Samantha Second Marriage: ಅಕ್ಕಿನೇನಿ ನಾಗಾರ್ಜುನ ಮಾಜಿ ಸೊಸೆ ಹಾಗೂ ನಾಗ ಚೈತನ್ಯ ಮಾಜಿ ಪತ್ನಿ ತೆಲುಗು ನಟಿ ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಉತ್ತಮ ಸ್ನೇಹಿತರಾಗಿ, ಬಳಿಕ ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಆದರೆ ಅವರ ಮದುವೆ ಮೂರು ವರ್ಷಗಳ ನಂತರ ಮುರಿದುಬಿದ್ದಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ - ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ಆದರೆ ಇತ್ತೀಚಿಗೆ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಳ್ಳ ಜೊತೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಎರಡನೇ ಮದುವೆ ಆಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈಗ ವಿಚಾರ ಅದಲ್ಲ. ಇದೀಗ ಮತ್ತೊಂದು ಹೊಸ ಗಾಳಿಸುದ್ದಿ ಶುರುವಾಗಿದೆ. ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸಂಗತಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bigg Boss Kannada Season 9: ಇಂದು ಬಿಗ್‌ಬಾಸ್‌ ಮನೆ ಸೇರುವ 18 ಸ್ಪರ್ಧಿಗಳ ಲಿಸ್ಟ್‌ ಇಲ್ಲಿದೆ!


ತಮಿಳುನಾಡಿನ ಉದ್ಯಮಿಯೊಂದಿಗೆ ಸಮಂತಾ ಎರಡನೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಸಾಮಾನ್ಯವಾಗಿ ತನ್ನ ಸ್ನೇಹಿತರೊಂದಿಗೆ ಪ್ರತಿ ವರ್ಷ ಈಶಾ ಫೌಂಡೇಶನ್ ಆಯೋಜಿಸುವ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ಜಗ್ಗಿ ವಾಸುದೇವ್ ಅವರ ಪರಿಚಯವಿದೆ. ಸಮಂತಾ ತನ್ನ ಮೊದಲ ಮದುವೆ ಮುರಿದುಬಿದ್ದು ಕಷ್ಟಪಡುತ್ತಿದ್ದಾಗ ಆಧ್ಯಾತ್ಮಿಕವಾಗಿ ಕೆಲವು ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಅವರನ್ನು ಜಗ್ಗಿ ವಾಸುದೇವ್‌ ಪ್ರೇರೇಪಿಸಿದರು. ಇದೀಗ ಅವರೇ ಎರಡನೇ ಮದುವೆಯಾಗುವಂತೆ ಸಮಂತಾಗೆ ಸಲಹೆ ನೀಡಿದ್ದಾರೆ ಎಂಬ ಗಾಸಿಪ್‌ ಹರಡಲಾಗುತ್ತಿದೆ.


ಆದರೆ ಇದೀಗ ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಸಮಂತಾ ಮ್ಯಾನೇಜರ್ ಕಡೆಯಿಂದ ಇನ್ನೂ ಯಾವುದೇ ಸ್ಪಷ್ಟನೇ ಸಹ ಬಾರದೇ ಇರುವುದರಿಂದ ಈ ವಿಚಾರ ನಿಜವೇ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ. ಇನ್ನು ಸಮಂತಾ ಸದ್ಯದ ಸಿನಿಮಾಗಳ ವಿಚಾರಕ್ಕೆ ಬಂದರೆ, ಅವರು ನಾಯಕಿಯಾಗಿ ನಟಿಸಿರುವ ಶಾಕುಂತಲಂ ಚಿತ್ರ ನವೆಂಬರ್ 4 ರಂದು  ಬಿಡುಗಡೆಯಾಗಲಿದೆ. ಅವರ ಮತ್ತೊಂದು ಸಿನಿಮಾ ಯಶೋದಾ ಕೂಡ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಸಮಂತಾ ಟ್ರೀಟ್‌ಮೆಂಟ್‌ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರು ಹಿಂದಿರುಗಿದ ನಂತರ, ಯಶೋದಾ ಸಿನಿಮಾವನ್ನು ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ಬಿಂಗ್ ಮಾಡಲಿದ್ದಾರಂತೆ. ಅದಾದ ನಂತರ ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 


ಇದನ್ನೂ ಓದಿ : ಇಂಡಿಯಾ ಟಾಪ್‌ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.