ನಾನು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ : ದೊಡ್ಮನೆ ಮರ್ಯಾದೆ ಕಳಿಬೇಡಿ ಶಿವಣ್ಣ ಎಂದ ನೆಟ್ಟಿಗರು

ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್​​​​ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್. ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವನು ದೇಶದಲ್ಲಿ ಚನ್ನಾಗಿ ಆಳುತ್ತಾನೆ ಎಂದು ಶಿವಣ್ಣ ಹಾಡಿ ಹೊಗಳಿದ್ದಾರೆ..

Written by - Krishna N K | Last Updated : May 3, 2024, 04:17 PM IST
    • ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಚಾರ
    • ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿಯವರನ್ನು ಹಾಡಿ ಹೊಗಳಿದ ಶಿವಣ್ಣ
    • ನಾನು ರಾಹುಲ್‌ ಗಾಂಧಿ ಪಕ್ಕಾ ಅಭಿಮಾನಿ ಎಂದ ಡಾ. ಶಿವರಾಜ್‌ಕುಮಾರ್‌
ನಾನು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ : ದೊಡ್ಮನೆ ಮರ್ಯಾದೆ ಕಳಿಬೇಡಿ ಶಿವಣ್ಣ ಎಂದ ನೆಟ್ಟಿಗರು title=

Shivarajkumar on Rahul Gandhi : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ ತಾವು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ.

ಹೌದು.. ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್​​​​ ಸಮಾವೇಶದಲ್ಲಿ ನಟ ಶಿವ ರಾಜ್​​​ಕುಮಾರ್​​​ ಅವರು ರಾಹುಲ್​​​ ಗಾಂಧಿ ಅವರನ್ನು ಹಾಡಿ ಹೋಗಳಿದ್ದಾರೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕಾರಣವನ್ನೂ ಸಹ ತಿಳಿಸಿದ್ದಾರೆ. 

ಇದನ್ನೂ ಓದಿ: ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!

ಸಮಾವೇಶದಲ್ಲಿ ಮಾತನಾಡಿದ ನಟ ಶಿವರಾಜ್​​​ ಕುಮಾರ್​​​, ಈ ದಿನ ನನಗೆ ತುಂಬಾ ಸಂತೋಷವಾಗುತ್ತಿದೆ. ಇಂತಹ ಮಹಾನಾಯಕರ ಜತೆಗೆ ವೇದಿಕೆಯನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ನಾನು ರಾಹುಲ್​​ ಗಾಂಧಿ ಅವರ ದೊಡ್ಡ ಅಭಿಮಾನಿ, ಅವರ ಫಿಟ್ನೆಸ್​​​​ಗೆ, ಅವರ ಮನುಷ್ಯತ್ವಕ್ಕೆ ನಾನು ಫ್ಯಾನ್ ಎಂದು. ಯಾವ ಮನುಷ್ಯ ಫಿಟ್​​​ ಆಗಿರುತ್ತಾನೋ ಅವನು ದೇಶದಲ್ಲಿ ಸ್ಟ್ರೀಟ್​​​ ಆಗಿರುತ್ತಾನೆ ಎಂದು ಶಿವಣ್ಣ.

ಇದೀಗ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಶಿವಣ್ಣ ಮಾತಿಗೆ ಕೆಲ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ರಾಜ ಮನೆನತನಕ್ಕೆ ಇದು ಸರಿಯಲ್ಲ ಶಿವಣ್ಣ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News