Thalapathy 67 Official Title : ಕುತೂಹಲಕ್ಕೆ ಕಾರಣವಾಗಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ದಳಪತಿ ವಿಜಯ್ ನಟನೆಯ ಚಿತ್ರಕ್ಕೆ ಪೈನಲ್‌ ಆಗಿ ಟೈಟಲ್‌ ಫಿಕ್ಸ್‌ ಆಗಿದೆ. ದಳಪತಿ 67 ಸಿನಿಮಾಗೆ ʼಲಿಯೋʼ ಎಂದು ಹೆಸರಿಡಲಾಗಿದ್ದು, ʼಬ್ಲಡಿ ಸ್ವೀಟ್ʼ ಎಂಬ ಅಡಿ ಬರಹವನ್ನು ಕೊಡಲಾಗಿದೆ. ಈಗಾಗಲೇ ಚಿತ್ರದ ಟೈಟಲ್‌ ಪ್ರೋಮೋ ಮತ್ತು ಟೀಸರ್‌ ಬಿಡುಗಡೆಯಾಗಿದ್ದು, ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಇನ್ನೂ ಟೀಸರ್‌ನಲ್ಲಿ ವಿಜಯ್‌ನನ್ನು ಹುಡುಕಿಕೊಂಡು ಬರುವ ಪೊಲೀಸರ ಗುಂಪು ಮತ್ತು ವಿಜಯ್ ಅವರೊಂದಿಗೆ ಹೋರಾಡಲು ಕತ್ತಿ ಹಿಡಿದು ನಿಂತಿರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೆ ಪ್ರೋಮೋದಲ್ಲಿ ವಿಜಯ್ ಖಡ್ಗವನ್ನು ಬೆಂಕಿಯಲ್ಲಿ ಕಾಯಿಸಿ ಹದ ಮಾಡಿ ಹರಿತ ಮಾಡುತ್ತಿರುವುದರ ಜೊತೆ ಜೊತೆಗೆ ಚಾಕೊಲೇಟ್ ರೆಡಿ ಮಾಡುತ್ತಿರುವುದನ್ನು ತೋರಿಸಲಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಪ್ರೋಮೋ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ದಳಪತಿ 67ನೇ ʼಲಿಯೋʼ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.


ಬಿಗ್‌ ಸಿನಿಮಾ ರೇಂಜ್‌ಗೆ ಟಿವಿ ಶೋ ರಿಲೀಸ್‌... ಆಹಾ..! ಪವನ್‌.. ಬಾಪ್‌ ಕಾ ಬಾಪ್‌..


ಇನ್ನೊಂದು ಇಟ್ರಂಸ್ಟಿಂಗ್‌ ವಿಚಾರ ಎನಪ್ಪಾ ಅಂದ್ರೆ, ಜನಪ್ರಿಯ ನಟಿ ತ್ರಿಶಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ಸ್ಟಾರ್ ಸಂಜಯ್ ದತ್, ಮ್ಯಾಥ್ಯೂ ಥಾಮಸ್, ಅರ್ಜುನ್, ಪ್ರಿಯಾ ಆನಂದ್, ನಿರ್ದೇಶಕರಾದ ಗೌತಮ್ ಮೆನನ್ ಮತ್ತು ಮಲಯಾಳಂನ ಮಿಸ್ಕಿನ್ ಅವರಂತಹ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. 14 ವರ್ಷಗಳ ನಂತರ ತ್ರಿಶಾ ವಿಜಯ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ʼಕುರುವಿʼ ಚಿತ್ರದಲ್ಲಿ ಇವರಿಬ್ಬರು ಕೊನೆಯ ಬಾರಿಗೆ ಒಂದಾಗಿದ್ದರು.


ದಳಪತಿ 67 ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಎಸ್. ಎಸ್. ಲಲಿತ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಲಿಯೋಗೆ ಜಗದೀಶ್ ಪಳನಿಸ್ವಾಮಿ ಸಹ-ನಿರ್ಮಾಣ ಮಾಡಿದ್ದಾರೆ. ಜನವರಿ 2 ರಿಂದ ಮೊದಲ ಹಂತದ ಚಿತ್ರೀಕರಣ ಪ್ರಗತಿಯಲ್ಲಿದೆ ಅಂತ ನಿರ್ಮಾಪಕರು ತಿಳಿಸಿದ್ದಾರೆ. ಅಧಿಕೃತವಾಗಿ ಚಿತ್ರೀಕರಣ ಆರಂಭಿಸುವ ಮುನ್ನವೇ ನೆಟ್‌ಫ್ಲಿಕ್ಸ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.