Ramarajan on Rajinikanth : ರಜನಿಕಾಂತ್ ಅವರನ್ನು ಅವರ ಅಭಿಮಾನಿಗಳು ತಮಿಳು ಚಿತ್ರರಂಗದಲ್ಲಿ 'ಸೂಪರ್ ಸ್ಟಾರ್' ಎಂದು ಕರೆಯುತ್ತಾರೆ. ಕಳೆದ ಕೆಲವು ದಿನಗಳಿಂದ ಕೆಲ ಅಭಿಮಾನಿಗಳು ಅವರನ್ನು ನಟ ವಿಜಯ್‌ಗೆ ಹೋಲಿಸಿ ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಖ್ಯಾತ ತಮಿಳು ನಟರೊಬ್ಬರು ಸೇರಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಕಾಲಿವುಡ್ ಮಟ್ಟಿಗೆ ರಜನಿಕಾಂತ್ ನಂ1 ನಟ ಎನಿಸಿಕೊಂಡಿದ್ದಾರೆ. ಅಲ್ಲದೆ, ಸ್ಟಾರ್ ನಟರಾದ ವಿಜಯ್-ಅಜಿತ್ ತಲೈವಾಗೆ ಪ್ರತಿಸ್ಪರ್ಧಿ ನಟರೆಂದು ಹೇಳಲಾಗುತ್ತಿತ್ತು. ಅವರ ಅಭಿಮಾನಿಗಳು ಸಹ ಚಿತ್ರ ಬಿಡುಗಡೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಕಾರಣವಿಲ್ಲದೆ ಜಗಳವಾಡುತ್ತಿದ್ದರು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದ್ದು, ನಟ ವಿಜಯ್ ರಜಿನಿ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ರೂಮರ್ಸ್‌ ಹರಿದಾಡುತ್ತಿದೆ.


ಇದನ್ನೂ ಓದಿ: ಯುಪಿ ಸಿಎಂ ಜೊತೆ ʼಜೈಲರ್‌ʼ ಸಿನಿಮಾ ವೀಕ್ಷಿಸಲಿರುವ ತಲೈವಾ..!


ಇನ್ನು ಇದರಿಂದಾಗಿ ರಜನಿಕಾಂತ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಮೀಮ್‌ಗಳನ್ನು ಪೋಸ್ಟ್ ಮಾಡುವ ಮೂಲಕ ವಿಜಯ್ ಮತ್ತು ಅವರ ಅಭಿಮಾನಿಗಳು ಪರಸ್ಪರ ವಾರ್‌ ನಡೆಸಿದ್ದಾರೆ. ಆದರೆ ವಿಜಯ್ ಮತ್ತು ರಜನಿ ನಡುವೆ ಯಾವುದೇ ವೈಯಕ್ತಿಕ ಸಂಘರ್ಷವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಖ್ಯಾತ ನಟರೊಬ್ಬರು ಸಂದರ್ಶನವೊಂದರಲ್ಲಿ ರಜನಿಕಾಂತ್ ಗಿಂತ ವಿಜಯ್ ದೊಡ್ಡ ವ್ಯಕ್ತಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


ರಾಮರಾಜನ್ 70 ಮತ್ತು 80 ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಾಯಕರಾಗಿದ್ದರು. ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು ಕೆಲ ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದರು. ಇದೀಗ ಸುದೀರ್ಘ ವಿರಾಮದ ನಂತರ ‘ಸಾಮಾನಿಯನ್’ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು ರಜನಿ ಮತ್ತು ವಿಜಯ್ ಬಗ್ಗೆ ಮಾತನಾಡಿದ್ದರು. 


ಇದನ್ನೂ ಓದಿ: 'Supplier ಶಂಕರ' ಅವತಾರದಲ್ಲಿ ಗಂಟುಮೂಟೆ ಹೀರೋ ʼನಿಶ್ಚಿತ್ ಕೊರೋಡಿʼ..!


ರಾಮರಾಜನ್ ಭಾಗವಹಿಸಿದ್ದ ಸಂದರ್ಶನದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಜೈಲರ್’ ಚಿತ್ರದ ಬಗ್ಗೆ ಮಾತನಾಡಿದರು. ಆ ವೇಳೆ ತಾವು ಇನ್ನೂ ಸಿನಿಮಾ ನೋಡಿಲ್ಲ, ಈ ವಯಸ್ಸಿನಲ್ಲೂ ರಜನಿಕಾಂತ್ ಈ ರೀತಿ ನಟಿಸುತ್ತಿರುವುದು ಸಂತಸದ ಸಂಗತಿ ಎಂದಿದ್ದರು. ಇದೇ ವೇಳೆ ವಿಜಯ್‌ ಮತ್ತು ರಜಿನಿ ಕುರಿತು ಹೇಳಿಕೆ ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.