BBK10: ಬಿಗ್‌ಬಾಸ್‌ ಮನೆಯ ಐದನೇ ವಾರ ಬೆಸ್ಟ್‌ ಡ್ರೋನ್‌ ಪ್ರತಾಪ್‌ : ಕಳಪೆಯಾದ ನೀತು, ಇಶಾನಿ!

Bigg Boss Kannada 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋನಲ್ಲಿ ಐದನೇ ವಾರ ಬೆಸ್ಟ್ ಪರ್ಫಾಮರ್ ಡ್ರೋನ್ ಪ್ರತಾಪ್ ಆಗುದ್ದು, ವರ್ಸ್ಟ್‌ ಪರ್ಫಾಮರ್‌ ಅಂತ ಈ ಬಾರಿ ಇಶಾನಿ ಮತ್ತು ನೀತು ಕಳಪೆ ಪಟ್ಟ ಪಡೆದು, ಏಕಕಾಲಕ್ಕೆ ಜೈಲಿಗೆ ತೆರಳಿದ್ದಾರೆ.  

Written by - Zee Kannada News Desk | Last Updated : Nov 11, 2023, 10:06 AM IST
  • ಬಿಗ್‌ಬಾಸ್‌ ಮೆಯಲ್ಲಿ ಡ್ರೋನ್‌ ಪ್ರತಾಪ್‌ಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ.
  • ನೀತು ಮತ್ತು ಇಶಾನಿ ಕಳಪೆ ಪಟ್ಟ ಪಡೆದು ಒಟ್ಟಿಗೆ ಜೈಲಿಗೆ ತೆರಳಿದ್ದಾರೆ.
  • ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್ ನೀತು ಅವರನ್ನ ಟಾರ್ಗೆಟ್ ಮಾಡಿದರು.
BBK10: ಬಿಗ್‌ಬಾಸ್‌ ಮನೆಯ ಐದನೇ ವಾರ ಬೆಸ್ಟ್‌ ಡ್ರೋನ್‌ ಪ್ರತಾಪ್‌ : ಕಳಪೆಯಾದ ನೀತು, ಇಶಾನಿ! title=

Best and Worst Performer In BBK10: ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಗಂಧದ ಗುಡಿ ತಂಡದ ಕ್ಯಾಪ್ಟನ್ ಆಗಿದ್ದ ಡ್ರೋನ್ ಪ್ರತಾಪ್, ತಂಡವನ್ನ ಒಗ್ಗೂಡಿಸಿದ ರೀತಿ, ನಾಮಿನೇಷನ್ ಅಸ್ತ್ರವನ್ನ ಬಳಸಿದ ರೀತಿ, ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್‌ಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದೆ.

ಹೀಗಾಗಿ ಡ್ರೋನ್ ಪ್ರತಾಪ್‌ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್‌ ಹಾಕಿರುವುದರಿಂದ, ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದರು. ಇನ್ನೊಂದು ಕಡೆ "ಸಿರಿ ಪಕ್ಷಪಾತ ಮಾಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ" ಅಂತ ತಂಡದಲ್ಲಿ ಆದ ಮಾತುಕತೆಯನ್ನ ಸಿರಿ ಬಳಿ ನೀತು ಹೇಳಿದ್ದರಿಂದ, ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್ ನೀತು ಅವರನ್ನ ಟಾರ್ಗೆಟ್ ಮಾಡಿದರು. ನೀತುಗೆ ವಿನಯ್, ನಮ್ರತಾ, ಸ್ನೇಹಿತ್, ಇಶಾನಿ, ತುಕಾಲಿ ಸಂತು, ಸಿರಿ, ಮೈಕಲ್ ‘ಕಳಪೆ’ ಪಟ್ಟ ಕೊಟ್ಟರು.

ಇದನ್ನು ಓದಿ: Drone Prthap: "ಮೋಸ ಆಗ್ತಿದೆ".. ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ವೈರಲ್‌..!

ಇನ್ನೊಂದೆಡೆ ಬಲೂನ್ ಟಾಸ್ಕ್‌ನಲ್ಲಿ ಪದೇ ಪದೇ ನಿರ್ಧಾರಗಳನ್ನ ಬದಲಿಸಿದ ಇಶಾನಿಗೆ ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್, ನೀತು, ಡ್ರೋನ್ ಪ್ರತಾಪ್, ಭಾಗ್ಯಶ್ರೀ ಮತ್ತು ತನಿಷಾ ‘ಕಳಪೆ’ ಪಟ್ಟ ನೀಡಿದರು. ತಲಾ ಏಳು ಮತಗಳನ್ನು ಪಡೆದ ನೀತು ಮತ್ತು ಇಶಾನಿ ಒಟ್ಟಿಗೆ ಜೈಲಿಗೆ ತೆರಳಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.

ಡ್ರೋನ್‌ ಪ್ರತಾಪ್‌ಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದನ್ನ, "ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡ್ತೀನಿ. ಸುದೀಪ್‌ ಸರ್‌ಗೆ ಬಿಗ್ ಥ್ಯಾಂಕ್ಸ್. ನನ್ನಲ್ಲಿ ಅವರು ಹೊಸ ಚೈತನ್ಯ ತಂದರು. ಮುಂದೆ ಚೆನ್ನಾಗಿ ಟಾಸ್ಕ್‌ನಲ್ಲಿ ಪರ್ಫಾಮ್‌ ಮಾಡ್ತೀನಿ" ಎಂದರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News