ಯುಪಿ ಸಿಎಂ ಜೊತೆ ʼಜೈಲರ್‌ʼ ಸಿನಿಮಾ ವೀಕ್ಷಿಸಲಿರುವ ತಲೈವಾ..!

Rajinikanth Jailer movie : ಸೂಪರ್ ಸ್ಟಾರ್ ರಜನಿಕಾಂತ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ 'ಜೈಲರ್' ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದೆ.

Written by - Krishna N K | Last Updated : Aug 19, 2023, 11:14 AM IST
  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಜೈಲರ್' ಸಿನಿಮಾ ವೀಕ್ಷಿಸಲಿದ್ದಾರೆ.
  • ನಟ ರಜನಿಕಾಂತ್ ನಟನೆಯ ಜೈಲರ್‌ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಸಿಎಂ ಯೋಗಿ ಜೊತೆಗೆ ರಜಿನಿಕಾಂತ್‌ ಜೊತೆ ಜೈಲರ್‌ ಸಿನಿಮಾ ನೋಡಲಿದ್ದಾರೆ.
ಯುಪಿ ಸಿಎಂ ಜೊತೆ ʼಜೈಲರ್‌ʼ ಸಿನಿಮಾ ವೀಕ್ಷಿಸಲಿರುವ ತಲೈವಾ..! title=

Yogi adityanath : ಸೂಪರ್ ಸ್ಟಾರ್ ರಜನಿಕಾಂತ್ ʼಜೈಲರ್ʼ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ತಲೈವಾ ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ತಮ್ಮ ಚಲನಚಿತ್ರವನ್ನು ನೋಡುವುದಾಗಿ ತಿಳಿಸಿದ್ದಾರೆ.

ಹೌದು.. ರಜನಿಕಾಂತ್ ಅವರು ಶುಕ್ರವಾರ ಜಾರ್ಖಂಡ್‌ನ ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಜೊತೆ ಜೈಲರ್‌ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ವೇದಿಕೆ ಮೇಲೆ ಸೀರೆ ಬಿಚ್ಚಿದ ನಟಿ..ಇಂತಹ ಕೀಳು ಮಟ್ಟದ ಪ್ರಚಾರ ಬೇಕಿತ್ತಾ ಎಂದ ನೆಟಿಜನ್ಸ್‌!

ರಜನಿಕಾಂತ್ ಈ ಹಿಂದೆ ಬದರಿನಾಥ್ ಧಾಮಕ್ಕೆ ತೆರಳಿದ್ದರು. ʼಜೈಲರ್' ಚಿತ್ರದ ಬಿಡುಗಡೆಗೂ ಮುನ್ನ ಹಿಮಾಲಯಕ್ಕೆ ಪ್ರಯಾಣ ಬೆಳೆಸಿದ್ದರು. ಹಿಮಾಲಯಕ್ಕೆ ಆಗಾಗ್ಗೆ ಪ್ರಯಾಣಿಸುತ್ತಿದ್ದುದನ್ನು ಹಲವಾರು ಸಂದರ್ಭಗಳಲ್ಲಿ ರಜಿನಿ ತಿಳಿಸಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ, ಕರೋನಾ ಸಾಂಕ್ರಾಮಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು..

ಇನ್ನು ಗುರುವಾರ, ಸನ್ ಪಿಕ್ಚರ್ಸ್ ಚಿತ್ರದ ಒಟ್ಟು ಒಟ್ಟು ಕಲೆಕ್ಷನ್ ಕುರಿತು ಮಾಹಿತಿ ಹಂಚಿಕೊಂಡಿತ್ತು, ತಮಿಳು ಚಿತ್ರರಂಗದ ಇತಿಹಾಸದಲ್ಲಿ ಜೈಲರ್ 1ನೇ ವಾರದಲ್ಲಿ ಒಟ್ಟು 375.40 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ ಎಂದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಎಲ್ಲೆಡೆ ಆರ್ಭಟಿಸುತ್ತಿರುವ ಜೈಲರ್ ಅಲ್ಲಿ ಮಾತ್ರ ಗಪ್‌ಚುಪ್...ಕಾರಣ?

ಜೈಲರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ತಂದೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಮೋಹನ್, ಶಿವ ರಾಜ್‌ಕುಮಾರ್, ಮೋಹನ್‌ ಲಾಲ್‌, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ, ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News