Mangli Marriage: ತೆಲಗು ಗಾಯಕಿ ಮಂಗ್ಲಿ ಅವರ ಮನೆಯಲ್ಲಿ ಸದ್ಯದಲ್ಲೇ ಮದುವೆಯ ಸಂಭ್ರಮ ಶುರುವಾಗಲಿದೆ. ಮಂಗ್ಲಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ನೆಟಿಜನ್‌ಗಳು ಪೋಸ್ಟ್ ಮಾಡುತ್ತಿದ್ದಾರೆ. ಲಂಬಾಣಿ ಸಮುದಾಯಕ್ಕೆ ಸೇರಿದವ ಮಂಗ್ಲಿ ನಿಜವಾದ ಹೆಸರು ಸತ್ಯವತಿ ರಾಥೋಡ್. ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಂಗೀತದಲ್ಲಿ ಡಿಪ್ಲೊಮಾ ಮುಗಿಸಿದರು. ಅದರ ನಂತರ ಅವರು ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದರು. ಸಂಗೀತದಲ್ಲಿ ಆಸಕ್ತಿ ಇದ್ದ ಅವರು ಬಳಿಕ ಗಾಯಕರಾದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಿಗ್‌ಬಾಸ್‌ ನ ಈ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿದ್ದಂತೆ ಕಿಚ್ಚ ಸುದೀಪ್ ಗರಂ! 


ಜನಪದ ಗಾಯಕಿಯಾಗಿ ಗುರುತಿಸಿಕೊಂಡರು. ಖಾಸಗಿ ಆಲ್ಬಂಗಳನ್ನು ಮೊದಲು ಮಾಡಿದರು. ಇದರ ಮೂಲಕ ಖ್ಯಾತಿ ಗಳಿಸಿದರು. ತೆಲಂಗಾಣದ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಆಲ್ಬಂಗಳನ್ನು ರಚಿಸಲಾಗಿದೆ. ತೆಲಂಗಾಣದ ಅತ್ಯಂತ ಪ್ರತಿಷ್ಠಿತ ಹಬ್ಬಗಳಾದ ಬತುಕಮ್ಮ, ಸಮ್ಮಕ್ಕಸರಕ ಮತ್ತು ಬೋನಾಳಗಳಲ್ಲಿ ಮಂಗ್ಲಿಯವರ ಸಂಗೀತ ಆಲ್ಬಂಗಳು ಅವರಿಗೆ ಉತ್ತಮ ಮನ್ನಣೆಯನ್ನು ತಂದುಕೊಟ್ಟಿವೆ.


ಹಬ್ಬ ಹರಿದಿನಗಳಲ್ಲಿ ಮಂಗ್ಲಿ ಹಾಡುವ ಹಾಡುಗಳು ಹಳ್ಳಿ ಹಳ್ಳಿಗೆ ಕೇಳಿ ಬರುತ್ತವೆ. ಈ ಆಲ್ಬಂಗಳು ಆಕೆಯನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದವು. ಹಿನ್ನೆಲೆ ಗಾಯಕರಾಗಿ ತಮ್ಮ ವೃತ್ತಿ ಆರಂಭಿಸಿದರು. ಆಕೆಯ ಆಲ್ಬಮ್ ಬೋನಲ್ 2023 ಸೂಪರ್ ಹಿಟ್ ಆಯಿತು. ಸಾಕಷ್ಟು ದೊಡ್ಡ ಬಜೆಟ್ ಚಿತ್ರಗಳು ಸದ್ಯ ಮಂಗ್ಲಿ ಕೈಯಲ್ಲಿವೆ. ಸದ್ಯದಲ್ಲೇ ಅಮೆರಿಕದಲ್ಲಿ ಲೈವ್ ಕನ್ಸರ್ಟ್ ಮಾಡಲಿದ್ದಾರೆ.


ಮಂಗ್ಲಿ ತನ್ನ ಸೋದರ ಮಾವನ ಜೊತೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಈ ವರ್ಷ ಡಿಸೆಂಬರ್ ವೇಳೆಗೆ ಮದುವೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಸಹಿ ಮಾಡಿದ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸಿ ಮದುವೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.


ಇದನ್ನೂ ಓದಿ : ಖ್ಯಾತ ನಟಿಯ ಕಾರು ಭೀಕರ ಅಪಘಾತ.. ವೃದ್ಧ ದಂಪತಿ ಬಲಿ! ಆಕ್ಸಿಡೆಂಟ್‌ ವಿಡಿಯೋ ವೈರಲ್‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.