`ತೆಲುಗು ಮತ್ತು ಕನ್ನಡ ಸಿನಿಮಾ ಬಾಲಿವುಡ್ ಗೆ ಕೊರೊನಾ ವೈರಸ್ ತರ ತಗುಲಿವೆ`
ಭಾರತೀಯ ಚಿತ್ರರಂಗದ ಖಾತ್ಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದಲ್ಲದೆ ಹಿಂದಿ ಸಿನಿಮಾಗಳಿಗೂ ಕೂಡ ಸಾಕಷ್ಟು ಟಕ್ಕರ್ ಕೊಡುತ್ತಿವೆ.ಈಗ ಪುಷ್ಪಾ, ಆರ್.ಆರ್.ಆರ್ ಕೆಜಿಎಫ್ 2 ನಂತಹ ಚಿತ್ರಗಳು ದೇಶಾದ್ಯಂತ ಸಾಕಷ್ಟು ಹವಾ ಸೃಷ್ಟಿಸಿದ್ದಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಹಿಂದಿ ಸಿನಿಮಾಗಳನ್ನು ಕೂಡ ಮಂಕು ಮಾಡಿದ್ದವು.ಈ ಹಿನ್ನೆಲೆಯಲ್ಲಿ ಈಗ ಸರಣಿ ಟ್ವೀಟ್ ಮಾಡುವ ಮೂಲಕ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು: ಭಾರತೀಯ ಚಿತ್ರರಂಗದ ಖಾತ್ಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದಲ್ಲದೆ ಹಿಂದಿ ಸಿನಿಮಾಗಳಿಗೂ ಕೂಡ ಸಾಕಷ್ಟು ಟಕ್ಕರ್ ಕೊಡುತ್ತಿವೆ.ಈಗ ಪುಷ್ಪಾ, ಆರ್.ಆರ್.ಆರ್ ಕೆಜಿಎಫ್ 2 ನಂತಹ ಚಿತ್ರಗಳು ದೇಶಾದ್ಯಂತ ಸಾಕಷ್ಟು ಹವಾ ಸೃಷ್ಟಿಸಿದ್ದಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಹಿಂದಿ ಸಿನಿಮಾಗಳನ್ನು ಕೂಡ ಮಂಕು ಮಾಡಿದ್ದವು.ಈ ಹಿನ್ನೆಲೆಯಲ್ಲಿ ಈಗ ಸರಣಿ ಟ್ವೀಟ್ ಮಾಡುವ ಮೂಲಕ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ಕಿಡಿ ಕಾರಿದ್ದಾರೆ.
ಇತ್ತೀಚಿಗೆ ತೆಲುಗು ಸಿನಿಮಾದ ರಿಮೇಕ್ ಆಗಿರುವ ಶಾಹಿದ್ ಕಪೂರ್ ಅಭಿನಯದ ಜರ್ಸಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಕೆಜಿಎಫ್ 2 ನಂತಹ ಸುನಾಮಿ ಎದುರು ಒಂದರ್ಥದಲ್ಲಿ ಅದು ನಿಜಕ್ಕೂ ತೋಪೆದ್ದು ಹೋಯಿತು ಎಂದು ಹೇಳಬಹುದು.ಈ ಹಿನ್ನೆಲೆಯಲ್ಲಿ ವರ್ಮಾ ಜರ್ಸಿ ಸಿನಿಮಾದ ವೈಫಲ್ಯದ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್! ಈ ಟ್ರೀಟ್ ಮೀಟ್‌ನ ಸ್ಪೆಷಲ್ ಏನು?
'ರಿಮೇಕ್ ಗಳ ಈಗ ಯುಗ ಈಗ ಮುಗಿದಿದ್ದು, ಡಬ್ಬಿಂಗ್ ನಂತಹ ಪುಷ್ಪಾ, ಆರ್ ಆರ್ ಆರ್ ಹಾಗೂ ಕೆಜಿಎಫ್ ಚಿತ್ರಗಳಿಗೆ ಈಗ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಅವರು ಹೇಳಿದರು.ಇನ್ನು ಮುಂದುವರೆದು ನಾನಿಯವರ ಮೂಲ ಜೆರ್ಸಿಯನ್ನು ತೆಲುಗಿನಿಂದ ಡಬ್ ಮಾಡಿ ಬಿಡುಗಡೆ ಮಾಡಿದರೆ ನಿರ್ಮಾಪಕರಿಗೆ ಕೇವಲ10 ಲಕ್ಷ ವೆಚ್ಚವಾಗುತ್ತಿತ್ತು, ಆದರೆ ಅದನ್ನು ಹಿಂದಿಯಲ್ಲಿ ರೀಮೇಕ್ ಮಾಡಲು 100 ಕೋಟಿ ವೆಚ್ಚವಾಯಿತು, ಇದರಿಂದಾಗಿ ಅಪಾರ ಹಣ, ಸಮಯ, ಶ್ರಮ ನಷ್ಟವಾಯಿತು" ಎಂದು ರಾಮ್ ಗೋಪಾಲ್ ವರ್ಮಾ ಬರೆದಿದ್ದಾರೆ. 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್
ರಿಮೇಕ್‌ಗಳನ್ನು ಕೊರೊನಾ ವೈರಸ್' ಎಂದು ಕರೆದ ರಾಮ್ ಗೋಪಾಲ್ ವರ್ಮಾ, "ತೆಲುಗು ಮತ್ತು ಕನ್ನಡ ಚಲನಚಿತ್ರಗಳು ಈಗ ಹಿಂದಿ ಚಿತ್ರಗಳಿಗೆ ಕೊರೊನಾ ತರ ತಗುಲಿವೆ, ಇದಕ್ಕೆ ಬಾಲಿವುಡ್ ಶೀಘ್ರದಲ್ಲೇ ಲಸಿಕೆಯನ್ನು ಕಂಡು ಹಿಡಿಯಲಿದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಕೆಜಿಎಫ್ ೨, ಪುಷ್ಪಾ,ಹಾಗೂ ಆರ್.ಆರ್.ಆರ್ ಘಟಾನುಘಟಿ ಹಿಂದಿ ಪ್ರೊಡಕ್ಷನ್ ಹೌಸ್ ಗಳ ಚಿತ್ರಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ನಿರ್ಮಿಸುತ್ತಿವೆ.ಆ ಮೂಲಕ ದಕ್ಷಿಣ ಭಾರತೀಯ ಸಿನಿಮಾ ರಂಗವು ಬಾಲಿವುಡ್ ನ್ನು ಒಂದು ರೀತಿಯಲ್ಲಿ ಸಪ್ಪೆ ಎನ್ನುವಂತೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.