Pavitra Naresh lipkiss : ಟಾಲಿವುಡ್‌ ನಟ ವಿಕೆ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಸಾಕಷ್ಟು ವಿವಾದದ ನಂತರ ಅಂತಿಮವಾಗಿ ಇಬ್ಬರು ಮದುವೆಯಾಗುತ್ತಿರುವ ವಿಚಾರನ್ನು ಬಹಿರಂಗ ಮಾಡಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ನರೇಶ್‌ ಭಾವಿ ಪತ್ನಿಗೆ ಲಿಪ್‌ಕಿಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಮ್ಯಾರೇಜ್‌ ಮ್ಯಾಟರ್‌ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೂಪರ್‌ ಸ್ಟಾರ್‌ ಕೃಷ್ಟ ಅವರ ಮೊದಲ ಪತ್ನಿ ವಿಜಯನಿರ್ಮಲಾ ಅವರ ಪುತ್ರ, ನರೇಶ್ ಅವರು ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿರುವ ಪವಿತ್ರಾ ಲೊಕೇಶ್‌ ಅವರನ್ನು ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬುವುದಾಗಿ ಹಲವು ರೀತಿಯ ಸುದ್ದಿಗಳು ಹೊರಬಿದ್ದಿದ್ದವು. ಅಲ್ಲದೆ ಮೂರನೇ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ರಾದ್ಧಾಂತ ಮಾಡಿದ್ದರು.


ಇದನ್ನೂ ಓದಿ: BBK9 : ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.