ನಟಿ ಸಮಂತಾ ರುತ್ ಪ್ರಭು ಅಭಿನಯದ 'ಶಾಕುಂತಲಂ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಪುಷ್ಪ ಸಿನಿಮಾದಲ್ಲಿನ ಹು ಅಂಟಂ ಮಾಮಾ...ಸಿನಿಮಾಕ್ಕೆ ಹೆಜ್ಜೆಹಾಕಿ ಯಶಸ್ಸನ್ನು ಕಂಡಿರುವ ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥೆಯುಳ್ಳ 'ಶಾಕುಂತಲಂ' ಸಿನಿಮಾ ಬಿಡುಗಡೆ ಸಿದ್ದವಾಗಿದೆ.

Written by - Zee Kannada News Desk | Last Updated : Sep 23, 2022, 04:01 PM IST
  • ಈ ಸಿನಿಮಾವು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರಿಕರಣಗೊಂಡಿದೆ.
ನಟಿ ಸಮಂತಾ ರುತ್ ಪ್ರಭು ಅಭಿನಯದ 'ಶಾಕುಂತಲಂ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್ title=

ಹೈದರಾಬಾದ್: ಪುಷ್ಪ ಸಿನಿಮಾದಲ್ಲಿನ ಹು ಅಂಟಂ ಮಾಮಾ...ಸಿನಿಮಾಕ್ಕೆ ಹೆಜ್ಜೆಹಾಕಿ ಯಶಸ್ಸನ್ನು ಕಂಡಿರುವ ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ ಪೌರಾಣಿಕ ಕಥೆಯುಳ್ಳ 'ಶಾಕುಂತಲಂ' ಸಿನಿಮಾ ಬಿಡುಗಡೆ ಸಿದ್ದವಾಗಿದೆ.

ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ ೪ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರನ್ನು ಮಹಾಭಾರತದ ಕಥಾಲೊಕಕ್ಕೆ ಕರೆದೊಯ್ಯಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ದರಾಗಿದ್ದಾರೆ.

ದಿಲ್ ರಾಜ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಗುಣ ಶೇಖರ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ. 

ಈ ಸಿನಿಮಾದ ಫಸ್ಟ್ ಲುಕ್ ಕಂಡು ಜನರು ಬೆರಗಾಗಿದ್ದರು. ಸಮಂತಾ ಬಿಳಿ ಬಣ್ಣದ ಸೀರೆಯುಟ್ಟು ಪ್ರಾಣಿ, ಪಕ್ಷಿಗಳ ಮಧ್ಯೆ ಕುಳಿತು ಎಲ್ಲೋ ನೋಡುವ ರೀತಿಯ  ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. 

ಈ ಸಿನಿಮಾವು ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಈ ಸ್ಥಳಗಳಲ್ಲಿ ಚಿತ್ರಿಕರಣಗೊಂಡಿದೆ. ಇನ್ನು ಇದರಲ್ಲಿ ಕಬೀರ್ ದುಹನ್ ಸಿಂಗ್, ಅದಿತಿ ಬಾಲನ್, ಮಧು, ಪ್ರಕಾಶ್ ರಾಜ್, ಗೌತಮಿ, ಮೋಹನ್ ಬಾಬು ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ. 

ಯಾರಿದು ಶಕುಂತಲೆ?
ರಿಷಿ ಕಣ್ವ ಮಹರ್ಷಿಗಳಿಗೆ ಕಾಡಿನಲ್ಲಿ ಶಕುಂತ ಪಕ್ಷಿಗಳ ಮಧ್ಯೆ ಪುಟ್ಟ ಮಗುವೊಂದು ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಣ ಮಗುವಿಗೆ ಶಕುಂತಲೆ ಎಂದು ಹೆಸರಿಡುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ ಎಂಬ ಉಲ್ಲೇಖವು ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News