Hanuman vs Guntru Kaaram : ʼಹನುಮಾನ್ʼ ಅಬ್ಬರಕ್ಕೆ ಹಾರಿಹೊಯ್ತು ಮಹೇಶ್ಬಾಬು ʼಗುಂಟೂರು ಖಾರʼ..!
Guntur kaaram vs Hanuman : ಸೂಪರ್ ಸ್ಟಾರ್ ಮಹೇಶ್ ಬಾಬು ಅವರ `ಗುಂಟೂರು ಖಾರ` ಗೆ ಹೋಲಿಸಿದರೆ, ಯುವ ನಟ ತೇಜ ಸಜ್ಜ ನಟನೆಯ `ಹನುಮಾನ್` ಬಾಕ್ಸ್ ಆಫೀಸ್‌ನಲ್ಲಿ ಟೇಕ್ ಆಫ್ ಆಗುತ್ತಿದೆ. ಪ್ರಶಾಂತ್ ವರ್ಮಾ ಅವರ ಸಿನಿಮಾ ಟಿಕೆಟ್ ಮಾರಾಟದ ವಿಷಯದಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Hanuman vs Guntur kaaram : ಸಂಕ್ರಾಂತಿ ಸಂದರ್ಭದಲ್ಲಿ ಟಾಲಿವುಡ್‌ನಲ್ಲಿ ತೀವ್ರ ಪೈಪೋಟಿ ಇದೆ. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ‘ಗುಂಟೂರು ಕಾರ’, ತೇಜ ಸಜ್ಜ ಅವರ ‘ಹನುಮಾನ್’, ನಾಗಾರ್ಜುನ ಅವರ ‘ನಾ ಸಮಿರಂಗ’, ವೆಂಕಟೇಶ್ ಅವರ ‘ಸೈಂಧವ’ ಚಿತ್ರಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಇನ್ನುಳಿದ ಚಿತ್ರಗಳ ವಿಚಾರ ಬಿಟ್ಟರೆ, ಇಂದು (ಜನವರಿ 12) ಬಿಡುಗಡೆಯಾಗಿರುವ 'ಗುಂಟೂರು ಕಾರ' ಮತ್ತು 'ಹನುಮಾನ್' ಚಿತ್ರಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಫೈಟ್ ನಡೆಯುತ್ತಿದೆ.
ಹೌದು.. ಬಿಡುಗಡೆಗೆ ಮುನ್ನ 'ಗುಂಟೂರು ಕಾರಂ' ಚಿತ್ರಕ್ಕೆ ಹೋಲಿಸಿದರೆ, 'ಹನುಮಾನ್' ಚಿತ್ರವು ಟಿಕೆಟ್ ಬುಕ್ಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಾಗಿ ‘ಹನುಮಾನ್’ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಆಸಕ್ತಿ ತೋರಿದರು. ಆನ್‌ಲೈನ್ ಟಿಕೆಟಿಂಗ್ ಆ್ಯಪ್ ಬುಕ್ ಮೈ ಶೋ ಇದನ್ನು ಬಹಿರಂಗಪಡಿಸಿದೆ. ಟಿಕೆಟ್ ಮಾರಾಟದ ವಿಚಾರದಲ್ಲಿ ಮಹೇಶ್ ಸಿನಿಮಾಗೆ ಹೋಲಿಸಿದರೆ ತೇಜ ಸಜ್ಜನ ಸಿನಿಮಾ ಮುಂದೆ ಸಾಗುತ್ತಿದೆ.
ಇದನ್ನೂ ಓದಿ:ಕ್ಯಾರವಾನ್‌ನಲ್ಲಿ ಜಮಾಲ್ ಕುಡು ಸಾಂಗ್‌ಗೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ: ವಿಡಿಯೋ ವೈರಲ್!
ಅಲ್ಲದೆ, ಒಂದು ಗಂಟೆಯೊಳಗೆ 'ಗುಂಟೂರು ಕರಂ' ಸಿನಿಮಾಕ್ಕೆ 16 ಸಾವಿರ ಟಿಕೆಟ್ ಬುಕ್ ಆದ್ರೆ, 'ಹನುಮಾನ್' ಸಿನಿಮಾಗೆ ಸುಮಾರು 20 ಸಾವಿರ ಟಿಕೆಟ್ ಬುಕ್ ಆಗಿವೆ. ಸದ್ಯ ಮಹೇಶ್ ಸಿನಿಮಾ ಬುಕ್ಕಿಂಗ್ ನಲ್ಲಿ ಹಿಂದೆ ಬಿದ್ದಿದೆ. 'ಹನುಮಾನ್' 'ಗುಂಟೂರು ಕರಂ' ಚಿತ್ರಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ರೆಡ್ ಡ್ರೇಸ್‌ನಲ್ಲಿ ಸೌಂದರ್ಯ ದೇವತೆ ಸನ್ನಿ..! ಫೋಟೋಸ್ ನೋಡಿ
ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರು ಕಾರ’ ಚಿತ್ರದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸಿದ್ದಾರೆ. ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ರಮ್ಯಾಕೃಷ್ಣ, ಪ್ರಕಾಶ್ ರಾಜ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸಿನಿ ಮತ್ತು ಹರಿಕಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್.ರಾಧಾಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದು, ತಮನ್ ಸಂಗೀತ ಸಂಯೋಜಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.