Actor Chandra Mohan : ಟಾಲಿವುಡ್‌ ಹಿರಿಯ ನಟ ಚಂದ್ರಮೋಹನ್ ಅವರು ಇಂದು ನಿಧನರಾಗಿದ್ದಾರೆ. ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಬೆಳಗ್ಗೆ 9.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ಹೈದರಾಬಾದ್‌ನಲ್ಲಿ ಚಂದ್ರಮೋಹನ್‌ ಅವರ ಅಂತ್ಯಕ್ರಿಯೆ ನಡೆಯಲಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಚಂದ್ರಮೋಹನ್ ಜೊತೆಗಿನ ಸಂಬಂಧವನ್ನು ಸಾಮಾಜಿಕ ಜಾಲತಾಣದ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: 35 ಕೋಟಿಗೆ ‌ʼಬ್ಯಾಡ್‌ ಮ್ಯಾನರ್ಸ್ʼ ಹಕ್ಕು ಸೇಲ್:‌ ಜೂ.ರೆಬಲ್‌ಸ್ಟಾರ್ ಚಿತ್ರದ ರೈಟ್ಸ್ ಜಯಣ್ಣನ ಪಾಲು..!


ಚಂದ್ರಮೋಹನ್ ಹುಟ್ಟಿದ್ದು ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕದಲ್ಲಿ. ಇವರ ನಿಜವಾದ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ್ ರಾವ್. ಚಂದ್ರಮೋಹನ್ ಅವರ ಪತ್ನಿ ಜಲಂಧರ್ ಲೇಖಕಿ. ದಂಪತಿಗೆ ಮಥುರಾ ಮೀನಾಕ್ಷಿ ಮತ್ತು ಮಾಧವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಥುರಾ ಮೀನಾಕ್ಷಿ ಅಮೆರಿಕದಲ್ಲಿ ಸೈಕಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರೆ, ಎರಡನೇ ಮಗಳು ಮಾಧವಿ ಚೆನ್ನೈನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.


ಚಂದ್ರಮೋಹನ್ ಅವರು 1966 ರಲ್ಲಿ, ವರವ ರತ್ನಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ನಂದಿ ಪ್ರಶಸ್ತಿ ಪಡೆದರು. ಎರಡು ಫಿಲಂಫೇರ್ ಮತ್ತು 6 ನಂದಿ ಪ್ರಶಸ್ತಿಗಳನ್ನು ಪಡೆದಿರುವ ಚಂದ್ರಮೋಹನ್ ಹಲವು ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದರು. ಚಂದ್ರಮೋಹನ್ ತಮ್ಮ 55 ವರ್ಷಗಳ ಚಿತ್ರರಂಗದಲ್ಲಿ 932 ಚಿತ್ರಗಳಲ್ಲಿ ನಟಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.