Television Cricket League Season 4: 2019ರಲ್ಲಿ ಆರಂಭವಾಗಿ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ‘ಟೆಲಿವಿಷನ್ ಕ್ರಿಕೆಟ್ ಲೀಗ್’ನ 4 ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ. ಇತ್ತೀಚಿಗೆ ಈ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ ಹಾಗೂ ಟ್ರೋಫಿ ಬಿಡುಗಡೆ ಸಮಾರಂಭ ಇಲ್ಲಿನ ಲುಲು ಗ್ಲೋಬಲ್ ಮಾಲ್ ನಲ್ಲಿ ನಡೆಯಿತು. ನಟ ನೀನಾಸಂ ಸತೀಶ್, ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಗಂದೂರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೋಫಿ ಹಾಗೂ ಜರ್ಸಿಯನ್ನು ಬಿಡುಗಡೆ ಮಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs BAN: ಸಿಂಪಲ್ ಕ್ಯಾಚ್ ಕೈಚೆಲ್ಲಿದ ರಾಹುಲ್ ಬಗ್ಗೆ ರೋಹಿತ್ ನೀಡಿದ್ರು ಆಘಾತಕಾರಿ ಪ್ರತಿಕ್ರಿಯೆ


ಟೆಲಿವಿಷನ್ ಕ್ರಿಕೆಟ್ ಲೀಗ್’ನ ಫೌಂಡರ್ ದೀಪಕ್ ಆಗಿದ್ದು, ಮಂಜೇಶ್ ಮತ್ತು ದಿವ್ಯ ಪ್ರಸಾದ್ ಕೋ-ಫೌಂಡರ್ ಆಗಿದ್ದಾರೆ. ಟ್ರಿನ್ಕೊ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4 ರ ಟೈಟಲ್ ಸ್ಪಾನ್ಸರ್ ಆಗಿದ್ದಾರೆ. ಟೆಲಿವಿಷನ್ ಕ್ರಿಕೆಟ್ ಯಶಸ್ವಿಯಾಗಿ 3 ಸೀಸನ್ ಪೂರೈಸಿದ್ದು, ಇದೀಗ ನಾಲ್ಕರತ್ತ ಹೆಜ್ಜೆ ಇಟ್ಟಿದ್ದು, ಈ ಬಾರಿ 6 ತಂಡಗಳು ಭಾಗಿಯಾಗಲಿವೆ.


ಭಾಗಿಯಾಗಲಿರುವ 6 ತಂಡಗಳ ವಿವರ:


  • ಪ್ರೊವಿಟೇಲ್ ಹೆಲ್ತ್ ನ ಡಾ.ಶಿಲ್ಪಾ ಮಾಲೀಕತ್ವದ ರೋರಿಂಗ್ ಲಯನ್ಸ್ ತಂಡ: ನಾಯಕ ಕಿರಿಕ್ ಕೀರ್ತಿ ಹಾಗೂ ಉಪನಾಯಕ ಕಾರ್ತಿಕ್ ಮಹೇಶ್. ಶೃತಿ ರಮೇಶ್, ಶುಭ ರಕ್ಷ ಹಾಗೂ ಸುಶ್ಮಿತ ಈ ತಂಡದ ರಾಯಭಾರಿಗಳು.

  • ಡಾ.ಚೇತನ ಪ್ರೊಡಕ್ಷನ್ಸ್ ನ ಡಾ.ಚೇತನ ಮಾಲೀಕತ್ವದ ಜಟಾಯು ತಂಡ: ನಾಯಕನಾಗಿ ಹರ್ಷ ಸಿ.ಹೆಚ್ ಗೌಡ ಹಾಗೂ ಉಪನಾಯಕನಾಗಿ ಹರೀಶ್. ಸಾಕ್ಷಿ ಮೇಘನಾ ಹಾಗೂ ಪೂಜಾ ಈ ತಂಡದ ರಾಯಭಾರಿಗಳು.

  • ಡಿಜಿ ಇನ್ಫಿನಿಟಿ ಕಂಪನಿಯ ಸುಲ್ತಾನ್ ಹಾಗೂ ಎಂ.ಆರ್ ಸ್ವಾಮಿ ಮಾಲೀಕರಾಗಿರುವ ಕ್ರೇಜಿ ಕಿಲ್ಲರ್ ತಂಡ: ನಾಯಕ ಅರ್ಜುನ್ ಯೋಗಿ ಹಾಗೂ ಉಪನಾಯಕ ಚೇತನ್ ವಿಕಾಸ್. ಮೇಘನಾ ಹಾಗೂ ಆವಂತಿಕ ಈ ತಂಡದ ರಾಯಭಾರಿಗಳು.

  • ಅಮ್ಮಾಸ್ ಫುಡ್ ಶ್ರೀನಿಧಿ ಅವರ ಮಾಲೀಕತ್ವದ ಗ್ಯಾಂಗ್ ಗರುಡಾಸ್ ತಂಡ: ನಾಯಕನಾಗಿ ಮಾಸ್ಟರ್ ಆನಂದ್ ಹಾಗೂ ಉಪನಾಯಕನಾಗಿ ಕರಿಬಸವ ಇದ್ದಾರೆ. ತನಿಶಾ, ಪಲ್ಲವಿ ಗೌಡ ಹಾಗೂ ದ್ರವ್ಯ ಶೆಟ್ಟಿ ಈ ತಂಡದ ರಾಯಭಾರಿಗಳು.

  • ಪ್ರಧಾನ್ ಟಿವಿಯ ಪ್ರಶಾಂತ್ ಹಾಗೂ ನಾಗಶ್ರೀ ಮಾಲೀಕರಾಗಿರುವ ಚಾಂಪಿಯನ್ ಚೀತಸ್ ತಂಡ: ನಾಯಕನಾಗಿ ಹೇಮಂತ್ ಹಾಗೂ ಮಂಜು ಪಾವಗಡ ಉಪನಾಯಕನಾಗಿದ್ದಾರೆ. ವಿಜಯಲಕ್ಷ್ಮಿ, ಯಶಸ್ವಿನಿ  ಮತ್ತು ಜಾಹ್ನವಿ ಈ ತಂಡದ ರಾಯಭಾರಿಗಳು.

  • ಕಿರೀಟಿ ವೆಂಚರ್ ನ ಕುಶಾಲ್ ಗೌಡ ಮಾಲೀಕತ್ವದ ಗಜಪಡೆ ವಾರಿಯರ್ಸ್ ತಂಡ: ನಾಯಕನಾಗಿ ವಿವಾನ್ ಹಾಗೂ ಉಪನಾಯಕನಾಗಿ ಶ್ರೀರಾಮ್ ಇದ್ದಾರೆ. ವರ್ಷಿತಾ, ಅಮೂಲ್ಯ ಹಾಗೂ ಅನಿಕಾ ಈ ತಂಡದ ರಾಯಭಾರಿಗಳಾಗಿದ್ದಾರೆ.


ಇದನ್ನೂ ಓದಿ:  ತಮಿಳಿಗೆ ಎಂಟ್ರಿ ಕೊಟ್ಟ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’


ಎರಡು ದಿನಗಳ ಕಾಲ ಟೆಲಿವಿಷನ್ ಕ್ರಿಕೆಟ್ ಲೀಗ್ ಸೀಸನ್ 4ರ ಪಂದ್ಯಗಳು ನಡೆಯಲಿವೆ. ಪಂದ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಫೌಂಡರ್ ದೀಪಕ್ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.