ನಟ ಸಲ್ಮಾನ್ ಖಾನ್`ಗೆ ಜಾಮೀನು ಮಂಜೂರು
ಜೋಧಪುರ ಸೆಷನ್ಸ್ ಕೋರ್ಟ್ ನಿಂದ ತೀರ್ಪು.
ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಎರಡು ದಿನಗಳಿಂದ ಜೈಲಿನಲ್ಲಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೋಧಪುರ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರಾಜಸ್ಥಾನದ ಜೋಧಪುರದಲ್ಲಿರುವ ಸೆಷನ್ಸ್ ಕೋರ್ಟ್ ನಲ್ಲಿ ನ್ಯಾಯಾಧೀಶ ರವೀಂದ್ರ ಜೋಶಿ ಅವರಿದ್ದ ನ್ಯಾಯಪೀಠವು ಕಳೆದ ಗುರುವಾರ ಸಿಜೆಎಂ ಕೋರ್ಟ್ ನೀಡಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, 50 ಸಾವಿರ ಮೌಲ್ಯದ ಬಾಂಡ್ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ.