ಸಖತ್​ ಸುದ್ದಿ ಮಾಡಿತ್ತು. ಅಲ್ಲದೆ ಈ ಚಿತ್ರದ ಮ್ಯೂಸಿಕಲ್​ ವಿಡಿಯೋ ಸದ್ಯ ಸಖತ್​ ವೈರಲ್​ ಆಗ್ತಿದೆ. 

Written by - YASHODHA POOJARI | Edited by - Bhavishya Shetty | Last Updated : Jul 30, 2022, 01:30 PM IST
  • ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ಮಾನ್ಸೂನ್‌ ರಾಗ ಸಿನಿಮಾ
  • ಆಗಸ್ಟ್ 19ರಂದು ತೆರೆಗೆ ಬರುತ್ತಿರುವ ಮಾನ್ಸೂನ್​ ರಾಗ ಚಿತ್ರ
  • ಡಾಲಿಯ ಸಿನಿ ಜರ್ನಿಯನ್ನು ಮಾನ್ಸೂನ್​ ರಾಗ ರಂಗೇರಿಸೋ ಸೂಚನೆ ಸಿಕ್ಕಿದೆ
ಡಾಲಿ ʼಮಾನ್ಸೂನ್‌ ರಾಗʼ ಬಿಡುಗಡೆಗೆ ದಿನಗಣನೆ: ಅಭಿಮಾನಿಗಳಲ್ಲಿ ಮನೆ ಮಾಡಿದ ಸಂತಸ title=
Dolly Dhananjay

ಡಾಲಿ ಧನಂಜಯ ಇತ್ತೀಚೆಗೆ ತುಂಬಾನೇ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನ ಮಾಡೋದ್ರ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ಡಾಲಿ ಧನಂಜಯ್‌ ನಟನೆಯ ಮಾನ್ಸೂನ್‌ ರಾಗ ಸಿನಿಮಾದ ಟಾಕ್‌ ಬಲು ಜೋರಾಗಿದೆ.

2022 ಡಾಲಿ ಧನಂಜಯ್​ ವರ್ಷ ಅಂದ್ರೆ ತಪ್ಪಲ್ಲ.  ನಮ್ಮ ಬಿಗ್​​ ಸ್ಟಾರ್​ಗಳ ಒಂದು ಸಿನಿಮಾ ರಿಲೀಸ್​ ಆದ್ರೆ ಸಾಕಪ್ಪ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಅದ್ರೆ ಡಾಲಿಯ ಅಭಿಮಾನಿಗಳಿಗೆ ಈ ಟೆನ್ಷನ್​ ಇಲ್ಲ. ಯಾಕಂದ್ರೆ ನಟ ರಾಕ್ಷಸನ ಸಾಲು ಸಾಲು ಸಿನಿಮಾಗಳು ಥಿಯೇಟರ್​ಗೆ ಲಗ್ಗೆ ಇಡೋಕೆ ಸಾಲಾಗಿ ನಿಂತಿವೆ. ಅವುಗಳಲ್ಲಿ ಮಾನ್ಸೂನ್​ ರಾಗ ಮೊದಲಿಗೆ ಬೆಳ್ಳಿ ಪರೆದೆಯ ಮೇಲೆ ಬರುವ ಸಿನಿಮಾವಾಗಿದ್ದು, ಸದ್ಯ ಮಾನ್ಸೂನ್​ ರಾಗ ಚಿತ್ರದ ಹಾಡು ಹಾಗೂ ಟ್ರೈಲರ್​ಗಳು ಸದ್ದು ಮಾಡುತ್ತಿವೆ. ಡಾಲಿಯ ಸಿನಿ ಜರ್ನಿಯನ್ನು ಮಾನ್ಸೂನ್​ ರಾಗ ರಂಗೇರಿಸೋ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: Karnataka KCET Result 2022: ಇಂದು ಸಿಇಟಿ ಫಲಿತಾಂಶ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿರುವ ನಟಿಸಿರುವ ಮನ್ಸೂನ್ ರಾಗ ಸಿನಿಮಾ ದಿನಕ್ಕೊಂದು  ವಿಚಾರದಲ್ಲಿ ಸುದ್ದಿ ಮಾಡ್ತಿದೆ. ಆಗಸ್ಟ್ 19ರಂದು ತೆರೆಗೆ ಬರುತ್ತಿರುವ ಮಾನ್ಸೂನ್​ ರಾಗ ಚಿತ್ರದ ಟ್ರೈಲರ್​ ಸಖತ್​ ಸುದ್ದಿ ಮಾಡಿತ್ತು. ಅಲ್ಲದೆ ಈ ಚಿತ್ರದ ಮ್ಯೂಸಿಕಲ್​ ವಿಡಿಯೋ ಸದ್ಯ ಸಖತ್​ ವೈರಲ್​ ಆಗ್ತಿದೆ. ಈಗಿನ ಹಾಡು ರಿಲೀಸ್​ ಆದ ಕೆಲವೇ ದಿನಗಳಲ್ಲಿ ಮಿಲಿಯನ್​ ವ್ಯೂಸ್​ ಆಗಿದೆ. ಬೈರಾಗಿ ಚಿತ್ರದಲ್ಲಿ ಮೋಡಿ ಮಾಡಿದ್ದ ಡಾಲಿ ಮತ್ತು ಯಶ ಶಿವಕುಮಾರ್​ ಮತ್ತೆ ಮಾನ್ಸೂನ್​ ರಾಗದಲ್ಲೂ ಕಾಣಿಸಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ.

ಮಾನ್ಸೂನ್​ ರಾಗ ರಿಲೀಸ್​ಗೆ ಇನ್ನು 21ದಿನಗಳು ಬಾಕಿ ಇದ್ದು ಈಗಾಗಲೇ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮಾನ್ಸೂನ್​ ರಾಗ ಚಿತ್ರದ ಕಟೌಟ್​ಗಳ ಕಾರು ಬಾರು ಶುರುವಾಗಿದೆ. ವಿಕ್ರಾಂತ್​ ರೋಣ ಚಿತ್ರವನ್ನು ನೋಡೋಕೆ ಹೋದವರಿಗೆಲ್ಲ ಮಾನ್ಸೂನ್​ ರಾಗ ಚಿತ್ರದ ಕಟೌಟ್​ಗಳ ದರ್ಶನವಾಗಿದೆ. ವಿಶೇಷ ಅಂದ್ರೆ ಥಿಯೇಟರ್​ಗಳಲ್ಲಿ ಕೇವಲ ಡಾಲಿಯ ಕಟೌಟ್‌ ಕಾಣಿಸ್ತಿಲ್ಲ. ಡಾಲಿಯ ಜೊತೆ ಡಿಂಪಲ್​ ಕ್ವೀನ್​ ರಚಿತಾ ರಾಮ್‌ ಸಹ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ವೈರಲ್​ ಆಗ್ತಿರುವ ಸಾಂಗ್​ ಮತ್ತೊಂದು ಕಡೆ ಕಟೌಟ್​ಗಳ ಬರ್ಬಾರ್​, ಇದನೆಲ್ಲ ಗಮನಿಸ್ತಿರೋ ಸಿನಿಪಂಡಿತರು ಡಾಲಿ ಸಿನಿಬಾಳಲ್ಲಿ ಮಾನ್ಸೂನ್ ರಾಗ ರಂಗೇರುತ್ತಿದೆ ಅಂತಿದ್ದಾರೆ.

ಇದನ್ನೂ ಓದಿ: White Hair Problem: ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳಿಂದ ನಿಮ್ಮ ಬಿಳಿ ಕೂದಲು ಎಂದಿಗೂ ಕಪ್ಪಾಗುವುದಿಲ್ಲ, ಟೈಮ್ ವೇಸ್ಟ್ ಮಾಡಬೇಡಿ

ಮಾನ್ಸೂನ್‌ ರಾಗ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು, ವೀರೆಂದ್ರನಾಥ್ ನಿರ್ದೇಶನ ಮಾಡಿದ್ದು, ಎ.ಆರ್. ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಸಂಭಾಷಣೆಯನ್ನು ಗುರು ಕಶ್ಯಪ್ ಬರೆದಿದ್ದಾರೆ. ಸದ್ಯ ಯಶಾ ಶಿವಕುಮಾರ್​ ಪಾತ್ರವೇ ಇಷ್ಟು ಕಾಡ್ತಿದೆ ಅಂದ್ರೆ, ಇನ್ನು ಡಿಂಪಲ್​ ಕ್ವೀನ್​ ರಚಿತಾ ರಾಮ್​ ಪಾತ್ರ ಕಿಕ್​ ಎರಿಸೋದ್ರಲ್ಲಿ ಡೌಟ್ ​ಇಲ್ಲ.. ಜೊತೆಗೆ ನಟರಾಕ್ಷಸನ ನಟನೆ ಬಾಕ್ಸ್​ ಆಫೀಸ್​ನ ಕಿಲ್​ ಮಾಡೋದ್ರಲ್ಲಿ ಡೌಟ್​ ಇಲ್ಲ ಅಂತಿದ್ದಾರೆ ಗಾಂಧಿನಗರದ ಮಂದಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News