Unstoppable Pawan kalyan : ಬಿಗ್‌ ಸಿನಿಮಾ ರೇಂಜ್‌ಗೆ ಟಿವಿ ಶೋ ರಿಲೀಸ್‌... ಆಹಾ..! ಪವನ್‌.. ಬಾಪ್‌ ಕಾ ಬಾಪ್‌..

ನಟ-ರಾಜಕಾರಣಿ, ಅಭಿಮಾನಿಗಳಿಂದ ಪವರ್‌ ಸ್ಟಾರ್‌ ಎಂದು ಕರೆಯಿಸಿಕೊಳ್ಳುವ ಪವನ್ ಕಲ್ಯಾಣ್ ಓಟಿಟಿ ಟಾಕ್‌ ಶೋನ ಎಪಿಸೋಡ್‌ ಒಂದು ರಿಲೀಸ್‌ ಆಗಿದ್ದು, ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ. ಬಿಗ್‌ ಬಜೆಟ್‌ ಸಿನಿಮಾ ಬಿಡುಗಡೆ ಮಾಡಿದಾಗ್ಲೂ ಇಷ್ಟು ಹೈಪ್‌ ಇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ, ಆಹಾ ಓಟಿಟಿಯ ಅನ್‌ಸ್ಟಾಪೆಬಲ್‌ 2 ವಿಥ್‌ ಎನ್‌ಬಿಕೆ ಕಾರ್ಯಕ್ರಮ ಪವನ್‌ ಕಲ್ಯಾಣ್‌ ಭಾಗವಹಿಸಿದ್ದ ಸಂಚಿಕೆಯ ಮೊದಲ ಭಾಗ ಸಖತ್‌ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ.

Written by - Krishna N K | Last Updated : Feb 3, 2023, 05:41 PM IST
  • ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಆಹಾ ಓಟಿಟಿ ಟಾಕ್‌ ಶೋನ ಎಪಿಸೋಡ್‌ ರಿಲೀಸ್‌.
  • ಬಿಗ್‌ ಬಜೆಟ್‌ ಸಿನಿಮಾ ಬಿಡುಗಡೆ ಮಾಡಿದಾಗ್ಲೂ ಇಷ್ಟು ಹೈಪ್‌ ಇರುತ್ತೋ ಇಲ್ವೋ ಗೊತ್ತಿಲ್ಲ.
  • ಅನ್‌ಸ್ಟಾಪೆಬಲ್‌ 2 ವಿಥ್‌ ಎನ್‌ಬಿಕೆ ಶೋನ ಮೊದಲ ಭಾಗ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ.
Unstoppable Pawan kalyan : ಬಿಗ್‌ ಸಿನಿಮಾ ರೇಂಜ್‌ಗೆ ಟಿವಿ ಶೋ ರಿಲೀಸ್‌... ಆಹಾ..! ಪವನ್‌.. ಬಾಪ್‌ ಕಾ ಬಾಪ್‌.. title=

Unstoppable 2 Pawan kalyan episode : ನಟ-ರಾಜಕಾರಣಿ, ಅಭಿಮಾನಿಗಳಿಂದ ಪವರ್‌ ಸ್ಟಾರ್‌ ಎಂದು ಕರೆಯಿಸಿಕೊಳ್ಳುವ ಪವನ್ ಕಲ್ಯಾಣ್ ಓಟಿಟಿ ಟಾಕ್‌ ಶೋನ ಎಪಿಸೋಡ್‌ ಒಂದು ರಿಲೀಸ್‌ ಆಗಿದ್ದು, ಇಂಟರ್‌ನೆಟ್‌ನಲ್ಲಿ ಅಬ್ಬರಿಸುತ್ತಿದೆ. ಬಿಗ್‌ ಬಜೆಟ್‌ ಸಿನಿಮಾ ಬಿಡುಗಡೆ ಮಾಡಿದಾಗ್ಲೂ ಇಷ್ಟು ಹೈಪ್‌ ಇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ, ಆಹಾ ಓಟಿಟಿಯ ಅನ್‌ಸ್ಟಾಪೆಬಲ್‌ 2 ವಿಥ್‌ ಎನ್‌ಬಿಕೆ ಕಾರ್ಯಕ್ರಮ ಪವನ್‌ ಕಲ್ಯಾಣ್‌ ಭಾಗವಹಿಸಿದ್ದ ಸಂಚಿಕೆಯ ಮೊದಲ ಭಾಗ ಸಖತ್‌ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ.

ಹೌದು... ಟಿವಿ ಶೋ ಕಾರ್ಯಕ್ರಮಗಳಲ್ಲಿ ಪವರ್‌ ಸ್ಟಾರ್‌ ಕಾಣಿಸಿಕೊಳ್ಳುವುದು ಅಪರೂಪ. ಆದ್ರೆ ಇತ್ತೀಚಿಗೆ ಅವರು, ನಟ, ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಆಹಾ ಓಟಿಟಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಅನ್‌ಸ್ಟಾಪೆಬಲ್‌ 2 ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಆ ಎಪಿಸೋಡ್‌ ನೋಡಲು ಪವನ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಪವರ್‌ ಸ್ಟಾರ್‌ ಜೀವನದ ರಹಸ್ಯ ಮತ್ತು ಅವರ ಕುರಿತ ಇಂಟ್ರಸ್ಟಿಂಗ್‌ ವಿಚಾರ ತಿಳಿಯಲು ಪ್ರೇಕ್ಷಕರು ಸಹ ಕುತೂಹಲ ವೆಟ್‌ ಮಾಡುತ್ತಿದ್ದರು.́

ಇದನ್ನೂ ಓದಿ: ದೋಸ್ತ್‌ಗಳಲ್ಲ.. ದುಶ್ಮನ್‌ಗಳು ಎಷ್ಟಿದಾರೆ ಅಂತ ಗೊತ್ತಾಗ್ತಿದೆ.. ಥೂ..ಥೂ..! 

ಇದೀಗ ಆಹಾ ಒಟಿಟಿಯಲ್ಲಿ ಎನ್‌ಬಿಕೆ ಮತ್ತು ಪವನ್‌ ಕಲ್ಯಾಣ್‌ ಅವರ ಎಪಿಸೋಡ್‌ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಪಡೆದುಕೊಳ್ಳುತ್ತಿದೆ. ಸಂಚಿಕೆಯ ಮೊದಲ ಭಾಗವು ಇಂದು ರಾತ್ರಿ 9 ಗಂಟೆಗೆ ಆಹಾದಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗಿದೆ. ಸಂಚಿಕೆಯು ಸ್ಟ್ರೀಮಿಂಗ್ ಪ್ರಾರಂಭಿಸುವ ಮೊದಲೇ ದಾಖಲೆಯನ್ನು ಸೃಷ್ಟಿಸಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ಪವರ್‌ ಸ್ಟಾರ್‌ ಕೌಟೌಟ್‌ಗಳು ರಾರಾಜಿಸುತ್ತಿದ್ದವು. ವಿಜಯವಾಡದಲ್ಲಿ ಬಾಲಯ್ಯ ಮತ್ತು ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಇಬ್ಬರೂ ತಾರೆಯರಿರುವ ದೈತ್ಯಾಕಾರದ ಕಟ್-ಔಟ್ ನಿರ್ಮಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News