Thalaivar 170 Updates: ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾ ಜಗತ್ತಿನ ಜನಪ್ರಿಯ ಸಂಗೀತ ನಿರ್ದೇಶಕರು ಯಾರು ಎಂಬ ಪ್ರಶ್ನೆ ಬಂದಾಗ ಇಳಯರಾಜ, ಎಆರ್ ರೆಹಮಾನ್, ಹಾರಿಸ್ ಜಯರಾಜ್, ಯುವನ್ ಶಂಕರ್ ರಾಜಾ ಎನ್ನುವ ಹೆಸರುಗಳು ಕೇಳಿಬರುತ್ತಿದ್ದವು. ಇದೀಗ ಆ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. 


COMMERCIAL BREAK
SCROLL TO CONTINUE READING

ಪ್ರತಿ ವರ್ಷ ನೂರಾರು ಚಿತ್ರಗಳನ್ನು ಬಿಡುಗಡೆ ಮಾಡುವ ತಮಿಳು ಚಿತ್ರರಂಗದಲ್ಲಿ ಸಂಗೀತವನ್ನು ನಿರ್ದೇಶಿಸಲು ಸಾಕಷ್ಟು ಮಹಾನ್‌ ಸಂಗೀತ ಕಲಾವಿದರಿದ್ದಾರೆ. ಆದರೆ ಈಗ ಅನಿರುದ್ಧ್ ಸಂಗೀತ ನಿರ್ದೇಶಕರಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ-ಪ್ರಭಾಸ್‌ ಜೊತೆ ಪೋಟೋ ತೆಗೆಸಿಕೊಂಡು ಕಪಾಳಮೋಕ್ಷ ಮಾಡಿದ ಅಭಿಮಾನಿ..ಅಷ್ಟಕ್ಕೂ ನಡೆದಿದ್ದಾರೂ ಏನು?


ನಟ ಧನುಷ್ ಅವರ ಸಿನಿಮಾ ಮೂಲಕ ಸಂಗೀತ ಲೋಕಕ್ಕೆ ಕಾಲಿಟ್ಟ ಅನಿರುದ್ಧ್ ‘ಕೊಲವೆರಿ’ ಮೂಲಕ ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅಲ್ಲಿಂದ ಮುಂದೆ ಅನಿರುದ್ಧ್‌ ಹಿಂತಿರುಗಿ ನೋಡಲೇ ಇಲ್ಲ. 


ಆ್ಯಕ್ಷನ್ ಇರಲಿ, ಕಾಮಿಡಿ ಇರಲಿ, ರೊಮ್ಯಾನ್ಸ್ ಇರಲಿ... ಪ್ರತಿ ಹಾಡಿನಲ್ಲೂ ಹೊಸದೊಂದು ಶೈಲಿಯನ್ನು ನೀಡುತ್ತಾ ಟ್ರೆಂಡ್ ಸೆಟ್ ಮಾಡುತ್ತಿರುವ ಅನಿರುದ್ಧ್ ಅನಿರುದ್ಧ್ ದೊಡ್ಡ ನಾಯಕರ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ಅಂತಹ ಸಿನಿಮಾದಲ್ಲಿ ಗೆದ್ದು ಬೀಗಿದ ಜೈಲರ್‌ ಸಹ ಒಂದು. 


ಜೈಲರ್‌ ಸಿನಿಮಾದ ಯಶಸ್ಸಿನ ನಂತರ ಮತ್ತೆ ಅನಿರುದ್ಧ್‌ ಟಿ. ಜೆ. ಜ್ಞಾನವೇಲ್ ನಿರ್ದೇಶನದಲ್ಲಿ ಮೂಡಿಬರಲಿರುವ ತಲೈವರ್ 170 ಸಿನಿಮಾಗೆ ಸಂಗೀತ ನೀಡಲಿದ್ದಾರೆ. ಈಗಾಗಲೇ ಅಬ್ಬರಿಸಿ, ಘರ್ಜಿಸಿದ ಈ ಮಾಸ್‌ ಕಾಂಬೀನೇಷನ್‌ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಕೂತುಹಲದ ಜೊತೆಗೆ ಖುಷಿಯನ್ನು ಹೆಚ್ಚಿಸಿದೆ. 


ಇದನ್ನೂ ಓದಿ-ಶ್ರೀದೇವಿ ಸಾವಿನ ಸತ್ಯ ಬಿಚ್ಚಿಟ್ಟ ಬೋನಿ ಕಪೂರ್.. ಅಸಲಿಗೆ ಅಂದು ಆಗಿದ್ದೇನು ಗೊತ್ತಾ?


ಇನ್ನು ವಿಜಯ್ ಸೇರಿದಂತೆ ಸೂರ್ಯ, ನಯನತಾರಾ, ಕಮಲ್ ಹಾಸನ್ ಮತ್ತು ರಜನಿಕಾಂತ್ ಚಿತ್ರಗಳ ಭಾಗವಾಗಿರುವ ಅನಿರುದ್ಧ್ ಈಗ ದಕ್ಷಿಣ ಭಾರತದ ಬಿಗ್ ಬಜೆಟ್ ಚಿತ್ರಗಳ ಅವಿಭಾಜ್ಯ ಅಂಗವಾಗಿದ್ದಾರೆ. ದೊಡ್ಡ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿ ಅನಿರುದ್ಧ್ ಹೆಸರು ಕೇಳಿಬರುವಂತೆ ಸಂಗೀತ ನೀಡುತ್ತಿದ್ದಾರೆ.


ಸದ್ಯ ಅನಿರುದ್ಧ್ ಅವರ ಕನಸಿನ ಚೊಚ್ಚಲ ಬಾಲಿವುಡ್‌ ಸಿನಿಮಾ ಜವಾನ್‌, ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬಂದು ಸಾವಿರ ಕೋಟಿ ಗಳಿಸಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.