The Great Indian Kapil Show: ಹಾಸ್ಯನಟ ಕಪಿಲ್ ಶರ್ಮಾ ಅವರ ಶೋ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಎರಡು ತಿಂಗಳ ಹಿಂದೆ ಹೊಸದಾಗಿ ಅಂದರೆ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಾರಂಭವಾಯಿತು. ಎಂದಿನಂತೆ, ಕಪಿಲ್ ಮತ್ತು ಅವರ ತಂಡವು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿತು. ಈ ಕಾಮಿಡಿ ಶೋಗೆ ವಿಶ್ವಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಇದೀಗ ಈ ಶೋಗೆ ಸಂಬಂಧಿಸಿದ ಶಾಕಿಂಗ್ ಸುದ್ದಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ಕಪಿಲ್ ಶರ್ಮಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಇದೆ. ವಾಸ್ತವವಾಗಿ, 192 ದೇಶಗಳಲ್ಲಿ ಪ್ರಸಾರವಾಗುತ್ತಿರುವ ಹಾಸ್ಯನಟನ ಜನಪ್ರಿಯ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಅದರ ಪ್ರಥಮ ಪ್ರದರ್ಶನದ ಎರಡು ತಿಂಗಳೊಳಗೆ ಮುಚ್ಚಲಿದೆ. ಕಾರ್ಯಕ್ರಮದ ಕೊನೆಯ ಸಂಚಿಕೆ ಇದೇ ಶನಿವಾರ ಪ್ರಸಾರವಾಗಲಿದೆ.


ಇದನ್ನೂ ಓದಿ-ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಸೆನ್ಸೇಷನಲ್‌ ಕಾಮೆಂಟ್!!


ಗುರುವಾರ, ಕಾರ್ಯಕ್ರಮದ ತೀರ್ಪುಗಾರ ಅರ್ಚನಾ ಪುರಾನ್ ಸಿಂಗ್ ಅವರು ತಮ್ಮ ಇನ್ಸ್ಟಾಗ್ರಾಮ್ ಕಥೆಗಳಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಸೆಟ್‌ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಸೀಸನ್‌ ಮುಗಿದಿದೆ ಎಂದು ಶಿರ್ಷಿಕೆ ನೀಡಲಾಗಿದೆ.. ಇಷ್ಟೇ ಅಲ್ಲದೇ ಮಾದ್ಯಮದೊಂದಿಗೆ ಮಾತನಾಡುವಾಗ ಅರ್ಚನಾ ಕೂಡ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಈ ಸೀಸನ್‌ನ ಕೊನೆಯ ಸಂಚಿಕೆಯನ್ನು ಚಿತ್ರೀಕರಿಸಿದ್ದೇವೆ" ಎಂದಿದ್ದರು.. 


ಇದನ್ನೂ ಓದಿ-ನಾನು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ : ದೊಡ್ಮನೆ ಮರ್ಯಾದೆ ಕಳಿಬೇಡಿ ಶಿವಣ್ಣ ಎಂದ ನೆಟ್ಟಿಗರು


ಸದ್ಯ ಇನ್ನೆರಡು ತಿಂಗಳಲ್ಲಿ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕ್ಲೋಸ್ ಆಗಲಿದೆ ಎಂಬ ಸುದ್ದಿಯಿಂದ ಎಲ್ಲರೂ ಶಾಕ್ ಆಗಿದ್ದಾರೆ. ಕಪಿಲ್ ಶರ್ಮಾ ಅವರ ಶೋ ಇಷ್ಟು ಬೇಗ ಮುಚ್ಚುತ್ತಿರುವುದು ಇದೇ ಮೊದಲು.


ಆದರೆ, ಇದೀಗ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಏಕೆ ಕ್ಲೋಸ್‌ ಮಾಡಲಾಗುತ್ತಿದೆ ಎಂಬುದನ್ನು ಕಾರ್ಯಕ್ರಮದ ಕಲಾವಿದೆ ಕಿಕು ಶಾರದಾ ಬಹಿರಂಗಪಡಿಸಿದ್ದಾರೆ. ಇದು ತಾತ್ಕಾಲಿಕ ಸುತ್ತು ಶೀಘ್ರದಲ್ಲೇ ಮತ್ತೊಂದು ಸೀಸನ್‌ ಬರಲಿದೆ ಎಂದು ಹೇಳಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.