Rohit Sharma statement on KL Rahul: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ದಡ ತಲುಪಿದ್ದ ಭಾರತ, ಕೊನೆಯ ಸಂದರ್ಭದಲ್ಲಿ ಕೈಚೆಲ್ಲಿದ ಒಂದು ವಿಕೆಟ್ ನಿಂದಾಗಿ ಸೋಲು ಕಾಣುವಂತಾಯಿತು. ಬಾಂಗ್ಲಾದೇಶದ ಇನಿಂಗ್ಸ್‌ನ 43ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರ ಮೂರನೇ ಎಸೆತದಲ್ಲಿ ಮೆಹದಿ ಹಸನ್ ಮಿರಾಜ್ ಅವರ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಬಿಟ್ಟರು. ಇದು ಪಂದ್ಯಕ್ಕೆ ದೊಡ್ಡ ತಿರುವು ನೀಡಿತು ಎನ್ನಬಹುದು.
ಇದನ್ನೂ ಓದಿ: ಭಾರತ ಸೋಲಿಸಿದ ಈ 25 ವರ್ಷದ ಬಾಂಗ್ಲಾದ ಮೆಹಿದಿ ಹಸನ್ ಯಾರು ಗೊತ್ತಾ?
ಗೆಲುವಿನ ದಡದಲ್ಲಿದ್ದರೂ ಸೋಲು ಕಂಡ ಭಾರತ:
ಬಾಂಗ್ಲಾದೇಶದ ಗೆಲುವಿಗೆ 32 ರನ್‌ಗಳ ಅಗತ್ಯವಿದ್ದಾಗ ಮೆಹಿದಿ ಹಸನ್ ಮಿರಾಜ್ ಕ್ಯಾಚ್ ನೀಡಿದರು. ಆದರೆ ಮೆಹದಿ ಹಸನ್ ಮಿರಾಜ್ ಅವರ ಆ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈ ಚೆಲ್ಲಿದರು. ಒಂದು ವೇಳೆ ಕ್ಯಾಚ್ ಹಿಡಿದಿದ್ದರೆ, ಭಾರತವು 31 ರನ್‌ಗಳಿಂದ ಪಂದ್ಯವನ್ನು ಗೆಲ್ಲುತ್ತಿತ್ತು. ಆದರೆ ಅದು ಸಂಭವಿಸಲಿಲ್ಲ. ಬಳಿಕ ಮೆಹಿದಿ ಹಸನ್ ಮಿರಾಜ್ ಮತ್ತು ಮುಸ್ತಫಿಜುರ್ ರೆಹಮಾನ್ ಕೊನೆಯ ವಿಕೆಟ್‌ಗೆ 51 ರನ್ ಸೇರಿಸಿ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟರು.
ರಾಹುಲ್ ಬಗ್ಗೆ ನಾಯಕ ರೋಹಿತ್ ಆಘಾತಕಾರಿ ಪ್ರತಿಕ್ರಿಯೆ:
ಸಿಂಪಲ್ ಕ್ಯಾಚ್ ಅನ್ನು ರಾಹುಲ್ ಕೈಬಿಟ್ಟ ನಂತರ ಟೀಮ್ ಇಂಡಿಯಾದ ಸೋಲಿಗೆ ಅತಿದೊಡ್ಡ ಕಾರಣ ಎಂದು ಹೇಳಲಾಯಿತು. ಏಕೆಂದರೆ ಕೆಎಲ್ ರಾಹುಲ್ ಮೆಹದಿ ಹಸನ್ ಮಿರಾಜ್ ಅವರನ್ನು ಔಟ್ ಮಾಡಿದ್ದರೆ ಪಂದ್ಯಕ್ಕೆ ದೊಡ್ಡ ತಿರುವು ಸಿಗುತ್ತಿತ್ತು. ಟೀಂ ಇಂಡಿಯಾ ಗೆಲುವು ಸಾಧಿಸುತ್ತಿತ್ತು. ಸೋಲಿನ ಬಳಿಕ ಕೆಎಲ್ ರಾಹುಲ್ ಕ್ಯಾಚ್ ಕೈಬಿಟ್ಟ ವಿಚಾರವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.
ರಾಹುಲ್ ಬಗ್ಗೆ ರೋಹಿತ್ ಶರ್ಮಾ ಹೇಳಿಕೆ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, “ನಾವು ಆ ಒಂದು ವಿಕೆಟ್ ಪಡೆಯಬೇಕೆಂದು ಬಯಸಿದ್ದೆವು. ಆದರೆ ಇದು ತುಂಬಾ ನಿಕಟ ಪಂದ್ಯವಾಗಿತ್ತು. ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಲು ನಾವು ಚೆನ್ನಾಗಿ ಪ್ರಯತ್ನ ಪಟ್ಟಿದ್ದೇವೆ. ಆದರೆ 186 ರನ್ ಸಾಕಾಗಲಿಲ್ಲ. ನಮ್ಮ ಬೌಲಿಂಗ್ ಉತ್ತಮವಾಗಿತ್ತು. ಆದರೆ ಬ್ಯಾಟಿಂಗ್ ಅಲ್ಲ. 15 ರನ್ ಗಳಿಸಿದ್ದಾಗ ಮೆಹದಿ ನೀಡಿದ್ದ ಕ್ಯಾಚ್ ನ್ನು ರಾಹುಲ್ ಕೈ ಬಿಟ್ಟರು. ಕಳಪೆ ಫೀಲ್ಡಿಂಗ್‌ನೊಂದಿಗೆ ಬೌಲಿಂಗ್ ಮಾಡುವುದರ ಹೊರತಾಗಿ, ಓವರ್‌ಥ್ರೋಗಳು ಸಹ ಕಳೆದುಹೋದವು” ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್ ಅವರನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ, 'ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದಾಗಿ ನಾವು 186 ರನ್ ತಲುಪಿದ್ದೆವು. ದುರದೃಷ್ಟವಶಾತ್, ನಾವು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ ಮತ್ತೆ ಫಾರ್ಮ್ ಗೆ ಹಿಂತಿರುಗುವುದು ಅಷ್ಟು ಸುಲಭವಲ್ಲ. ಆಟಗಾರರು ಕಲಿಯುತ್ತಾರೆ ಎಂದು ನನಗೆ ಖಾತ್ರಿಯಿದೆ. ನಾವು ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದರು.
ಇದನ್ನೂ ಓದಿ: Mumbai Gang rape: ಮನೆಯೊಳಗೆ ನುಗ್ಗಿ ಮೂವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಇದೀಗ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಡಿಸೆಂಬರ್ 7 ಬುಧವಾರ ಬೆಳಗ್ಗೆ 11.30 ರಿಂದ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.