Thalapathy Vijay: ದಳಪತಿ` ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ ಉಡುಗೊರೆ..!
Thalapathy Vijay Birthday: ದಳಪತಿ` ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ ಚಿತ್ರತಂಡವು ಉಡುಗೊರೆ ನೀಡಿದೆ. ‘ಲಿಯೋ’ ಚಿತ್ರದ ಫಸ್ಟ್ ಲುಕ್ ಮತ್ತು `ನಾ ರೆಡಿ` ಹಾಡಿನ ಪ್ರೋಮೋ ಬಿಡುಗಡೆ ಮಾಡುವ ಮೂಲಕ ದಳಪತಿ` ಬರ್ತಡೆಗೆ ಇನ್ನಷ್ಟು ಮೆರೆಗು ತಂದಿದ್ದಾರೆ.
ಬೆಂಗಳೂರು: ದಳಪತಿ' ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಲಿಯೋ’ ಚಿತ್ರತಂಡವು ಉಡುಗೊರೆ ನೀಡಿದೆ. ‘ಲಿಯೋ’ ಚಿತ್ರದ ಫಸ್ಟ್ ಲುಕ್ ಮತ್ತು "ನಾ ರೆಡಿ" ಹಾಡಿನ ಪ್ರೋಮೋ ಬಿಡುಗಡೆ ಮಾಡುವ ಮೂಲಕ ದಳಪತಿ' ಬರ್ತಡೆಗೆ ಇನ್ನಷ್ಟು ಮೆರೆಗು ತಂದಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಚಿತ್ರದಲ್ಲಿ ವಿಜಯ್ ಜೋಡಿಯಾಗಿ ತ್ರಿಷಾ ಕೃಷ್ಣನ್ ನಟಿಸುತ್ತಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಮೂಡಿದ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Bharjari Bachelors: ʼಭರ್ಜರಿ ಬ್ಯಾಚುಲರ್ಸ್ʼ ಗಳಿಗೆ ʼಪ್ರೀತಿ ಪಾಠ ಹೇಳಲುʼ ರೆಡಿಯಾದ ಕರುನಾಡ ಕ್ರೇಜಿ ಸ್ಟಾರ್..!
ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮತ್ತು ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ. ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ವಿಜಯ್, ‘ಲಿಯೋ’ ಎಂಬ ಇನ್ನೊಂದು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು ಕೆಲವು ತಿಂಗಳುಗಳ ಹಿಂದೆ ಚೆನ್ನೈನಲ್ಲಿ ಪ್ರಾರಂಭವಾಗಿತ್ತು.
ಆದರೆ, ಇದುವರೆಗೂ ಚಿತ್ರತಂಡದವರು ಚಿತ್ರದಲ್ಲಿ ವಿಜಯ್ ಅವರ ಪಾತ್ರವೇನು? ಅಥವಾ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ ಇಂದು ಬಿಡುಗಡೆ ಮಾಡಿದ ಚಿತ್ರದ ಪೋಸ್ಟರ್ ಮತ್ತು ಪ್ರೋಮೋ ನೋಡಿದ ವಿಜಯ್ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಿದೆ.
ಇದನ್ನೂ ಓದಿ: Actor Ganesh: ಯೋಗ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ರ್ ಹಂಚಿಕೊಳ್ಳುವ ಮೂಲಕ ಶುಭ ಕೋರಿದ ನಟ ಗಣೇಶ್..!
‘ನಾ ರೆಡಿದಾ ವರವಾ’ ಎಂಬ ಹಾಡನ್ನು ಸ್ವತಃ ವಿಜಯ್ ಹಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ವಿಷ್ಣು ಎಡವನ್ ಬರೆದಿರುವ ಈ ಹಾಡಿನ ಪ್ರೋಮೊ ಸೋನಿ ಮ್ಯೂಸಿಕ್ ಸೌಥ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ಕೂಡ ಬಿಡುಗಡೆಯಾಗಲಿದೆ. ಇನ್ನು ಚಿತ್ರವು ಲಿಯೋ’ ಚಿತ್ರವು ಅಕ್ಟೋಬರ್ 19ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.